ಬೆಂಗಳೂರು: ಬೆಳಗಾವಿ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬೆಂಗಳೂರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮರಳಿದ್ದಾರೆ.
ಈ ವೇಳೆ ಕಾವೇರಿ ನಿವಾಸದ ಬಳಿ ಮಾಧ್ಯಮದವರ ಜತೆ ಮಾತನಾಡಿದ ಸಿಎಂ ಬಿಎಸ್ವೈ, ಇದುವರೆಗೂ ಹೈಕಮಾಂಡ್ನಿಂದ ಯಾವುದೇ ಸಂದೇಶ ಬಂದಿಲ್ಲ. ನಾಳೆ ಸರ್ಕಾರ ಎರಡು ವರ್ಷ ಪೂರೈಸಿದ ಕಾರ್ಯಕ್ರಮ ಇದೆ. ಎರಡು ವರ್ಷದ ಸಾಧನೆ ಬಗ್ಗೆ ಮಾತನಾಡುತ್ತೇನೆ. ನಾನು ಯಾವಾಗ ರಾಜೀನಾಮೆ ಕೊಡಬೇಕು ಅಂತ ಇರುತ್ತೋ ಆಗ ಕೊಡ್ತೇನೆ ಎಂದು ಹೇಳಿದರು.
ಇವತ್ತು ರಾತ್ರಿಯೊಳಗೆ ಸಂದೇಶ ಬರಲಿದೆ ಅನ್ನೋ ವಿಶ್ವಾಸ ಇದೆ. ನಾಳೆ ಕಾರ್ಯಕ್ರಮ ನಿಶ್ಚಯವಾಗಿದೆ, ಅದನ್ನು ಮಾಡುತ್ತೇನೆ. ಯಾವುದೇ ಗೊಂದಲ ಇಲ್ಲ. ಸಂದೇಶ ಬರದಿದ್ರೆ ನಾಳೆ ತೀರ್ಮಾನ ಕೈಗೊಳ್ಳುತ್ತೇನೆ. ಯಾವ ಸ್ವಾಮೀಜಿಗಳ ಸಮಾವೇಶದ ಬಗ್ಗೆ ಹೇಳೋದಿಲ್ಲ. ಇನ್ನೂ ಹತ್ತು, ಹದಿನೈದು ವರ್ಷ ಪಕ್ಷದ ಕೆಲಸ ಮಾಡ್ತೀನಿ ಎಂದರು.
ಇದನ್ನೂ ಓದಿ: ಬಿಎಸ್ವೈ ಕಾರ್ಯಕ್ಕೆ ಜೆ.ಪಿ ನಡ್ಡಾ ಮೆಚ್ಚುಗೆ: ನಾಯಕತ್ವ ಬದಲಾವಣೆ ಬಗ್ಗೆ ಅವರು ಹೇಳಿದ್ದಿಷ್ಟು..