ನವದೆಹಲಿ : ಭಾರತದಿಂದ ಬೇರೆ ದೇಶಗಳಿಗೆ ಕಾಫಿ ಬೀಜಗಳು ರಫ್ತಾಗುತ್ತಿದ್ದು, ಈ ಬಾರಿ ರಫ್ತಿನಲ್ಲಿ ಏರಿಕೆ ಕಂಡಿದೆ ಎಂದು ಕಾಫಿ ಬೋರ್ಡ್ ವರದಿ ತಿಳಿಸಿದೆ.
ಕಾಫಿ ಬೋರ್ಡ್ ಪ್ರಕಾರ 2019ರ 2ನೆ ತಿಂಗಳಲ್ಲಿ 43,330 ಟನ್ ಕಾಫಿ ಬೀಜಗಳು ರಫ್ತಾಗಿವೆ. ಕಳೆದ ವರ್ಷ 42,670 ಟನ್ಗಳ ರಫ್ತನ್ನು ಭಾರತ ಮಾಡಿದ್ದು, ಈಗ 13.26% ಏರಿಕೆ ಕಂಡಿದೆ. ಭಾರತ ಇನ್ಸ್ಂಟ್ ಕಾಫಿ ಸೇರಿ ರೋಬಸ್ಟಾ ಹಾಗೂ ಆರಾಬಿಕಾ ತಳಿಗಳನ್ನು ರಫ್ತು ಮಾಡುತ್ತದೆ.
ಕಾಫಿ ಬೋರ್ಡ್ ಅಂಕಿ ಅಂಶಗಳ ಪ್ರಕಾರ 2018ರ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ 26,545 ಟನ್ ರಫ್ತಾಗಿತ್ತು. ಆದರೆ 2019ರ ವರ್ಷದ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ 28.42% ಕಾಫಿ ಬೀಜದ ರಫ್ತು ಏರಿಕೆಯ ಕಾರಣ 34,090 ಟನ್ ರಫ್ತಾಗಿವೆ.
ಅರೆಬಿಕಾ ಕಾಫಿ ಬೀಜದ ರಫ್ತು 9,752 ಟನ್ಗಳಿಂದ 14.39% ಏರಿಕೆ ಕಂಡಿದೆ. ಹಾಗಾಗಿ 11,156 ಟನ್ ರಫ್ತಾಗಿವೆ. ಸಂಸ್ಕರಣಾ ಕಾಫಿ ರಫ್ತು 11,516 ಟನ್ ಇಂದ 13,392 ಟನ್ ಏರಿಕೆಗೊಂಡಿದೆ. ಆದರೆ ಇನ್ಸ್ಂಟ್ ಕಾಫಿಯ ರಫ್ತು ಕುಸಿತ ಕಂಡಿದೆ. ಕಳೆದ ವರ್ಷ 5,704 ಟನ್ ಇದ್ದ ರಫ್ತು ಈ ವರ್ಷ 3,047ಕ್ಕೆ ಇಳಿದಿದೆ.
ಇಟಲಿ, ಜರ್ಮನಿ, ರಷ್ಯಾ, ಬೆಲ್ಜಿಯಂ ಹಾಗೂ ಲಿಬಿಯಾ ದೇಶಗಳು ಟಾಪ್ 5 ಕಾಫಿ ಬೀಜಗಳ ರಾಫ್ತಿನ ದೇಶಗಳಾಗಿವೆ. ಸಿಸಿಎಲ್ ಪ್ರಾಡಕ್ಟ್ಸ್, ಟಾಟಾ ಕಾಫಿ, ಒಲಂ ಆಗ್ರೋ, ಕಾಫಿ ಡೇ ಗ್ಲೋಬಲ್, ಕಾಫಿಯ ರಫ್ತಿನಲ್ಲಿ ಪ್ರಮುಖ ಸಂಸ್ಥೆಗಳು. ಕಳೆದ ವರ್ಷದಲ್ಲಿ 3,16,000 ಟನ್ ಗಳ ರಫ್ತು ಮಾಡಿದ್ದು ಈ ವರ್ಷ 3,19,000 ಟನ್ ನಷ್ಟು ರಫ್ತು ಆಗಬಹುದು ಎಂದು ಚಿತ್ರಿಸಲಾಗಿದೆ.