ಬೆಂಗಳೂರು : ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಹಲವು ತಗ್ಗು ಪ್ರದೇಶಗಳಿಗೆ ಮಳೆನೀರು ನುಗ್ಗಿದೆ. ಆಯುಕ್ತರಾದ ಮಂಜುನಾಥ್ ಪ್ರಸಾದ್, ನಾಗಶೆಟ್ಟಿಹಳ್ಳಿಗೆ ಭೇಟಿ ನೀಡಿ ಪರಿಶೀಲಿಸಿದರು. ರಾಜಕಾಲುವೆ ನೀರು ಉಕ್ಕಿ ಹರಿದಿದೆ. ಒಳಚರಂಡಿ ನೀರು ಅಪಾರ್ಟ್‌ಮೆಂಟ್‌ಗಳ ಪಾರ್ಕಿಂಗ್ ಜಾಗಕ್ಕೆ ನುಗ್ಗಿದೆ. ಆದಷ್ಟು ಬೇಗ ತೆರವು ಮಾಡಲು ಕ್ರಮ ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದರು.
ದಾಸರಹಳ್ಳಿ ವಲಯದಲ್ಲಿ ನಿನ್ನೆ ಸುರಿದ ಮಳೆಗೆ ಮರಗಳು ಧರೆಗೆ ಉರುಳಿದ್ದು, ತೆರವು ಕಾರ್ಯ ನಡೆದಿದೆ. ಇದೇ ವಲಯದ ರುಕ್ಮಿಣಿ ನಗರದಲ್ಲಿ ರಸ್ತೆಯಲ್ಲಿ ಶೇಖರಣೆಯಾಗಿರುವ ಮಣ್ಣು, ಕೆಸರನ್ನು ತೆರವು ಮಾಡಲಾಗುತ್ತಿದೆ. ವಾರ್ಡ್ 18, ರಾಧಾಕೃಷ್ಣ ದೇವಸ್ಥಾನ ವಾರ್ಡ್‌ನಲ್ಲಿ ಬಿಬಿಎಂಪಿ ಪಾರ್ಕ್‌ಗಳಿಗೆ ನೀರು ನುಗ್ಗಿರುವ ಕಡೆ ಆಯುಕ್ತರು ಭೇಟಿ ನೀಡಿ ಪರಿಶೀಲಿಸಿದರು.
ಬಿಬಿಎಂಪಿ ಮೇಯರ್ ಗೌತಮ್‌ಕುಮಾರ್ ಮಾತನಾಡಿ, ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ವಿವಿಧೆಡೆಯಲ್ಲಿನ ಸುಮಾರು 200 ಮನೆಗೆ ನೀರು ನುಗ್ಗಿದೆ. ಇವತ್ತೂ ಕೂಡ ಭಾರೀ ಮಳೆ ಸಾಧ್ಯತೆಯಿದೆ. ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾನಿಗೊಳಗಾದ ಸ್ಥಳಗಳಿಗೆ ನಾನೂ ವಿಸಿಟ್ ಕೊಟ್ಟಿದ್ದೇನೆ.
ಮಳೆಯಿಂದ ತೊಂದರೆಗೀಡಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಸಾಗುತ್ತಿದೆ. ಆಯುಕ್ತರು ಹಾಗೂ ರಾಜಕಾಲುವೆ ಚೀಫ್ ಇಂಜಿನಿಯರ್ ಪ್ರಹ್ಲಾದ್ ಭೇಟಿ ನೀಡಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.