ETV Bharat / state

ಬೆಳಕಿನ ಹಬ್ಬಕ್ಕೆ ಭರ್ಜರಿ ತಯಾರಿ: ಮಾರುಕಟ್ಟೆಗಳಲ್ಲಿ ಕಾಣಸಿಗುತ್ತಿವೆ ಕಲರ್ ಕಲರ್ ಆಕಾಶ ಬುಟ್ಟಿಗಳು - colorful Kandil for diwali festival

ಸಿಲಿಕಾನ್​ ಸಿಟಿಯಲ್ಲಿ ದೀಪಾವಳಿ ಹಬ್ಬದ ಕಳೆ ಕಟ್ಟಿದ್ದು, ಮಾರುಕಟ್ಟೆಗಳಲ್ಲಿ ಕಲರ್ ಕಲರ್ ಆಕಾಶ ಬುಟ್ಟಿಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ.

Kandeel
ಕಲರ್ ಕಲರ್ ಆಕಾಶ ಬುಟ್ಟಿಗಳು
author img

By ETV Bharat Karnataka Team

Published : Nov 11, 2023, 7:22 PM IST

Updated : Nov 11, 2023, 7:33 PM IST

ಬೆಳಕಿನ ಹಬ್ಬಕ್ಕೆ ಕಲರ್ ಕಲರ್ ಆಕಾಶ ಬುಟ್ಟಿಗಳು

ಬೆಂಗಳೂರು: ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೊಯ್ಯುವ ಬೆಳಕಿನ ಹಬ್ಬಕ್ಕೆ ಸಿಲಿಕಾನ್ ಸಿಟಿಯಲ್ಲಿ ಭರದಿಂದ ತಯಾರಿ ಸಾಗುತ್ತಿದೆ. ಬದುಕಿನ ಅಂಧಕಾರ ಕಳೆದು ಜೀವನದಲ್ಲಿ ಬೆಳಕು ಬರಲಿ ಎಂದು ಪೂಜಿಸುವ ಹಬ್ಬಕ್ಕೆ ಜನರು ಸಕಲ ರೀತಿಯಲ್ಲಿಯೂ ಸಜ್ಜಾಗುತ್ತಿದ್ದಾರೆ.

ಕತ್ತಲೆಯ ಮೇಲೆ ಬೆಳಕು, ಅಜ್ಞಾನದ ಮೇಲೆ ಜ್ಞಾನ, ಕೆಡುಕಿನ ಮೇಲೆ ಒಳ್ಳೆಯದನ್ನು ಸಾರುವ ಹಬ್ಬ ದೀಪಾವಳಿ. ಅದಕ್ಕಾಗಿ ನಗರದ ಮಲ್ಲೇಶ್ವರ, ಜಯನಗರ, ಬಸವನಗುಡಿ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಕಣ್ಣು ಹಾಯಿಸಿದಷ್ಟು ಕಡೆ ಕಲರ್ ಕಲರ್ ಆಕಾಶ ಬುಟ್ಟಿಗಳು ಕಾಣಸಿಗುತ್ತಿವೆ. ಕಣ್ಮನ ಸೆಳೆಯುತ್ತಿರುವ ಆಕಾಶ ಬುಟ್ಟಿಗಳ ಖರೀದಿಯಲ್ಲಿ ಗ್ರಾಹಕರು ಬ್ಯುಸಿಯಾಗಿದ್ದಾರೆ.

ದೀಪಾವಳಿ ಹಬ್ಬದಲ್ಲಿ ಮನೆಯ ಮುಂಬಾಗಿಲು ಆಕರ್ಷಕವಾಗಿ ಕಾಣಲು ಆಕಾಶ ಬುಟ್ಟಿಯಿಂದ ಅಲಂಕಾರ ಮಾಡಲಾಗುತ್ತದೆ. ಇದಕ್ಕಾಗಿ ಹಲವು ಬಣ್ಣದ ಬೇರೆ ಬೇರೆ ಗಾತ್ರದ ಆಕಾಶ ಬುಟ್ಟಿಗಳನ್ನು ತಯಾರಿಸಲಾಗಿದೆ. ಬಣ್ಣ ಬಣ್ಣದ ಚೌಕಾಕಾರದ ಆಕಾಶಬುಟ್ಟಿ, ಲೋಟಸ್, ಪಕ್ಷಿಗೂಡು, ಡ್ರಮ್ ಸೇರಿದಂತೆ ಅನೇಕ ಮಾದರಿಯ ಆಕಾಶಬುಟ್ಟಿಗಳು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಗಾತ್ರ ಹಾಗೂ ವಿನ್ಯಾಸಗಳಿಗೆ ತಕ್ಕಂತೆ ಬೆಲೆ ನಿಗದಿಯಾಗಿದೆ. ಅದರಲ್ಲಿ ಹೆಚ್ಚಾಗಿ ಕೋಮಲ್‌ ಡಿಸೈನ್‌, ಗುಲಾಬ್ ರಂಗೀಲಾ, ನಕ್ಷತ್ರ ಮಾದರಿ, ಕಂದಿಲು ಆಕಾರದ ಆಕಾಶ ಬುಟ್ಟಿಗಳು ಖರೀದಿದಾರರನ್ನು ಆಕರ್ಷಿಸುತ್ತಿವೆ.

ಮಲ್ಟಿ ಕಲರ್, ಸಿಂಗಲ್ ಕಲರ್, ಪ್ಲಾಸ್ಟಿಕ್, ಗಿಡದ ಮಾದರಿ, ಬಟ್ಟೆಗಳಲ್ಲಿ ತಯಾರಿಸಿರುವ ಆಕಾಶ ಬುಟ್ಟಿಗಳಿಗೆ ಫುಲ್ ಡಿಮ್ಯಾಂಡ್ ಇದೆ. ತಮಗಿಷ್ಟವಾದ ಆಕಾಶ ಬುಟ್ಟಿ ಖರೀದಿಯಲ್ಲಿ ಸಿಟಿ ಜನ ಬ್ಯುಸಿಯಾಗಿರುವುದರಿಂದ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬದ ಕಳೆ ಹೆಚ್ಚುತ್ತಿದೆ. ಮನೆಗಳಿಗೆ ಅಷ್ಟೇ ಅಲ್ಲದೆ ಕಚೇರಿಗಳಲ್ಲಿಯೂ ಕೂಡ ದೀಪಾವಳಿ ಹಬ್ಬ ಭರ್ಜರಿಯಾಗಿ ಆಚರಿಸಲು ಆಕಾಶ ಬುಟ್ಟಿಗಳನ್ನು ಖರೀದಿ ಮಾಡುತ್ತಿದ್ದಾರೆ.

ಬಟ್ಟೆಯಿಂದ ಮಾಡಿದ ಭಿನ್ನ ಭಿನ್ನ ಶೈಲಿಯ ಆಕಾಶ ಬುಟ್ಟಿ ಮಾರುಕಟ್ಟೆ ಜನರನ್ನು ಆಕರ್ಷಿಸುತ್ತಿವೆ. 700ಕ್ಕೂ ಹೆಚ್ಚು ಬಗೆ ಬಗೆಯ ಆಕಾಶ ಬುಟ್ಟಿಗಳು ನಮ್ಮಲ್ಲಿ ಇವೆ. ಅದರಲ್ಲೂ ವಿಶೇಷವಾಗಿ ಹ್ಯಾಪಿ ದೀಪಾವಳಿ ಎಂದು ಮುದ್ರೆ ಒತ್ತಿರುವ ಆಕಾಶ ಬುಟ್ಟಿಯನ್ನು ಜನರು ಹೆಚ್ಚುಕೊಳ್ಳುತ್ತಿದ್ದಾರೆ. ಇವುಗಳ ಬೆಲೆ 200 ರೂಪಾಯಿಂದ 5 ಸಾವಿರದವರೆಗೆ ನಿಗದಿಪಡಿಸಲಾಗಿದೆ ಎಂದು ಮಲ್ಲೇಶ್ವರದ ವ್ಯಾಪಾರಿ ಹರೀಶ್ ತಿಳಿಸಿದ್ದಾರೆ.

ಇನ್ನು ಈ ಬಾರಿ ಪರಿಸರ ಸ್ನೇಹಿ ದೀಪಗಳನ್ನು ಗ್ರಾಹಕರು ಹೆಚ್ಚಾಗಿ ಕೊಂಡೊಯ್ಯತ್ತಿದ್ದು ಮಣ್ಣಿನ ಹಣತೆಗೆ ಭಾರಿ ಬೇಡಿಕೆ ಹೆಚ್ಚಿದೆ.

ಇದನ್ನೂ ಓದಿ : ದೀಪಾವಳಿ ಹಬ್ಬ : ಮಣ್ಣಿನ ಹಣತೆಗಳ ಖರೀದಿಯಲ್ಲಿ ನಿರತರಾದ ಸಿಲಿಕಾನ್ ಸಿಟಿ ಮಂದಿ

Last Updated : Nov 11, 2023, 7:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.