ETV Bharat / state

ಕೊರೊನಾ ನಿಗ್ರಹ ವಿಚಾರ, ಕರ್ನಾಟಕದ ಕ್ರಮ ಶ್ಲಾಘಿಸಿದ ಲಂಡನ್ ಮಿನಿಸ್ಟರ್: ಯುಕೆ ಕನ್ನಡಿಗರಿಗೆ ಸಿಎಂ ಅಭಯ

ಕೊರೊನಾ ನಿಗ್ರಹ ವಿಚಾರದಲ್ಲಿ ರಾಜ್ಯದ ಕ್ರಮವನ್ನು ಲಂಡನ್​ ಸಚಿವರು ಶ್ಲಾಘಿಸಿದ್ದಾರೆ. ಇಂದು ವಿಡಿಯೋ ಕಾನ್ಫರೆನ್ಸ್​​ ಮೂಲಕ ಲಂಡನ್​ ಸಚಿವರು ಮತ್ತು ಅಲ್ಲಿನ ಕೆಲ ಕನ್ನಡಿಗರು ಸಿಎಂ ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ್ದಾರೆ.

ಸಿಎಂ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್, ಸಿಎಂ ಯಡಿಯೂರಪ್ಪ ಯುಕೆ ಕನ್ನಡಿಗರೊಂದಿಗೆ ವಿಡಿಯೋ ಕಾನ್ಫರೆನ್ಸ್, ಸಿಎಂ ಯಡಿಯೂರಪ್ಪ ಸುದ್ದಿ, CM Yediyurappa video conference, CM Yediyurappa video conference with UK kannadigas, CM Yediyurappa video conference with UK kannadigas news,
ಯುಕೆಯಲ್ಲಿ ಕನ್ನಡಿಗರಿಗೆ ಸಿಎಂ ಅಭಯ
author img

By

Published : Apr 26, 2020, 8:36 PM IST

ಬೆಂಗಳೂರು: ಕೋವಿಡ್-19ಗೆ ಸಂಬಂಧಿಸಿದಂತೆ ಲಂಡನ್​ನಲ್ಲಿ‌ ನೆಲೆಸಿರುವ ಕನ್ನಡಿಗರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ‌ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತುಕತೆ ನಡೆಸಿದ್ದು, ಸಂಕಷ್ಟದಲ್ಲಿರುವವರಿಗೆ ಸಹಕಾರದ ಅಭಯ ನೀಡಿ ಧೈರ್ಯ ತುಂಬಿದ್ದಾರೆ.

ಯುಕೆಯಲ್ಲಿರುವ ಕನ್ನಡಿಗರಿಗೆ ಸಿಎಂ ಅಭಯ

ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಸಂವಾದದ ಮೂಲಕ ಯುಕೆ‌ನಲ್ಲಿರುವ ಕನ್ನಡ ಬಳಗದ ಜೊತೆ ಸಿಎಂ ಮಾತನಾಡಿದರು. ಈ‌ ಸಂದರ್ಭದಲ್ಲಿ ಮಾತನಾಡಿದ ಯುಕೆ ಲಾ‌ ಮಿನಿಸ್ಟರ್ ರಾಬರ್ಟ್ ಬಕ್ಲಂಡ್ ಅವರು, ಯುಕೆನಲ್ಲಿ ಕೊರೊನಾ ಹರಡುವಿಕೆ ಹಾಗೂ ಅದರ ನಿಯಂತ್ರಣ ಕುರಿತು ವಿವರಿಸಿದರು. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಕೊರೊನಾ ನಿಗ್ರಹ ಮಾಡುವಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಮಾತನಾಡಿದ ಶರವಣ ಗುರುಮೂರ್ತಿ, ಯುಕೆ‌ನಲ್ಲಿ ಓದುತ್ತಿರುವ ಹಲವು ಕನ್ನಡಿಗ ವಿದ್ಯಾರ್ಥಿಗಳು ಲೋನ್ ತೆಗೆದುಕೊಂಡು ‌ಇಲ್ಲಿಗೆ ಬಂದಿದ್ದು, ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಸಿಎಂ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು ಬ್ಯಾಂಕ್ ನವರ ಜೊತೆ‌ ಮಾತನಾಡಿ ಇಎಂಐ ಕಟ್ಟಲು ಸಮಯವಕಾಶ ಒದಗಿಸಿಕೊಡುವುದಾಗಿ ಭರವಸೆ ‌ನೀಡಿದ್ರು.

ಈ ಸಂದರ್ಭದಲ್ಲಿ ಲಾರ್ಡ್ ಚಾನ್ಸಲೆರ್ ಮತ್ತು ಸೆಕ್ರೆಟರಿ ಆಫ್​ ಫಾರ್ ಜಸ್ಟೀಸ್, ಮೆಂಬರ್ ಆಫ್​ ಪಾರ್ಲಿಮೆಂಟ್​ನ ರಾಬರ್ಟ್‌ ಬಕ್ಲಂಡ್ ಹಾಗೂ ಸುರೇಶ್ ಗತ್ತಾಪುರ- ಕೌನ್ಸಿಲರ್ ವೆಸ್ಟ್ ಸ್ವಿಂಡನ್ ಟ್ರಸ್ಟಿ ಆಫ್​ ಹಿಂದೂ ಟೆಂಪಲ್ ಹಾಗೂ ಶರವಣ ಗುರುಮೂರ್ತಿ ಸೇರಿದಂತೆ ಹಲವು ಯುಕೆ ಕನ್ನಡ ಬಳಗದ ಸದಸ್ಯರು ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.