ETV Bharat / state

Exclusive: ಬೆಂಗಳೂರು ಗಲಭೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ... ಕಮಲ್ ಪಂತ್ ಖಡಕ್​ ಮಾತು

ದುಷ್ಕೃತ್ಯಕ್ಕೆ ಸಂಚು ನಡೆಯುವ ಎರಡು ದಿನಗಳ ಮುನ್ನವೇ ಇಂಟಲಿಜೆನ್ಸ್​​ಗೆ ‌ಮಾಹಿತಿ ಗೊತ್ತಾಗುತ್ತೆ. ಇದೆಲ್ಲಾ ಲೈವ್ ಆಗಿ ನಡೆದಿರುವ ಘಟನೆ. ಸದ್ಯ ಹಣ ಹಂಚಿಕೆ ಕುರಿತು ನಮಗೆ ಮಾಹಿತಿ ಇಲ್ಲ. ಹಾಗೆ ನವೀನ್ ಬಗ್ಗೆ ಈ ಹಿಂದೆ ದೂರು ಕೊಟ್ಟಿದ್ದಾರೆ ಎನ್ನುವ ಮಾಹಿತಿ ಇಲ್ಲ. ಹೀಗಂತ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಅವರು 'ಈಟಿವಿ ಭಾರತ'ಕ್ಕೆ ನೀಡಿದ ಎಕ್ಸ್​​ಕ್ಲೂಸಿವ್​ ಸಂದರ್ಶನದಲ್ಲಿ ತಿಳಿಸಿದ್ದಾರೆ.

Exclusive chitchat with commissioner Kamal pant
Exclusive: ’ಇದು ಲೈವ್ ಆಗಿ ನಡೆದಿರುವ ಘಟನೆ’...ಬೆಂಗಳೂರು ಗಲಭೆ ಕುರಿತು ಕಮಲ್ ಪಂತ್ ಮಾತು
author img

By

Published : Aug 13, 2020, 7:26 PM IST

Updated : Aug 13, 2020, 8:14 PM IST

ಬೆಂಗಳೂರು: ಡಿ ಜೆ ಹಳ್ಳಿ, ಕೆ ಜಿ‌ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಈಟಿವಿ ಭಾರತ’ದೊಂದಿಗೆ ಎಕ್ಸ್​​ಕ್ಲೂಸಿವ್​ ಆಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​​ ಅವರು ಮಾತಾಡಿದ್ದಾರೆ.

ಘಟನೆ ಕುರಿತು ಈಟಿವಿ ಭಾರತ್​​​ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯೆ

ನಡೆಯಬಾರದಂತಹ ಘಟನೆ ನಡೆದಿದೆ. ಇದು ಸಮರ್ಥನೆ ಮಾಡುವಂತಹ ಪ್ರಕರಣ ಅಲ್ಲ. ಪೋಸ್ಟ್ ಬಗ್ಗೆ ದೂರು ಕೊಟ್ಟಿದ್ರೆ ಸಾಕಿತ್ತು. ಪೊಲೀಸ್ ವಾಹನ, ಸಿಬ್ಬಂದಿ ಮೇಲೆ ಹಲ್ಲೆ ಮಾಡಬಾರದಿತ್ತು. ಕೊರೊನಾ ಸಂದರ್ಭದಲ್ಲಿ ಸಿಬ್ಬಂದಿ ಬಳಸಿಕೊಂಡು ಪ್ರಕರಣ ನಿಭಾಯಿಸೋದು ತೀರಾ ಕಷ್ಟ. ಆದರೆ ನಮ್ಮ ಪೊಲೀಸ್ ಇಲಾಖೆ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.

ಆರೋಪಿಗಳು ಏನೇ ಹೇಳಲಿ, ನಮ್ಮ ಬಳಿ FSL ರಿಪೋರ್ಟ್ ಇದ್ದು, ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ತೇವೆ ಎಂದು ಖಡಕ್​ ಆಗಿ ಹೇಳಿದ್ದಾರೆ.

ಏನೇ ದುಷ್ಕೃತ್ಯಕ್ಕೆ ಸಂಚು ನಡೆಯುವ ಎರಡು ದಿನಗಳ ಮುನ್ನವೇ ಇಂಟಲಿಜೆನ್ಸ್​​ಗೆ ‌ಮಾಹಿತಿ ಗೊತ್ತಾಗುತ್ತೆ. ಇದೆಲ್ಲಾ ಲೈವ್ ಆಗಿ ನಡೆದಿರುವ ಘಟನೆ. ಸದ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾದ ಹಣ ಹಂಚಿಕೆ ಕುರಿತು ನಮಗೆ ಗೊತ್ತಾಗಿಲ್ಲ. ಹಾಗೆ ನವೀನ್ ಬಗ್ಗೆ ಈ ಹಿಂದೆ ದೂರು ಕೊಟ್ಟಿದ್ದಾರೆ ಎನ್ನುವ ಮಾಹಿತಿಯೂ ನನಗಿಲ್ಲ ಎಂದು ಕಮಲ್​ ಪಂತ್​ ಸ್ಪಷ್ಟಪಡಿಸಿದ್ದಾರೆ.

Last Updated : Aug 13, 2020, 8:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.