ETV Bharat / state

ಅತೃಪ್ತರ ಮನವೊಲಿಕೆಗೆ ಮುಂದಾದ ಸಿಎಂ: ರೆಬಲ್ ಟೀಂಗೆ ಬಿಎಸ್​ವೈ ಬುಲಾವ್! - Yadiyurappa news

ಅತೃಪ್ತರ ಸಭೆ ಬೆನ್ನಲ್ಲೇ ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಸಿಎಂ ಬಿಎಸ್​ವೈ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಸಭೆ ಬಗ್ಗೆ ಪ್ರಸ್ತಾಪಿಸಿದ್ದಾರೆ.

CM  will  held meeting with Rebel MLAs
ಅತೃಪ್ತರ ಮನವೊಲಿಕೆಗೆ ಮುಂದಾದ ಸಿಎಂ
author img

By

Published : May 29, 2020, 9:04 AM IST

ಬೆಂಗಳೂರು: ಅತೃಪ್ತರ ಮನವೊಲಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದು, ಇಂದು 11 ಗಂಟೆಗೆ ನಿವಾಸಕ್ಕೆ ಆಗಮಿಸುವಂತೆ ಅತೃಪ್ತರಿಗೆ ಸಿಎಂ ಬುಲಾವ್ ನೀಡಿದ್ದಾರೆ.

ಅತೃಪ್ತರ ಸಭೆ ಬೆನ್ನಲ್ಲೇ ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಸಿಎಂ ಬಿಎಸ್​ವೈ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಸಭೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ, ಸಭೆ ನಡೆಸಿಲ್ಲ ಎಂದು ನಿರಾಣಿ ಸ್ಪಷ್ಟೀಕರಣ ನೀಡಿದ್ದು, ಇದೆಲ್ಲಾ ಕೇವಲ ವದಂತಿ. ಇದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.

11 ಗಂಟೆಗೆ ನಿವಾಸಕ್ಕೆ ಆಗಮಿಸುವಂತೆ ನಿರಾಣಿಗೆ ಸಿಎಂ ಸೂಚನೆ ನೀಡಿದ್ದು, ಉಮೇಶ್ ಕತ್ತಿಯವರನ್ನೂ ಕರೆದುಕೊಂಡು ಬನ್ನಿ ಎಂದು ತಿಳಿಸಿದ್ದಾರೆ. ಅತೃಪ್ತರ ಜೊತೆ ಬರುವಂತೆ ತಾಕೀತು ಮಾಡಿದ್ದಾರೆ. 10.30 ರಿಂದ ಸಂಜೆ 4.30 ರವರೆಗೂ ಬಿಡುವಿಲ್ಲದ ಸಭೆಯನ್ನು ಸಿಎಂ ಈಗಾಗಲೇ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಲುದ್ದೇಶಿಸಿದ್ದು, ಮಾತುಕತೆಗೆ ಮುಂದಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.