ETV Bharat / state

ದೆಹಲಿಗೆ ಹೋಗ್ತಾರೆ ಸಿಎಂ ಯಡಿಯೂರಪ್ಪ: ರಾಜ್ಯಕ್ಕೆ ಬಾಕಿ ಅನುದಾನ ತರುವ ಭರವಸೆ - ರಾಜ್ಯದ ಅನುದಾನ

ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳಿ, ರಾಜ್ಯಕ್ಕೆ ಬರಬೇಕಿರುವ ಬಾಕಿ ಅನುದಾನದ ಬಿಡುಗಡೆ ಬಗ್ಗೆ ಚರ್ಚಿಸುತ್ತೇನೆ‌ ಎಂದಿದ್ದಾರೆ.

ಸಿಎಂ ಯಡಿಯೂರಪ್ಪ
author img

By

Published : Aug 3, 2019, 4:00 PM IST

ಬೆಂಗಳೂರು: ಆಗಸ್ಟ್ 6ರಂದು ದೆಹಲಿಯಲ್ಲಿ ನಮ್ಮೆಲ್ಲ ಸಂಸದರನ್ನು ಭೇಟಿ ಮಾಡುತ್ತೇನೆ. ರಾಜ್ಯಕ್ಕೆ ಬರಬೇಕಿರುವ ಬಾಕಿ ಅನುದಾನದ ಬಿಡುಗಡೆ ಬಗ್ಗೆ ಚರ್ಚಿಸುತ್ತೇನೆ‌ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಅವರು, ಆಗಸ್ಟ್ 5ರಿಂದ 8ರವರಗೆ ದೆಹಲಿಯಲ್ಲೇ ಇದ್ದು, ಪಕ್ಷದ ಎಲ್ಲ ಪ್ರಮುಖರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.

ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಸಿಎಂ ಯಡಿಯೂರಪ್ಪ

ಕೆಆರ್​ಎಸ್​​, ಮಲೆನಾಡು ಭಾಗದಲ್ಲಿ ಮೋಡ ಬಿತ್ತನೆಗೆ ಸೂಚಿಸಿದ್ದೇನೆ. ನಿನ್ನೆ ಡಿಸಿ, ಸಿಇಒಗಳ ಸಭೆ ಮಾಡಿ, ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸೂಚಿಸಿರುವೆ ಎಂದು ತಿಳಿಸಿದರು.

ಆಗಸ್ಟ್ 11ರವರೆಗೆ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಈ ಬಾರಿ 50ಲಕ್ಷ ಹೊಸ ಸದಸ್ಯತ್ವದ ಗುರಿ ಹೊಂದಲಾಗಿದೆ. ಕಳೆದ ಬಾರಿ 80 ಲಕ್ಷ ಮಂದಿ ಬಿಜೆಪಿ ಸದಸ್ಯರಾಗಿದ್ದರು. ಆಗಸ್ಟ್ 10 ಮತ್ತು 11 ರಂದು ನಮ್ಮ ಶಾಸಕರು ಹಾಗೂ ಪಕ್ಷದ ಎಲ್ಲ ಪದಾಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಾರೆ. ಬಿಬಿಎಂಪಿ ಚುನಾವಣೆಗೆ ನಾವು ಸಿದ್ಧರಾಗಬೇಕಾಗಿದೆ ಎಂದು ತಿಳಿಸಿದರು.

ಪಕ್ಷದ ನಿರ್ಧಾರ ಅಂತಿಮ

ಉಪಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ ಬಿ.ವೈ.ವಿಜಯೇಂದ್ರ, ನಮ್ಮದು ರಾಷ್ಟ್ರೀಯ ಪಕ್ಷ. ಯಾರು ಸ್ಪರ್ಧೆ ಮಾಡಬೇಕೆಂಬ ತೀರ್ಮಾನವನ್ನು ವರಿಷ್ಠರು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ಕೆ.ಆರ್. ಪೇಟೆಯಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ, ನೀವು ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯ ಅಂತಹ ತೀರ್ಮಾನ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದುವರೆಗೆ ಅನರ್ಹ ಶಾಸಕರು ಬಿಜೆಪಿ ಸೇರುತ್ತೇವೆ ಎಂದು ಹೇಳಿಲ್ಲ. ಪಕ್ಷ ಸೇರ್ಪಡೆಗೆ ಅನರ್ಹರು ಮುಂದೆ ಬಂದಿಲ್ಲ. ಅನರ್ಹರ ಸೇರ್ಪಡೆ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾರ್ಯಕರ್ತರ ಅಭಿಪ್ರಾಯ ಕೇಳಿ ಅನರ್ಹರ ಸೇರ್ಪಡೆ ಬಗ್ಗೆ ರಾಜ್ಯಾಧ್ಯಕ್ಷರು ತೀರ್ಮಾನ ತಗೋತಾರೆ ಎಂದು ತಿಳಿಸಿದರು.

Intro:GggBody:KN_BNG_02_BJPABHIYANA_CM_SCRIPT_7201951

ಪಕ್ಷ ಸಂಘಟನೆ, ದೇವರ ದಯೆಯಿಂದ ಸಿಎಂ ಆಗಿರುವೆ: ಸಿಎಂ ಬಿಎಸ್ ವೈ

ಬೆಂಗಳೂರು: ಆಗಸ್ಟ್ 6ರಂದು ನಾನು ದೆಹಲಿಯಲ್ಲಿ ನಮ್ಮೆಲ್ಲ ಸಂಸದರನ್ನು ಭೇಟಿ ಮಾಡಿ, ರಾಜ್ಯದ ಎಲ್ಲ ಬಾಕಿ ಇರುವ ಅನುದಾನ ಬಿಡುಗಡೆ ಬಗ್ಗೆ ಚರ್ಚಿಸುತ್ತೇನೆ‌ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಬಿಜೆಪಿ ಸದಸ್ಯತಾ ಅಭಿಯಾನದಲ್ಲಿ ಮಾತನಾಡಿದ ಅವರು, ಆಗಸ್ಟ್ 5ರಿಂದ 8ರವರಗೆ ದೆಹಲಿಯಲ್ಲೇ ಇದ್ದು ಪಕ್ಷದ ಎಲ್ಲ ಪ್ರಮುಖರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.

ಕೆಆರ್ ಎಸ್, ಮಲೆನಾಡು ಭಾಗದಲ್ಲಿ ಮೋಡ ಬಿತ್ತನೆಗೆ ಸೂಚಿಸಿದ್ದೇನೆ. ಬರುವ ದಿನಗಳಲ್ಲಿ ಮಳೆ‌ ಬಂದು ಸುಭಿಕ್ಷೆ ನೆಲೆಸಲಿದೆ. ಒಂದು ಕಡೆ ಪಕ್ಷ ಸಂಘಟನೆ ಮತ್ತೊಂದು ಕಡೆ ದೇವರ ದಯೆಯಿಂದ ಸಿಎಂ ಆಗಿರುವೆ. ನಿನ್ನೆ ಡಿಸಿ, ಸಿಇಒಗಳ ಸಭೆ ಮಾಡಿ, ಬರ ಪರಿಸ್ಥಿತಿಯನ್ನ ಸಮರ್ಥ ವಾಗಿ ನಿರ್ವಹಿಸಲು ಸೂಚಿಸಿರುವೆ ಎಂದು ತಿಳಿಸಿದರು.

ಆಗಸ್ಟ್ 11ರವರಗೆ ಸದಸ್ಯತಾ ಅಭಿಯಾನ ನಡೆಯುತ್ತಿದೆ. ಕಳೆದ ಬಾರಿ 80ಲಕ್ಷ ಸದಸ್ಯರಾಗಿದ್ದಾರೆ. ಈ ಬಾರಿ 50ಲಕ್ಷ ಹೊಸ ಸದಸ್ಯತ್ವದ ಗುರಿ ಹೊಂದಲಾಗಿದೆ. ಈಗಾಗಲೇ 12ಲಕ್ಷ ಸದಸ್ಯರಾಗಿದ್ದಾರೆ. ಆಗಸ್ಟ್ 10 ಮತ್ತು 11 ರಂದು ನಮ್ಮೆಲ್ಲಾ ಶಾಸಕರು ಹಾಗೂ ಪಕ್ಷದ ಎಲ್ಲ ಪದಾಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಾರೆ. ಬಿಬಿಎಂಪಿ ಚುನಾವಣೆಗೆ ನಾವು ಸಿದ್ಧರಾಗಬೇಕಾಗಿದೆ ಎಂದು ತಿಳಿಸಿದರು.

ಪಕ್ಷದ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ:

ಉಪಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ ಬಿ.ವೈ.ವಿಜಯೇಂದ್ರ, ನಮ್ಮದು ರಾಷ್ಟ್ರೀಯ ಪಕ್ಷ. ಯಾರು ಸ್ಪರ್ಧೆ ಮಾಡಬೇಕೆಂಬ ತೀರ್ಮಾನವನ್ನು ವರಿಷ್ಠರು ಮಾಡುತ್ತಾರೆ ಎಂದು ತಿಳಿಸಿದರು.

ಕೆ ಆರ್ ಪೇಟೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ, ನೀವು ಸ್ಪರ್ಧಿಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಅಂಥ ತೀರ್ಮಾನ ಸಧ್ಯಕ್ಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದುವರೆಗೆ ಅನರ್ಹ ಶಾಸಕರು ಬಿಜೆಪಿ ಸೇರುತ್ತೇವೆ ಅಂತ ಹೇಳಿಲ್ಲ. ಪಕ್ಷ ಸೇರ್ಪಡೆಗೆ ಅನರ್ಹರು ಮುಂದೆ ಬಂದಿಲ್ಲ. ಅನರ್ಹರ ಸೇರ್ಪಡೆ ಗೊಂದಲ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾರ್ಯಕರ್ತರ ಅಭಿಪ್ರಾಯ ಕೇಳಿ ಅನರ್ಹರ ಸೇರ್ಪಡೆ ಬಗ್ಗೆ ರಾಜ್ಯಾಧ್ಯಕ್ಷರು ತೀರ್ಮಾನ ತಗೋತಾರೆ ಎಂದು ತಿಳಿಸಿದರು.Conclusion:Ggg
ETV Bharat Logo

Copyright © 2025 Ushodaya Enterprises Pvt. Ltd., All Rights Reserved.