ETV Bharat / state

ಕೊವಾಕ್ಸಿನ್​ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್​ಗೆ ಸಿಎಂ ಚಾಲನೆ

CM Yediyurappa launch, CM Yediyurappa launch to third phase Clinical Trial, Bharat Biotech covaxin, Bharat Biotech covaxin news, ಸಿಎಂ ಯಡಿಯೂರಪ್ಪ ಚಾಲನೆ, ಮೂರನೇ ಹಂತದ ಕೊವಾಕ್ಸಿನ್​ ಟ್ರಯಲ್​ಗೆ ಯಡಿಯೂರಪ್ಪ ಚಾಲನೆ, ಭಾರತ್ ಬಯೋಟೆಕ್​ನ  ಕೊವಾಕ್ಸಿನ್, ಭಾರತ್ ಬಯೋಟೆಕ್​ನ  ಕೊವಾಕ್ಸಿನ್ ಸುದ್ದಿ,
ಕೊವಾಕ್ಸಿನ್​ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್​ಗೆ ಸಿಎಂ ಚಾಲನೆ
author img

By

Published : Dec 2, 2020, 11:27 AM IST

Updated : Dec 2, 2020, 1:32 PM IST

11:24 December 02

ಕೋವಿಡ್ -19 ಲಸಿಕೆ 'ಕೊವಾಕ್ಸಿನ್​'ನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಿದರು.

ಕೊವಾಕ್ಸಿನ್​ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್​ಗೆ ಸಿಎಂ ಚಾಲನೆ

ಬೆಂಗಳೂರು: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೋವಿಡ್ -19 ಲಸಿಕೆ 'ಕೊವಾಕ್ಸಿನ್​' ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದಾರೆ.  

ಇಂದಿನಿಂದ ಬೆಂಗಳೂರಿನ ವೈದೇಹಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೋವಿಡ್ -19 ಲಸಿಕೆ 'ಕೊವಾಕ್ಸಿನ್​' ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ.  

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೊವಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ನಡೆಸಲು ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್)  ವೈದೇಹಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಅನುಮತಿ ನೀಡಿದೆ ಎಂದು ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​ ಮತ್ತು ರಿಸರ್ಚ್ ಸೆಂಟರ್ ಅಧಿಕಾರಿ ಕೆ. ರವಿ ಬಾಬು ಈ ಮೊದಲೇ ತಿಳಿಸಿದ್ದರು.  

ಸುಮಾರು ಒಂದು ಸಾವಿರ ಸ್ವಯಂಸೇವಕರು ಲಸಿಕೆ ಪ್ರಯೋಗದಲ್ಲಿ ಭಾಗವಹಿಲಿದ್ದಾರೆ. ಸ್ವಯಂಸೇವಕರಿಗೆ ಎರಡು ಸಮಯದಲ್ಲಿ ಲಸಿಕೆಯನ್ನು ನೀಡಲಾಗುವುದು. ಇಂದು ಮೊದಲನೇ ಡೋಸ್ ನೀಡಿದ್ರೆ, ಎರಡನೇ ಡೋಸ್ ಅನ್ನು ಡಿಸೆಂಬರ್ 30 ರಂದು ನೀಡಲಾಗುವುದು. ಸ್ವಯಂಸೇವಕರು ಆಸ್ಪತ್ರೆಯಲ್ಲಿ ಇರಬೇಕಾಗಿಲ್ಲವಾದರೂ, ಪ್ರತಿಕ್ರಿಯೆ ಮತ್ತು ಮಾಹಿತಿಗಾಗಿ ಫೋನ್ ಅಥವಾ ವಿಡಿಯೋ ಕರೆ ಮೂಲಕ ಪ್ರತಿದಿನ ಅವರನ್ನು ಮೇಲ್ವಿಚಾರಣೆ ಮಾಡಲಾಗುವುದು ಎಂದು ರವಿ ಬಾಬು ಹೇಳಿದ್ದಾರೆ.

18 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರನ್ನು ಸ್ವಯಂಸೇವಕರನ್ನಾಗಿ ಆಯ್ಕೆ ಮಾಡಲಾಗಿದೆ. ಲಸಿಕೆಯು, ಸೋಂಕನ್ನು ತಡೆಗಟ್ಟುವ ಮತ್ತು ಗುಣಪಡಿಸುವ ಕಾರಣಕ್ಕಾಗಿ ಪರೀಕ್ಷೆ ನಡೆಸುತ್ತಿರುವುದರಿಂದ ಸೋಂಕು ಇಲ್ಲದ ಮತ್ತು ರೋಗಲಕ್ಷಣವಿಲ್ಲದವರಿಗೆ ಮಾತ್ರ ಇದನ್ನು ನೀಡಲಾಗುವುದು" ಎಂದು ತಿಳಿಸಿದ್ದಾರೆ.

ಕರ್ನಾಟಕ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರು ಪ್ರಯೋಗವನ್ನು ಪ್ರಾರಂಭಿಸಿ ಬಯೋಟೆಕ್‌ನ ವಿಜ್ಞಾನಿಗಳು ಮತ್ತು ಆಸ್ಪತ್ರೆಯ ವೈದ್ಯರ ತಂಡದೊಂದಿಗೆ ಚರ್ಚೆ ನಡೆಸಲಿದ್ದಾರೆ. ಪ್ರಯೋಗಗಳ ಡೇಟಾವನ್ನು ಪ್ರಾಯೋಜಕ ತಂಡವು ವಿಶ್ಲೇಷಣೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಕ್ಕೆ ಮೌಲ್ಯಮಾಪನಕ್ಕಾಗಿ ಸಲ್ಲಿಸಲಾಗುವುದು ಎಂದು ರವಿ ಬಾಬು ಹೇಳಿದ್ದಾರೆ.

Last Updated : Dec 2, 2020, 1:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.