ಬೆಂಗಳೂರು: ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲು ಆಗಮಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೂರವಾಣಿ ಕರೆ ಮಾಡಿದ್ದನ್ನು ಶಾಸಕ ಸುರೇಶ್ ಕುಮಾರ್ ಖಚಿತಪಡಿಸಿದ್ದಾರೆ.

ತಡರಾತ್ರಿ ಮಾನ್ಯ ಮುಖ್ಯಮಂತ್ರಿಗಳು ಫೋನ್ ಮಾಡಿ ಸೂಚನೆಯೊಂದನ್ನು ನೀಡಿದರು. ನನ್ನ ಮೇಲೆ ವಿಶ್ವಾಸವಿಟ್ಟಿರುವ ಅವರಿಗೆ ಮತ್ತು ವಿಶೇಷವಾಗಿ ನನ್ನ ಪಕ್ಷಕ್ಕೆ ಧನ್ಯವಾದಗಳು ಅಂತಾ ಬರೆದುಕೊಂಡಿದ್ದಾರೆ.
ತಮ್ಮೆಲ್ಲರ ಆಶೋತ್ತರಗಳ ಪ್ರತಿನಿಧಿಯಾಗಿ ಕಾರ್ಯ ಮಾಡಲು ಭಗವಂತ ಶಕ್ತಿ ನೀಡಲಿ. ತಮ್ಮ ಆಶೀರ್ವಾದ-ಹಾರೈಕೆ ಇರಲಿ ಎಂದು ಎಸ್.ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.