ETV Bharat / state

ಸದನದಲ್ಲಿ ವರ್ಗಾವಣೆ ಕಮಿಷನ್ ರೇಟ್ ಕಾರ್ಡ್ ಕಾದಾಟ: ಆರೋಪ ಸುಳ್ಳು ಎಂದ ಸಿಎಂ, ತನಿಖೆಗೆ ಹೆಚ್​ಡಿಕೆ ಆಗ್ರಹ - ವರ್ಗಾವಣೆ ಕಮಿಷನ್

ನಾನು ಸಿಎಂ ಆಗಿದ್ದಾಗ ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ. ಬೇಕಿದ್ದರೆ ನಮ್ಮ ಕಾಲದಲ್ಲಿ ಯಾವುದಾದರೂ ಅಕ್ರಮ ಆಗಿದ್ದರೆ ತನಿಖೆ ಮಾಡಿಸಿಕೊಳ್ಳಲಿ ಎಂದು ಕಮಿಷನ್ ರೇಟ್ ಕಾರ್ಡ್ ಚರ್ಚೆ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿ
commission rate card
author img

By

Published : Jul 14, 2023, 7:19 AM IST

ಬೆಂಗಳೂರು: ಸದನದಲ್ಲಿ ವರ್ಗಾವಣೆ ಕಮಿಷನ್ ರೇಟ್ ಕಾರ್ಡ್ ಸದ್ದು ಮಾಡಿತು. ವಿಷಯ ಪ್ರಸ್ತಾಪ ಮಾಡಿದ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪ ಮಾಡಿದ್ರು ಅಂತ ಸದನದಲ್ಲಿ ಪತ್ರ ತೋರಿಸಿದ್ರು. ಆದ್ರೆ, ಆ ಪತ್ರ ನಮಗೆ ಕೊಡದೇ ಅವರೇ ತಗೊಂಡು ಹೋದ್ರು ಎಂದು ಟಾಂಗ್ ನೀಡಿದರು.

ನಮ್ಮ ಮೇಲೆ ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪ ಮಾಡಿದ್ದಾರೆ. ಆದರೆ, ಅದು ಸುಳ್ಳು, ಯಾವುದೇ ವರ್ಗಾವಣೆ ದಂಧೆ ನಡೆಯುತ್ತಿಲ್ಲ. ಪತ್ರಿಕೆಯಲ್ಲಿ ಹೆಚ್​ಡಿಕೆ ಪತ್ರ ಕೊಟ್ಟಿದ್ದಾರೆ ಅಂತ ಬಂದಿದೆ. ಆದ್ರೆ, ನಮಗೆ ಕೊಡಲೇ ಇಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನೀವು ಕೇಳಲೇ ಇಲ್ಲವಲ್ಲ. ನೀವು ಕೇಳಿದ್ದರೆ ಕೊಡುತ್ತಿದೆ, ಪತ್ರಿಕೆಯಲ್ಲಿ ಬಂದಿರುವುದಕ್ಕೆ ನಾನು ಜವಾಬ್ದಾರಿ ಅಲ್ಲ ಎಂದರು.

ಇದೇ ವೇಳೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಕಳೆದ 2018 ರಲ್ಲಿಯೇ ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೇಟ್ ಕಾರ್ಡ್ ಬಂದಿತ್ತು. ಸುಮ್ನೆ ಆರೋಪ ಮಾಡಬೇಕು ಅಂತ ಮಾಡುತ್ತಿದ್ದೀರಿ. ನೀವು ಮಾಡಿದ ಆರೋಪದ ಬಗ್ಗೆ ದಾಖಲೆ ಇದ್ರೆ ಕೊಡಿ. ದಾಖಲೆ ಕೊಟ್ರೆ ನಮ್ಮ ಸಿಎಂ ತನಿಖೆ ಮಾಡ್ತಾರೆ ಎಂದು ತಿಳಿಸಿದರು.

ಈ ರೇಟ್ ಕಾರ್ಡ್ ನಮ್ಮ ಇಲಾಖೆ ಫಿಕ್ಸ್ ಮಾಡಿಲ್ಲ. ಅವರು ಸಿಎಂ ಆಗಿದ್ದಾಗಲೇ ಅವರ ಮಾಹಿತಿ ಈಗ ಹೇಳ್ತಿದ್ದಾರೆ. ಐಎಂಎ ಹಗರಣದಲ್ಲಿ ವಿಜಯ ಶಂಕರ್ ಅಂತಹ ಆಫೀಸರ್ ಆತ್ಮಹತ್ಯೆ ಮಾಡಿಕೊಂಡರು. ಆಗ ಕುಮಾರಸ್ವಾಮಿಯವರೇ ಸಿಎಂ ಆಗಿದ್ದರು. ಒಂದೂವರೆ ತಿಂಗಳಿಗೆ ತಡೆಯೋಕ್ಕಾಗದೇ ಆರೋಪ ಮಾಡೋದು ಸರಿಯಲ್ಲ. ಸುಮ್ಮನೆ ತೇಜೋವಧೆ ಮಾಡುವುದು ಸರಿಯಲ್ಲ. ಒಬ್ಬ ಕೆಎಎಸ್ ಅಧಿಕಾರಿಯನ್ನು ಒಂದೇ ವರ್ಷದಲ್ಲಿ ಏಳು ಬಾರಿ ವರ್ಗ ಮಾಡಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಏಳು ಬಾರಿ ಒಂದೇ ವರ್ಷದಲ್ಲಿ ವರ್ಗಾವಣೆ ಮಾಡಿದ್ದರು ಎಂದು ಆರೋಪಿಸಿದರು.

"ಅವರ ಕಾಲದಲ್ಲಿ ಎಷ್ಟು ವರ್ಗಾವಣೆಯಾಗಿದೆ?. ಆ ಪಟ್ಟಿ ಬಿಡುಗಡೆ ಮಾಡುವುದಕ್ಕೆ ನಾವು ಸಿದ್ಧರಿದ್ದೇವೆ. ಇದನ್ನು ಕುಮಾರಸ್ವಾಮಿ ಮುಂದುವರಿಸುವುದು ಸರಿಯಲ್ಲ. ಯಾರ ಯಾರ ಕಾಲದಲ್ಲಿ ಎಷ್ಟೆಷ್ಟು ವರ್ಗಾವಣೆ ಆಗಿದೆ ಎಂಬುದು ಗೊತ್ತಾಗಲಿ" ಎಂದು ಹೆಚ್​ಡಿಕೆ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ಚಲುವರಾಯಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಯಾವುದೇ ಇಲಾಖೆಯಲ್ಲಿ ವರ್ಗಾವಣೆ ಮಾಡುವ ಸ್ವತಂತ್ರ ನನಗೆ ಇರಲಿಲ್ಲ. ಅಷ್ಟಕ್ಕೂ ಮೈತ್ರಿ ಸರ್ಕಾರದ ಅವಧಿಯಲ್ಲಿ ಪ್ರಮುಖ ಇಲಾಖೆಗಳನ್ನು ಕಾಂಗ್ರೆಸ್​ನವರು ಪಡೆದಿದ್ದರು. ಹದಿನಾಲ್ಕು ತಿಂಗಳ ಮೈತ್ರಿ ಸರ್ಕಾರದಲ್ಲಿ ಎಲ್ಲೂ ದುಡ್ಡು ತೆಗೆದುಕೊಂಡಿಲ್ಲ. ಯಾವುದೇ ವರ್ಗಾವಣೆಗೆ ಹಣ ತೆಗೆದುಕೊಂಡಿರೋದು ಇಲ್ಲವೇ ಮಧ್ಯಪ್ರವೇಶಿಸಿರುವುದರ ಮಾಹಿತಿ ಇದ್ದರೆ ತೋರಿಸಲಿ. ಇದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.

ಇದನ್ನೂ ಓದಿ : ದೇವದುರ್ಗ ಕ್ಷೇತ್ರದಲ್ಲಿ ಭಯದ ವಾತಾವರಣ, ನನಗೂ ಕೂಡ ಜೀವಭಯವಿದೆ: ಸದನದಲ್ಲೇ ಜೆಡಿಎಸ್ ಶಾಸಕಿ ಕರೆಮ್ಮ ಆತಂಕ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರೋದಕ್ಕೆ ಸಹಿಸಿಕೊಳ್ಳಲಾಗುತ್ತಿಲ್ಲ ಅಂತಾರೆ. ನಮಗೆ ಅಧಿಕಾರ ಶಾಶ್ವತವೂ ಅಲ್ಲ. ಎರಡು ಬಾರಿ ನಾನು ಸಿಎಂ ಆಗಿದ್ದೇನೆ. ದೇವರ ಆಶೀರ್ವಾದ ಇದ್ದರೆ ಮತ್ತೆ ಬಂದೇ ಬರುತ್ತೆ. ಅಧಿಕಾರ ಹೊರಟೋಗಿದೆ ಅಂತ ಆರೋಪ ಮಾಡುತ್ತಿಲ್ಲ. ನಾನು ಸಿಎಂ ಆಗಿದ್ದಾಗ ಯಾರಿಗೂ ಅಗೌರವ ತೋರುವ ರೀತಿ ನಡೆದುಕೊಂಡಿಲ್ಲ, ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ. ಬೇಕಿದ್ದರೆ ನಮ್ಮದು ಸೇರಿಸಿ ತನಿಖೆ ಮಾಡಿಕೊಳ್ಳಲಿ. ನಮ್ಮ ಕಾಲದಲ್ಲಿ ಯಾವುದೇ ಅಕ್ರಮ ಆಗಿದ್ರು ತನಿಖೆ ಮಾಡಿಸಿಕೊಳ್ಳಲಿ ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.