ಬೆಂಗಳೂರು: ವಿವಿಧ ಸಮುದಾಯಗಳ ತವರೂರು ನಮ್ಮ ಬೆಂಗಳೂರು. ಅದೆಷ್ಟೋ ಸಮುದಾಯಗಳು ತಮ್ಮ ಸಂಸ್ಕೃತಿ, ಆಚರಣೆಯನ್ನ ನಗರದ ಜನತೆಗೆ ಪರಿಚಯಿಸಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ನಗರದ ಗಾಂಧಿಭವನದಲ್ಲಿ ನಡೆದ ಬೆಂಗಾಲಿ ಸಮ್ಮೇಳನದಲ್ಲಿ ಮಾತಾನಾಡಿದ ಅವರು, ಸ್ವಾತಂತ್ರ್ಯ ದಿನಗಳಲ್ಲಿ ಬೆಂಗಾಲಿ ಸಮುದಾಯದವರ ಪಾತ್ರ ಇಂದಿಗೂ ಮರೆಯುವಂತಿಲ್ಲ. ಅಂದಾಜು 13 ಲಕ್ಷ ಜನ ಬೆಂಗಾಲಿಯವರೇ ಇದ್ದಾರೆ. ಸುಮಾರು 120 ಬೆಂಗಾಲಿ ಅಸೋಸಿಯೇಷನ್ಗಳು ನಗರದಲ್ಲಿವೆ. ಅವರ ಸಾಮಾಜಿಕ ಕಾರ್ಯಕ್ಕೆ ಎಂದಿಗೂ ನಮ್ಮ ಬೆಂಬಲ ಇದೆ ಎಂದರು.
ಬಳಿಕ ಸಂಸದ ಪಿ .ಸಿ.ಮೋಹನ್ ಮಾತನಾಡಿ, ಈ ಮೊದಲು ಎರಡು ಕಡೆ ಮಾತ್ರ ದುರ್ಗಾ ಪೂಜೆ ಅದ್ಧೂರಿಯಾಗಿ ನಡೆಯುವುದನ್ನು ನೋಡುತ್ತಿದ್ದೆವು. ಆದರೆ ಈಗ 120ಕ್ಕೂ ಹೆಚ್ಚು ಕಡೆ ದುರ್ಗಾ ಪೂಜೆ ಆಚರಿಸಲಾಗುತ್ತಿದ್ದು, ಇದು ಬಹಳ ಸಂತದ ಸಂಗತಿಯಾಗಿದೆ. ತಮ್ಮ ಸಮಾಜದಿಂದ ಒಳ್ಳೆ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೀರಿ, ಇದನ್ನು ಹೀಗೆ ಮುಂದುವರೆಸಿ ಎಂದು ಮನವಿ ಮಾಡಿದರು.