ಬೆಂಗಳೂರು: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಭದ್ರತೆ ದೃಷ್ಟಿಯಿಂದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರಿಂದು ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾವಲ್ ಭೈರಸಂದ್ರ, ಮೋದಿ ರಸ್ತೆ, ಶ್ಯಾಂಪುರ ಮುಖ್ಯ ರಸ್ತೆ, ಟ್ಯಾನರಿ ರಸ್ತೆ ಸೇರಿ ವಿವಿಧ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಭದ್ರತೆಯ ಕುರಿತು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಚುನಾವಣಾ ಅಕ್ರಮ ತಡೆಗಾಗಿ ತೆರೆದಿರುವ ಚೆಕ್‌ಪೋಸ್ಟ್‌ಗಳಿಗೂ ಭೇಟಿ ನೀಡಿದರು. ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಿ ದಾಖಲೆಗಳಿಲ್ಲದ ಹಣ ಹಾಗೂ ಇತರೆ ವಸ್ತುಗಳ ಸಾಗಾಟ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ವಶಪಡಿಸಿಕೊಳ್ಳುವಂತೆ ಕರ್ತವ್ಯನಿರತ ಸಿಬ್ಬಂದಿಗೆ ಸೂಚಿಸಿದರು. ಪೂರ್ವವಲಯದ ಹೆಚ್ಚುವರಿ ಆಯುಕ್ತ ಚಂದ್ರಶೇಖರ್, ಡಿಸಿಪಿ ಭೀಮಾಶಂಕರ್ ಗುಳೇದ್ ಇತರೆ ಅಧಿಕಾರಿಗಳು ಜೊತೆಗಿದ್ದರು.
ಇದನ್ನೂ ಓದಿ: 'ಕೆಜೆ ಹಳ್ಳಿ, ಡಿಜೆ ಹಳ್ಳಿ ಘಟನೆಗೂ ಹುಬ್ಬಳ್ಳಿ ಘಟನೆಗೂ ಸಾಮ್ಯತೆ ಇದೆ'
ಅವಹೇಳನಕಾರಿಯಾಗಿ ಪೋಸ್ಟ್: ನಗರ ಪೊಲೀಸ್ ಇತಿಹಾಸದಲ್ಲಿ ಕಂಡು ಕೇಳರಿಯದಂತೆ ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಗಲಭೆ ಕೆಲ ವರ್ಷಗಳ ಹಿಂದೆ ನಡೆದಿತ್ತು. ಅನ್ಯ ಧರ್ಮದ ಪ್ರವಾದಿ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದನ್ನು ಖಂಡಿಸಿ ಆರಂಭಗೊಂಡ ಆಕ್ರೋಶ, ಕಾವಲ್ ಭೈರಸಂದ್ರದಲ್ಲಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಡುವಷ್ಟರ ಮಟ್ಟಕ್ಕೆ ಹೋಗಿತ್ತು.
ಇದನ್ನೂ ಓದಿ: ಲೂಧಿಯಾನದಲ್ಲಿ ಅನಿಲ ಸೋರಿಕೆ: ಇಬ್ಬರು ಮಕ್ಕಳು ಸೇರಿದಂತೆ 11 ಮಂದಿ ಸಾವು
ಈ ಬಗ್ಗೆ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು (ಆಗಸ್ಟ್ 11-2021)ರಂದು ಮಾತನಾಡಿ, ಇಂದಿಗೆ ನಮ್ಮ ಮನೆಗೆ ಹಾಗೂ ಪೊಲೀಸ್ ಠಾಣೆಗೆ ಬೆಂಕಿ ಇಟ್ಟು ಒಂದು ವರ್ಷ ಆಗಿದೆ. ಈ ವಿಚಾರದಲ್ಲಿ ತೀವ್ರ ನೋವು ಅನುಭವಿಸಿದ್ದೇನೆ. ಘಟನೆಯಲ್ಲಿ ಭಾಗಿಯಾದ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಕಾನೂನು ಮೂಲಕ ನ್ಯಾಯ ಸಿಕ್ಕಿದೆ. ಆದರೆ ನಮ್ಮ ಪಕ್ಷದಿಂದ ನ್ಯಾಯ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್ ರಾಜ್ ಜೈಲಿಂದ ಬಿಡುಗಡೆ
ಡಿಜೆ ಹಳ್ಳಿ ಗಲಭೆಗೆ ಒಂದು ವರ್ಷ: ಕಾನೂನಿಂದ ನ್ಯಾಯ ಸಿಕ್ಕರೂ, ಕಾಂಗ್ರೆಸ್ನಿಂದ ಸಿಕ್ಕಿಲ್ಲ ಎಂದು ಶಾಸಕ ಅಖಂಡ ಬೇಸರ