ETV Bharat / state

ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ, ನಾವೇನು ಪುಕ್ಕಟ್ಟೆ ಕೇಳಿದ್ವಾ? : ಸಿಎಂ ಸಿದ್ದರಾಮಯ್ಯ - ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಕೇಂದ್ರ ಸರ್ಕಾರ ಅನ್ನಭಾಗ್ಯಕ್ಕೆ ಅಕ್ಕಿ ಕೊಡುತ್ತಿಲ್ಲ. ಮೊದಲು ಅಕ್ಕಿ ಕೊಡುವುದಾಗಿ ಹೇಳಿ ಈಗ ಕೊಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

cm-siddaramaih-slams-central-govt-on-annabhagya-yojana
ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ನಾವೇನು ಪುಕ್ಕಟ್ಟೆ ಕೇಳಿದ್ವಾ? : ಸಿಎಂ ಸಿದ್ದರಾಮಯ್ಯ
author img

By

Published : Jun 24, 2023, 4:07 PM IST

Updated : Jun 24, 2023, 4:32 PM IST

ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ, ನಾವೇನು ಪುಕ್ಕಟ್ಟೆ ಕೇಳಿದ್ವಾ? : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಮೊದಲು ಅಕ್ಕಿ ಕೊಡುತ್ತೇವೆ ಎಂದಿದ್ದರು. ಈಗ ಅಕ್ಕಿ ಕೊಡಲ್ಲ ಅಂತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ಗಾಂಧಿ ಭವನದಲ್ಲಿ ಆಯೋಜಿಸಿದ್ದ 20ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಮೊದಲು ಅಕ್ಕಿ ಕೊಡುತ್ತೇವೆ ಎಂದು ನಂತರ ಕೊಡಲ್ಲ ಅಂದರು. ನಾವೇನು ಅಕ್ಕಿಯನ್ನು ಪುಕ್ಕಟ್ಟೆ ಕೇಳಿದ್ವಾ? ತಿಂಗಳಿಗೆ 840 ಕೋಟಿ ರೂಪಾಯಿ ಅಕ್ಕಿಗೆ ಬೇಕು. ಅಕ್ಕಿ ಇಟ್ಕೊಂಡು ಕೊಡಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.

ಹೆಣ್ಣುಮಕ್ಕಳಿಗೆ 2000 ರೂಪಾಯಿ ಕೊಡ್ತೇವೆ ಎಂದಿದ್ದೆವು. ಅದನ್ನು ಕೊಡೋಕೆ ಎಚ್ಚರಿಕೆಯಿಂದ ಮಾಡಬೇಕಲ್ವಾ? ಜನರ ತೆರಿಗೆ ಹಣ ನಮ್ಮಪ್ಪನ ಮನೆಯದ್ದಾ? ಅದು ಜನರ ಹಣ ಅಲ್ವೇ. ಅದಕ್ಕೆ ಮಹತ್ವ ಇಲ್ವೇ? ಅದನ್ನು ಬಹಳ‌ ಜಾಣತನದಿಂದ ಖರ್ಚು ಮಾಡಬೇಕಲ್ವಾ?. 200 ಯೂನಿಟ್ ವಿದ್ಯುತ್ ಕೊಡ್ತೇವೆ ಅಂದಿದ್ದೇವೆ. ನಿನಗೂ ಫ್ರೀ ನನಗೂ ಫ್ರೀ ಅಂದ್ರಿ. ಈಗ ಲಿಮಿಟ್ ಮಾಡ್ತೀರ ಅಂತ ಕೇಳ್ತಿದ್ದಾರೆ. 60-70 ಯೂನಿಟ್ ಮಾಡೋರಿಗೆ ಅಷ್ಟು ಕೊಡ್ತೇವೆ. ನೀವು 200 ಯೂನಿಟ್ ಅಂದ್ರಿ ಅಂತ ಕೇಳ್ತಾರೆ. ಇದನ್ನೆಲ್ಲ ಹೇಳಬಾರದು, ಆದ್ರೂ ಹೇಳ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

59 ಸಾವಿರ ಕೋಟಿ‌ ರೂಪಾಯಿಯನ್ನು ಗ್ಯಾರಂಟಿಗಳಿಗೆ ನೀಡಬೇಕು. ಕಾಂಗ್ರೆಸ್ ನ ಐದು ಗ್ಯಾರಂಟಿಗಳಿಗೆ ಇಷ್ಟು ಮೊತ್ತದ ಹಣ ಬೇಕಾಗುತ್ತೆ. ಜನರಿಗೆ ಕೊಟ್ಟ ಭರವಸೆ ಜಾರಿಗೆ ಬಜೆಟ್ ಮಂಡಿಸಬೇಕಿದೆ. ಹಿಂದಿನವರು ಯಾವ ಭರವಸೆ ಈಡೇರಿಸಲಿಲ್ಲ. 15 ಲಕ್ಷ ಪ್ರತಿಯೊಬ್ಬರಿಗೆ ಕೊಡ್ತೇವೆ ಅಂದ್ರು ಕೊಟ್ರಾ? ಆದಾಯ ದುಪ್ಪಟ್ಟು ಮಾಡ್ತೇವೆ ಅಂದ್ರು ಮಾಡಿದ್ರಾ? ಅಚ್ಛೆ ದಿನ್ ಆಯೇಂಗಾ ಅಂದ್ರು ಏನು ಮಾಡಿದ್ರು? ಯಡಿಯೂರಪ್ಪನವರು ಏನೋ ಹೇಳಿದ್ರು, ಅದಕ್ಕೆ ಕೋಪಿಸಿಕೊಳ್ಬೇಕೋ, ನಗಬೇಕೋ ಗೊತ್ತಿಲ್ಲ. ರೈತರ ಸಾಲಮನ್ನಾ ಮಾಡ್ತೇವೆ ಅಂದ್ರು ಮಾಡಿದ್ರಾ? ನೀರಾವರಿಗೆ 1.5 ಲಕ್ಷ ಕೋಟಿ ಕೊಡ್ತೇವೆ ಅಂದ್ರು. ಏನಾದ್ರೂ ಅವರು ಹಣ ಕೊಟ್ರಾ? ಅವರು ಈಗ ಧರಣಿ ಮಾಡ್ತಾರಂತೆ ಎಂದು ಬಿಎಸ್ ವೈ ಧರಣಿಗೆ ಸಿದ್ದರಾಮಯ್ಯ ‌ಎಚ್ಚರಿಕೆ ಕೊಟ್ಟರು.

ಸಾಹಿತಿಗಳಿಗೆ ಸಿಎಂ ಅಭಯ.. ಸಾಹಿತಿಗಳು ಅಂದ್ರೆ ಮೆದುಳು ಇದ್ದಂತೆ. ಹಾಗಾಗಿ ಫ್ರೀಡಂ ಆಫ್​ ಸ್ಪೀಚ್​ಗೆ ನೀವು ಹೆದರಬೇಕಿಲ್ಲ. ಇದಕ್ಕೆ ಧಕ್ಕೆ ಬರದಂತೆ ನಾವು ನೋಡಿಕೊಳ್ತೇವೆ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ ಕಾಯ್ತೇವೆ ಎಂದು ಸಾಹಿತಿಗಳಿಗೆ ಸಿಎಂ ಸಿದ್ದರಾಮಯ್ಯ ಅಭಯ ನೀಡಿದರು.

ಮಾ.ಕುಲಪತಿ ಮಲ್ಲಿಕಾಘಂಟಿ ಕೂಡ ಕುರುಬರು. ನಾನು‌ ಕೂಡ ಕುರುಬ. ಇಟ್ಸ್ ಎ ಫ್ಯಾಕ್ಟ್ ಅದ್ರಲ್ಲಿ ಅಂತಾದ್ದೇನು ಇಲ್ಲ. ಇಲ್ಲಿ ಸಮಾಜಕ್ಕೆ ನಾವು ಏನು ಕೊಟ್ವಿ ಅನ್ನೋದು ಮುಖ್ಯ. ಸಮಾಜದ ಅನೇಕ ನ್ಯೂನತೆ ತೆಗೆದುಹಾಕಬೇಕು. ಅಸಮಾನತೆಯನ್ನ ತೊಡೆದು ಹಾಕಬೇಕು. ಎಲ್ಲಿವರೆಗೆ ಅಸಮಾನತೆ ಇರುತ್ತೆ, ಅಲ್ಲಿಯವರೆಗೆ ದೇಶ ಅಭಿವೃದ್ಧಿಯಾಗಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ ಗಮನಹರಿಸಬೇಕು ಎಂದು ಸಿಎಂ ಸಿಎಂ ಸಿದ್ದರಾಮಯ್ಯ ಹೇಳಿದ್ರು.

ಒಬ್ಬ ವ್ಯಕ್ತಿ ಒಂದು ವೋಟು ಒಂದು ಮೌಲ್ಯ ಮಾಡಿದ್ದೇವೆ. ಅದೇ ರೀತಿ ಸಾಮಾಜಿಕವಾಗಿ ಮೌಲ್ಯ ಇರಬೇಕಲ್ವಾ? ಆರ್ಥಿಕವಾಗಿ ಒಂದು ವೋಟು, ಒಂದು ಮೌಲ್ಯವಿದೆ. ಅದರೆ ಸಾಮಾಜಿಕವಾಗಿ ಒಂದೇ ಮೌಲ್ಯವಿದ್ಯಾ? ಪುಸ್ತಕಗಳನ್ನ ಓದಬೇಕು,ಕಲಿಯಬೇಕು. ಜ್ಙಾನದ ಕಲಿಕೆಗೆ ನಾವೆಲ್ಲರೂ ವಿದ್ಯಾರ್ಥಿಗಳೇ. ಯಾರೂ‌ ಇಲ್ಲಿ ಸರ್ವಜ್ಙರಲ್ಲ ಎಂದು ಹೇಳಿದರು.

ಹಂಪಿ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಗಂಟಿ ಮಾತನಾಡಿ, ನಾನು ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡುತ್ತೇನೆ. ಮಾತನಾಡಿದ್ದಕ್ಕೆ ನನ್ನ ಮೇಲೆ ಕೇಸ್ ಬಿದ್ದಿವೆ. ಅಂತಹ ರಾಜಕೀಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನಾಳೆ ನಾನು ಕೋರ್ಟ್ ಗೆ ಹೋಗಬೇಕಿದೆ. ಹೆಣ್ಣುಮಕ್ಕಳು ಮಾತನಾಡದಂತಹ ಪರಿಸ್ಥಿತಿ ಇದೆ. ನಾನು ಹೇಳಿದ ಒಂದು ಸಾಲನ್ನು ಮಾತ್ರ ಮಾಧ್ಯಮಗಳು ಬಿತ್ತರಿಸುತ್ವೆ. ಅದನ್ನು ಇಟ್ಟುಕೊಂಡು ಪ್ರಚಾರ ಮಾಡ್ತಾರೆ. ವಾಟ್ಸಾಪ್ ಯೂನಿವರ್ಸಿಟಿಯಿಂದ ಪ್ರಚಾರ ಮಾಡ್ತಾರೆ. ನಮಗೆ ಹೇಗೆ ಹೊಡೆಯುತ್ತಾರೆ ಅಂದರೆ ಹೇಳೋಕೆ ಆಗಲ್ಲ. ಹೀಗಾಗಿ ಬರೆದುಕೊಂಡು ಬಂದು ಮಾತಾಡ್ತಿದೇನೆ ಎಂದು ವಿವರಿಸಿದರು.

ಉಚಿತ ಬಸ್ ಪ್ರಯಾಣದ ಬಗ್ಗೆ ಸಾಕಷ್ಟು ಚರ್ಚೆ ಮಾಡ್ತಿದಾರೆ. ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಬಸ್ ಉಚಿತ ಪ್ರಯಾಣ ಬಿಟ್ಟಿಯಲ್ಲ. ಮಹಿಳೆಯರು ಒಂದಲ್ಲ ಒಂದು ರೀತಿ ಹಣ ಕಟ್ತಾರೆ. ಸರ್ಕಾರಕ್ಕೆ ‌ಹಣವನ್ನ ಕೊಟ್ಟಿರುತ್ತಾರೆ. ಅದನ್ನೇ ಪುನಃ ಅವರಿಗೆ ಕೊಡ್ತಿದಾರೆ ಅಷ್ಟೇ. ಮಹಿಳೆಯರಿಗೆ ಪ್ರಯಾಣದ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಇದನ್ನ ಕಿತ್ತುಕೊಳ್ಳಬೇಡಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ : ನನ್ನ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ‌ ಶುರು, ಸಭಾಪತಿ ಮಾಡುವುದು ಪಕ್ಷಕ್ಕೆ ಬಿಟ್ಟದ್ದು: ಜಗದೀಶ್ ಶೆಟ್ಟರ್

Last Updated : Jun 24, 2023, 4:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.