ಬೆಂಗಳೂರು: ಕೇಂದ್ರದ ಮಾಜಿ ಸಚಿವ ಜೈಪಾಲ್ ರೆಡ್ಡಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
"ಸುದೀರ್ಘ ಅವಧಿಗೆ ಶಾಸಕರಾಗಿ, ಸಂಸದರಾಗಿ, ಕೇಂದ್ರದಲ್ಲಿ ಹಲವು ಪ್ರಮುಖ ಖಾತೆಗಳ ಹೊಣೆಗಾರಿಕೆ ವಹಿಸಿಕೊಂಡಿದ್ದ ಅವರು ಅತ್ಯಂತ ಪ್ರಬುದ್ಧ ಸಂಸದೀಯ ಪಟುವಾಗಿದ್ದರು. ಮೃತರ ಆತ್ಮಕ್ಕೆ ಭಗವಂತನು ಸದ್ಗತಿ ನೀಡಲಿ" ಎಂದು ಟ್ವೀಟ್ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.


ಖ್ಯಾತ ಸಾಹಿತಿ ಏರ್ಯ ನಾರಾಯಣ ಆಳ್ವ ಅವರ ನಿಧನಕ್ಕೂ ಸಿಎಂ ಬಿಎಸ್ವೈ ಸಂತಾಪ ಸೂಚಿಸಿದ್ದಾರೆ. ಸುದ್ಧಿ ತಿಳಿದು ತುಂಬಾ ದುಃಖವಾಗಿದೆ. ಸಾಹಿತ್ಯ ಕ್ಷೇತ್ರ ಹಾಗೂ ಹಿಂದೂ ಧಾರ್ಮಿಕ ಶ್ರದ್ಧಾ ಬಿಂದುಗಳನ್ನು ರಕ್ಷಿಸಿ ಪೋಷಿಸುವ ಕಾರ್ಯಗಳಿಗೆ ಅವರು ನೀಡಿದ್ದ ಕೊಡುಗೆ ಅಪಾರ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.