ETV Bharat / state

ಕೋವಿಡ್ ಲಸಿಕೆಗಾಗಿ ಗ್ಲೋಬಲ್​ ಟೆಂಡರ್ ಕರೆಯಲಾಗಿದೆ: ಸಿಎಂ ಬಿಎಸ್​ವೈ - ಪದ್ಮಭೂಷಣ್ ಇಂದೂ ಜೈನ್ ಜಿ ನಿಧನಕ್ಕೆ ಸಿಎಂ ಸಂತಾಪ

ಬಸವ ಜಯಂತಿ ಹಾಗೂ ರಂಜಾನ್ ಹಬ್ಬದ ಶುಭಾಶಯ ಕೋರಿದ ಸಿಎಂ ಯಡಿಯೂರಪ್ಪ, ನಗರದ ಚಾಲುಕ್ಯ ವೃತ್ತದಲ್ಲಿ ಬಸವಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

CM Yeddyurappa wish to Basava Jayanti and Ramzan
ಬಸವಣ್ಣ ಪುತ್ಥಳಿಗೆ ಸಿಎಂ ಯಡಿಯೂರಪ್ಪ ಮಾಲಾರ್ಪಣೆ
author img

By

Published : May 14, 2021, 10:58 AM IST

ಬೆಂಗಳೂರು: ಇಂದು ಬಸವ ಜಯಂತಿ ಹಿನ್ನೆಲೆ ನಗರದ ಚಾಲುಕ್ಯ ವೃತ್ತದಲ್ಲಿ ಬಸವಣ್ಣ ಪುತ್ಥಳಿಗೆ ಸಿಎಂ ಯಡಿಯೂರಪ್ಪ ಮಾಲಾರ್ಪಣೆ ಮಾಡಿದರು.

ಬಸವಣ್ಣ ಪುತ್ಥಳಿಗೆ ಸಿಎಂ ಯಡಿಯೂರಪ್ಪ ಮಾಲಾರ್ಪಣೆ

ಇದೇ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ಆದಷ್ಟು ಬೇಗ ರಾಜ್ಯಕ್ಕೆ ಲಸಿಕೆ ಬರಲಿದೆ. ನಮ್ಮ ಕೈಲಾದಷ್ಟು ಪ್ರಯತ್ನ ಮಾಡಲಾಗುತ್ತಿದೆ. ವ್ಯಾಕ್ಸಿನ್​ಗಾಗಿ ಗ್ಲೋಬಲ್ ಟೆಂಡರ್ ಕರೆಯಲಾಗಿದ್ದು, ಸದ್ಯದಲ್ಲೇ ಲಸಿಕೆ ಲಭ್ಯವಾಗಲಿದೆ ಎಂದರು.

ಕೋವಿಡ್ ನೆರವು ನೀಡುವುದರಲ್ಲಿ ಕೂಡ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ವಿಧಾನಸಭಾ ಕ್ಷೇತ್ರ ಎಂದು ತಾರತಮ್ಯ ಮಾಡಲಾಗಿದೆ ಅಂತ ದಾಸರಹಳ್ಳಿ ಶಾಸಕ ಮಂಜುನಾಥ್ ಆರೋಪ ಮಾಡಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಇದೆಲ್ಲ ಆಧಾರ ರಹಿತ ಆರೋಪ. ಎಲ್ಲರೂ ಒಂದಾಗಿ ಜ್ವಲಂತ ಸಮಸ್ಯೆ ಎದುರಿಸಬೇಕಿದೆ ಎಂದು ಹೇಳಿದರು.

ಇದೇ ವೇಳೆ ಬಸವ ಜಯಂತಿ ಹಾಗೂ ರಂಜಾನ್ ಹಬ್ಬದ ಶುಭಾಶಯ ಕೋರಿದರು. ಬಸವಣ್ಣ ವಿಶ್ವಗುರು ಎಂದೆನಿಸಿದ್ದರು. ಕ್ರಾಂತಿಯೋಗಿ ಎಂದೇ ಜನಜನಿತರಾದ ಬಸವಣ್ಣ ಸಮಾನತೆ ಹಾಗೂ ಕಾಯಕತತ್ವ ಆಚರಿಸಿ, ಪಾಲಿಸುವ ಯಾರು ಬೇಕಾದರು ಶಿವಶರಣ ಆಗಬಹುದೆಂದು ಜಗತ್ತಿಗೆ ಸಾರಿದ್ದರು. ಅಂತಹ ಮಹಾತ್ಮರ ಜಯಂತಿಯ ಶುಭಾಶಯಗಳು ಎಂದರು. ರಂಜಾನ್ ಹಬ್ಬದ ಶುಭಾಶಯವನ್ನೂ ಕೋರಿ, ಹಿಂದೂ, ಮುಸ್ಲಿಂ, ಕ್ರಿಶ್ಚನ್ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳೋಣ ಎಂದರು.

ಟ್ವೀಟ್ ಮೂಲಕ ಶುಭಾಶಯ ಸಲ್ಲಿಸಿರುವ ಸಿಎಂ:

‘ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯಾ ಪರ್ವಕಾಲದ ಹಾರ್ದಿಕ ಶುಭಾಶಯಗಳು. ಅತ್ಯಂತ ಮಂಗಳಕರವಾದ ಈ ದಿನದಂದು ಸಮಸ್ತ ಜನತೆಗೆ ಯೋಗಕ್ಷೇಮ, ಆರೋಗ್ಯ, ಸುಖ ಸಮೃದ್ಧಿಗಳನ್ನು ಹಾಗೂ ನಾಡಿಗೆ ಶುಭ ಕಾಲವನ್ನು ದೇವರು ಕರುಣಿಸಲಿ ಎಂದು ಮನೆಗಳಲ್ಲಿಯೇ ವಿಶೇಷ ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸೋಣ.’ ಎಂದು ಶುಭ ಕೋರಿದ್ದಾರೆ.

ಇನ್ನೊಂದು ಟ್ವೀಟ್​ನಲ್ಲಿ, ‘ನಾಡಿನ ಸಮಸ್ತ ಜನತಗೆ ವಿಶ್ವಗುರು ಅಣ್ಣ ಬಸವಣ್ಣನವರ ಜಯಂತಿಯ ಭಕ್ತಿಪೂರ್ವಕ ಶುಭಕಾಮನೆಗಳು. ಶ್ರಮ ಗೌರವವನ್ನು ಎತ್ತಿ ಹಿಡಿದು, ಕಾಯಕ ದಾಸೋಹ ತತ್ವಗಳ ಮೂಲಕ ನಾವು ಮಾಡುವ ಕೆಲಸಕ್ಕೆ ಆಧ್ಯಾತ್ಮಿಕ ಮುಖವನ್ನು ನೀಡಿದ, ವಚನಗಳ ತಿಳಿನುಡಿಗಳ ಮೂಲಕ ಸಮಾಜಕ್ಕೆ ಸರಿ ದಾರಿ ತೋರಿದ ಬಸವಣ್ಣನವರ ಉಪದೇಶಗಳ ಬೆಳಕಿನಲ್ಲಿ ಸಾರ್ಥಕ ಜೀವನ ನಡೆಸೋಣ.’ ಎಂದಿದ್ದಾರೆ.

ರಂಜಾನ್​ ಶುಭಾಶಯ ಕೋರಿ ಟ್ವೀಟ್ ಮಾಡಿರುವ ಸಿಎಂ, ‘ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ಈದ್-ಉಲ್-ಫಿತರ್ ಎಲ್ಲರ ಜೀವನದಲ್ಲಿ ಸಂತೋಷ, ಆರೋಗ್ಯ, ಸಮೃದ್ಧಿಯನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ. ಜನರ ಆರೋಗ್ಯ, ನಾಡಿನ ಕ್ಷೇಮಕ್ಕಾಗಿ ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸೋಣ. ಮನೆಯಲ್ಲೇ ಸುರಕ್ಷಿತವಾಗಿ ರಂಜಾನ್ ಆಚರಣೆ, ಪ್ರಾರ್ಥನೆಗಳನ್ನು ಸಲ್ಲಿಸೋಣ’ ಎಂದು ತಿಳಿಸಿದ್ದಾರೆ.

ಪದ್ಮಭೂಷಣ್ ಇಂದೂ ಜೈನ್ ಜೀ ನಿಧನಕ್ಕೆ ಸಂತಾಪ:

ಟೈಮ್ಸ್ ಸಮೂಹದ ಅಧ್ಯಕ್ಷರಾದ ಪದ್ಮಭೂಷಣ್ ಇಂದೂ ಜೈನ್ ಜೀ ಅವರ ನಿಧನದ ಸುದ್ದಿ ಕೇಳಿ ಬೇಸರವಾಯಿತು. ತಮ್ಮದೇ ಆದ ಸಾಮಾಜಿಕ ಕಳಕಳಿ ಹಾಗೂ ಲೋಕೋಪಕಾರಿ ಕೆಲಸಕ್ಕಾಗಿ ಅವರು ಉತ್ತಮ ಹೆಸರು ಸಂಪಾದಿಸಿದರು. ಇದು ದೇಶದಲ್ಲಿ ಶಾಶ್ವತವಾಗಿ ಉಳಿಯಲಿದೆ. ಅವರ ಆತ್ಮೀಯರಿಗೆ ಮತ್ತು ಟೈಮ್ಸ್ ಗ್ರೂಪ್ ಕುಟುಂಬಕ್ಕೆ ನನ್ನ ಸಂತಾಪಗಳು. ಆಪ್ತರಿಗೆ ಇವರ ಅಗಲಿಕೆಯ ನೋವು ಭರಿಸುವ ಶಕ್ತಿ ಸಿಗಲಿ ಎಂದು ಹಾರೈಸುತ್ತೇನೆ ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.