ETV Bharat / state

ನಾನು ವೋಟು ಕೊಡದವರಿಗೂ ಸಿಎಂ, ಕಾಂಗ್ರೆಸೇತರ ಶಾಸಕರಿಗೂ ಸಿಎಂ: ಸಂವಿಧಾನ ಇಲ್ಲವಾಗಿದ್ದರೆ ನಾನು ಕುರಿ ಕಾಯುತ್ತಿರಬೇಕಿತ್ತು: ಸಿಎಂ ಸಿದ್ದರಾಮಯ್ಯ - etv bharat kannada

ಶಾಸಕರು ಎಲ್ಲಾ ಸಮಯದಲ್ಲೂ ವಿಧಾನಸಭೆಯಲ್ಲಿ ಇರಬೇಕು. ವಿಧಾನಸಭೆಗೆ ಬರುವುದರಿಂದ ಹಿರಿಯರು ಏನು ಮಾತನಾಡುತ್ತಾರೆ, ಸಂಸದೀಯ ಮಾತುಗಳು ಏನು ಎಂಬುದು ಅರ್ಥ ಆಗುತ್ತದೆ ಎಂದು ನೂತನ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.

Etv Bharatcm-siddaramaiah-speech-in-new-mlas-training-camp-held-in-nelamagala
ಸಂವಿಧಾನ ಇಲ್ಲವಾಗಿದ್ದರೆ ನಾನು ಕುರಿ ಕಾಯುತ್ತಿರಬೇಕಿತ್ತು: ಸಿಎಂ ಸಿದ್ದರಾಮಯ್ಯ
author img

By

Published : Jun 26, 2023, 5:24 PM IST

ಬೆಂಗಳೂರು: ನಾನು ವೋಟು ಕೊಟ್ಟವರಿಗೂ, ಕೊಡದವರಿಗೂ ಸಿಎಂ. ಕಾಂಗ್ರೆಸ್ ‌ಶಾಸಕರಿಗೂ, ಕಾಂಗ್ರೆಸೇತರ ಶಾಸಕರಿಗೂ ನಾನು ಸಿಎಂ ಆಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ನೆಲಮಂಗಲದಲ್ಲಿ ನೂತನ‌ ಶಾಸಕರಿಗಾಗಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ನಿಂದ ಸಿಎಂ ಆಗಿದ್ದೇನೆ. ನಾನು ಇಡೀ ರಾಜ್ಯಕ್ಕೆ ಸಿಎಂ. ರಾಜ್ಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ನಾವು ಯಾವುದೇ ತಾರತಮ್ಯ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

ಈಗಿನ‌ ಕಾಲದಲ್ಲಿ ಶಾಸಕ ಆಗುವುದು ಕಷ್ಟದ ಕೆಲಸ. ಹೋರಾಟ ಮಾಡಿ ವಿಧಾನಸಭೆಗೆ ಬಂದಿದ್ದಾರೆ. ಜನರು ನಿರೀಕ್ಷೆ ಇಟ್ಟಿದ್ದಾರೆ. ದಿನೇ ದಿನೆ ಕಾಲ ಕಳೆದಂತೆ ಜನರ ನಿರೀಕ್ಷೆ ಹೆಚ್ಚಾಗುತ್ತದೆ. ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ. ಯಾರು ಜನರ ಕಷ್ಟಗಳಿಗೆ ಸ್ಪಂದಿಸುತ್ತಾರೋ ಅಂತವರು ಮುಂದಿನ ಚುನಾವಣೆಯಲ್ಲಿ ಆರಿಸಿ ಬರಲು ಆಗುತ್ತದೆ. ಜನರನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ಬಾರಿ ಜಯಗಳಿಸಲು ಸಾಧ್ಯವಾಗಲ್ಲ ಎಂದು ನೂತನ ಶಾಸಕರಿಗೆ ಸಿಎಂ ಕಿವಿಮಾತು ಹೇಳಿದರು.

ಈಗ ಚುನಾವಣೆಗಳು ದುಬಾರಿ ಆಗುತ್ತಿವೆ. ಯಾರು ಅರ್ಹರಿದ್ದಾರೆ, ಪ್ರಮಾಣಿಕ ಚುನಾವಣೆ ಎದುರಿಸುತ್ತಾರೆ ಅಂತವರು ಗೆಲುವು ಸಾಧಿಸುವುದು ವಿರಳ. ರಾಜಕಾರಣ ಮಾಡಲು ಹಣವೂ ಬೇಕು. ಯಾರು ಜನರ ನಡುವೆ ಇರುತ್ತಾರೆ, ಜನರ ದನಿಯಾಗಿ ಕೆಲಸ ಮಾಡುತ್ತಾರೆ ಅವರು ರಾಜಕಾರಣದಲ್ಲಿ ಉಳಿಯಲು ಸಾಧ್ಯ. ರಾಜಕಾರಣ ಅನ್ನೋದು ದಿಮಾಕು, ಅಧಿಕಾರ ಮಜಾ ಮಾಡಲು ಇರುವುದು ಅಲ್ಲ. ರಾಜಕಾರಣ ಅನ್ನೋದು ಜನ ಸೇವೆ ಮಾಡಲು ಇರುವುದು. ಇದು ಇಲ್ಲದೇ ಹೋದರೆ ಜನಪ್ರತಿನಿಧಿಯಾಗಿ ಕೆಲಸ ಮಾಡಲು ಆಗಲ್ಲ ಎಂದರು.

ಬಹಳ ಜನ ಒಮ್ಮೆಯಾದರೂ ವಿಧಾನಸಭೆ ಮೆಟ್ಟಿಲು ಹತ್ತಬೇಕು ಅಂದುಕೊಂಡಿರುತ್ತಾರೆ. ಮೆಟ್ಟಿಲು ಹತ್ತಿದ ಮೇಲೆ ಒಳಗಡೆನೇ ಬರಲ್ಲ. ಈ ಅಟಿಟ್ಯುಡ್ ಬಿಡಬೇಕು. ಶಾಸಕರು ಎಲ್ಲಾ ಸಮಯದಲ್ಲೂ ವಿಧಾನಸಭೆಯಲ್ಲಿ ಇರಬೇಕು. ಬಹಳ ಜನ ಮಂತ್ರಿಗಳೇ ವಿಧಾನಸಭೆಗೆ ಬರುವುದಿಲ್ಲ. ವಿಧಾನಸಭೆಗೆ ಬರುವುದರಿಂದ ಹಿರಿಯರು ಏನು ಮಾತನಾಡುತ್ತಾರೆ, ಸಂಸದೀಯ ಮಾತುಗಳು ಏನು ಎಂಬುದು ಅರ್ಥ ಆಗುತ್ತದೆ ಎಂದು ಸಲಹೆ ನೀಡಿದರು.

ಹಣಕಾಸು ಖಾತೆ ಬೇಡ ಅಂದಿದ್ದೆ: 1994 ನಲ್ಲಿ ನಾನು ಹಣಕಾಸು ಸಚಿವನಾಗಿದ್ದೆ. ಆಗಿನ‌ ಸಿಎಂ ದೇವೇಗೌಡರಲ್ಲಿ ನನಗೆ ಹಣಕಾಸು ಖಾತೆ ಬೇಡ ಅಂದಿದ್ದೆ. ನಾನು ಆರ್ಥಿಕ‌ ತಜ್ಞ ಅಲ್ಲ ಅಂದಿದ್ದೆ. ಆದರೆ ದೇವೇಗೌಡರು ನೀನೇ ಖಾತೆ ನಿಭಾಯಿಸಬೇಕು. ನಮಗೆ ನಂಬಿಕಸ್ಥರು ಬೇಕು ಎಂದಿದ್ದರು. ಸಿದ್ದರಾಮಯ್ಯಗೆ ಕುರಿ ಎಣಿಕೆ ಮಾಡಲು ಆಗಲ್ಲ. ಹೇಗೆ ರಾಜ್ಯದ ಹಣಕಾಸು ನಿಭಾಯಿಸಯತ್ತಾರೆ ಎಂದು ಆಗ ಲಂಕೇಶ್ ಪತ್ರಿಕೆಯಲ್ಲಿ ಬರೆದಿದ್ದರು. ನಾನು ಅದನ್ನು ಸವಾಲಾಗಿ ಸ್ವೀಕರಿಸಿದೆ ಎಂದು ಮೆಲುಕು ಹಾಕಿದರು.

ಬಳಿಕ ಆರ್ಥಿಕ ತಜ್ಞರ ಜೊತೆ ಚರ್ಚಿಸಿ ತಿಳಿದುಕೊಂಡು ಬಜೆಟ್ ಮಂಡಿಸಿದ್ದೆ. ನಾವೇನು ಬುದ್ಧಿವಂತರಲ್ಲ. ಶಾಸಕರಾದಾಗ, ಮಂತ್ರಿಯಾದ ಕೂಡಲೇ ಬುದ್ಧಿವಂತರಾಗಲ್ಲ. ಎಷ್ಟೋ ಅನುಭವಿ ಶಾಸಕರು ಲೈಬ್ರರಿಗೆ ಹೋಗಿಲ್ಲ. ಏನಪ್ಪಾ ಜಮೀರ್ ನೀನು ಯಾವತ್ತಾದರೂ ಹೋಗಿದ್ದೀಯಾ ಎಂದು ಕಾಲೆಳೆದರು. ನಾನು ಎರಡು ಬಾರಿ ವಿಧಾನಸಭೆ ಚುನಾವಣೆ ಹಾಗೂ ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಇದ್ದೇ ಇರುತ್ತೆ. ಜನರ ಜೊತೆ ನೀವು ಯಾವತ್ತೂ ಬೇಸರ ಮಾಡಿಕೊಳ್ಳಬಾರದು ಎಂದರು.

ಸದನ ನಡೆಯುವಾಗ ಕೆಲ ನಿಯಮಾವಳಿ ಮಾಡಿದ್ದೇವೆ. ಅದನ್ನು ಓದಬೇಕು. ಇಲ್ಲವಾದರೆ ನಿಮಗೆ ಏನೂ ಪ್ರಶ್ನೆ ಕೇಳಬೇಕು ಎಂದು ಗೊತ್ತಾಗಲ್ಲ. ತಪ್ಪದೆ ಸದನಕ್ಕೆ ಹಾಜರಾಗಬೇಕು, ಜನರ ಜೊತೆ ಒಳ್ಳೆಯ ರೀತಿ ಇರಬೇಕು. ಸಂವಿಧಾನ ತಿಳಿದುಕೊಳ್ಳಬೇಕು. ಅದು ಗೊತ್ತಿಲ್ಲವಾದರೆ ಆತ ಉತ್ತಮ ಸಂಸದೀಯ ಪಟು ಆಗಲು ಸಾಧ್ಯವಿಲ್ಲ. ಸಂವಿಧಾನ ವಿರುದ್ಧವಾದ ಕಾನೂನು ಮಾಡಲು ಸಾಧ್ಯವಿಲ್ಲ. ನಾವು ಏನೇ ಕಾನೂನು ಮಾಡಿದರೂ ಅದು ಸಮಗ್ರ ಸಮಾಜಕ್ಕೆ, ಜನರಿಗೆ ಪೂರಕವಾಗಿರಬೇಕು‌.‌ ಜನರಿಗೆ ಮಾರಕವಾದ ಕಾನೂನು ಮಾಡಬಾರದು ಎಂದು ಹೇಳಿದರು.

ಸಂವಿಧಾನ ಇಲ್ಲವಾದರೆ ನಾನು ಪ್ರತಿಪಕ್ಷ ನಾಯಕ ಕೂಡ ಆಗುತ್ತಿರಲಿಲ್ಲ. ನೀವು ಶಾಸಕರೂ ಆಗುತ್ತಿರಲಿಲ್ಲ ಎಂದು ವಿಧಾನಸಭೆಯಲ್ಲಿ ಸಿ.ಟಿ. ರವಿ, ಈಶ್ವರಪ್ಪಗೆ ಹೇಳಿದ್ದೆ. ಸಂವಿಧಾನ ಇಲ್ಲವಾಗಿದ್ದರೆ ನಾನು ಕುರಿ ಕಾಯುತ್ತಿರಬೇಕಿತ್ತು. ಸಿ.ಟಿ. ರವಿ ದನ ಕುರಿ ಕಾಯುತ್ತಿರಬೇಕಿತ್ತು. ಕೆ.ಎಸ್. ಈಶ್ವರಪ್ಪ ಎಮ್ಮೆ, ಕೋಣ ಕಾಯುತ್ತಿರಬೇಕಿತ್ತು. ಸಂವಿಧಾನ ವಿರುದ್ಧವಾಗಿ ನಡೆದರೆ ಹಿಟ್ಲರ್ ಆಡಳಿತ ಆಗುತ್ತದೆ ಎಂದರು.

ಬಜೆಟ್ ಅಂದರೆ ಏನು ಎಂದು ತಿಳಿದುಕೊಳ್ಳಬೇಕು. ಕೆಲವರಿಗೆ ಬಜೆಟ್ ಅಂದರೆ ಅರ್ಥವಾಗಲ್ಲ. ಶಾಸಕ ಬಿ.ವೈ. ವಿಜಯೇಂದ್ರನಿಗೆ ಅರ್ಥವಾಗಬಹುದು. ರಾಜಸ್ವ ಸ್ವೀಕಾರ, ವೆಚ್ಚದ ಹಣಕಾಸು ಹೇಳಿಕೆಯೇ ಬಜೆಟ್ ಆಗಿದೆ. ಸಂಪನ್ಮೂಲ‌ ಕ್ರೋಢೀಕರಣ ಹಾಗೂ ಅದರ ಮರುಹಂಚಿಕೆಯೇ ಬಜೆಟ್ ಆಗಿದೆ ಎಂದು ನೂತನ ಶಾಸಕರಿಗೆ ಸಿದ್ದರಾಮಯ್ಯ ಪಾಠ ಮಾಡಿದರು. ಕೋರ್ಟ್ ನಿಮ್ಮನ್ನು ಪ್ರಶ್ನೆ ಮಾಡದಿರಬಹುದು.‌ ಆದರೆ ಜನತಾ ಕೋರ್ಟ್ ನಿಮ್ಮನ್ನು ಪ್ರಶ್ನೆ ಮಾಡುತ್ತದೆ. ಹಾಗಾಗಿ ಹುಷಾರಾಗಿರಿ. ಸದನದ ಗುಣಮಟ್ಟ ಕಡಿಮೆಯಾಗಿದೆ ಎಂದು ಜನರು ಚರ್ಚೆ ಮಾಡುತ್ತಿದ್ದಾರೆ. ಇದಕ್ಕೆ ನಾವು ಜವಾಬ್ದಾರರು. ನೀವು ಮಾತನಾಡುವಾಗ ಪ್ರಮಾಣಿಕತೆ ಇರಬೇಕು ಎಂದರು.

ನಾನು ಯಾವತ್ತೂ ವಾಟಾಳ್‌ ನಾಗರಾಜ್ ನೆನಪಿಸುತ್ತೇನೆ. ಅವರು ಒಂದು ಕ್ಷಣವೂ ಸದನ ಬಿಟ್ಟು ಹೋಗುತ್ತಿರಲಿಲ್ಲ. ನಾನು ಇಷ್ಟು ದಿನ ನಾಲ್ಕೈದು ಬಾರಿ ಅಸೆಂಬ್ಲಿ ಬಿಟ್ಟು ಹೋಗಿದ್ದೆ. ಆದರೆ ವಾಟಾಳ್ ಒಂದು ಸೆಕೆಂಡೂ ಅಸೆಂಬ್ಲಿ ಬಿಟ್ಟು ಹೋಗುತ್ತಿರಲಿಲ್ಲ‌. ಆತರದ ವ್ಯಕ್ತಿಯನ್ನೂ ನಾನು ನೋಡಿರಲಿಲ್ಲ ಎಂದು ಸಿಎಂ ಹೊಗಳಿದರು.

3.35 ಲಕ್ಷ ಕೋಟಿ ಬಜೆಟ್ ಮಂಡಿಸಲಿದ್ದೇನೆ: ಕೆಂಗಲ್ ಹನುಮಂತಯ್ಯರಿದ್ದಾಗ ರಾಜ್ಯದ ಬಜೆಟ್ ಗಾತ್ರ 21.3 ಕೋಟಿ ರೂ. ಇತ್ತು. ಈವತ್ತು ಅದು 3.09 ಲಕ್ಷ ಕೋಟಿ ರೂ.‌ ಇದೆ. ಈ ಬಾರಿ ಅದು 3.30 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಆಗಬಹುದು‌. ಗ್ಯಾರಂಟಿಗಳಿಗೆ 50 ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂದು ಇದೇ ವೇಳೆ ಸಿಎಂ ಬಹಿರಂಗಪಡಿಸಿದರು. ಶ್ರೀಮಂತರ ಮೇಲೆ ತೆರಿಗೆ ಹಾಕಬೇಕು. ಬಡವರಿಗೆ ತೆರಿಗೆ ಹಾಕಬಾರದು. ಸುಮ್ಮನೆ ಬಂದ್ಯಾ ಪುಟ್ಟ, ಹೋದ್ಯಾ ಪುಟ್ಟ ಆಗಬಾರದು. ವಿಧಾನಸಭೆಯಲ್ಲಿ ನಿಮ್ಮ ಫುಟ್ ಪ್ರಿಂಟ್ಸ್ ಇರಬೇಕು ಎಂದು ತಿಳಿಸಿದರು.

ನಾನು ಮೊದಲ ಬಾರಿ ವಿಧಾನಸಭೆಯಲ್ಲಿ ಮಾತನಾಡಿದ್ದು ಪ್ರಾಥಮಿಕ ಶಿಕ್ಷಣದ ಬಗ್ಗೆ. ಗ್ರಾಮೀಣ ಪ್ರದೇಶದಲ್ಲಿನ ಸಮಸ್ಯೆ, ಸೌಲಭ್ಯಗಳ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಎರಡನೇ ಬಾರಿ ಅಧಿಕಾರದ ವಿಕೇಂದ್ರೀಕರಣದ ಬಗ್ಗೆ ಮಾತನಾಡಿದ್ದೆ ಎಂದು ಮೆಲುಕು ಹಾಕಿದರು. ನಾನು ಸಿಎಂ ಆಗುತ್ತೇನೆ ಎಂದು ಕನಸು ಕಂಡಿರಲಿಲ್ಲ. ನನಗೆ ಆ ತರದ ಹಿನ್ನೆಲೆಯೂ ಇದ್ದಿಲ್ಲ. ಹಣಕಾಸು ಸಚಿವನಾಗಿದ್ದಾಗ ಸಿಎಂ ಆಗಬೇಕು ಅನ್ನಿಸಿತು. ದೇವೇಗೌಡರು ಪಿಎಂ ಆದಾಗ ನನಗೆ ಸಿಎಂ ಆಗಬೇಕು ಎಂದು ಅನ್ನಿಸಿತು ಎಂದು ಇದೇ ವೇಳೆ ನೂತನ ಶಾಸಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಮೊದಲು 63,000 ಖರ್ಚು ಮಾಡಿ ಗೆದ್ದಿದ್ದೆ: ನೆಲಮಂಗಲ ಶಾಸಕ ಶ್ರೀನಿವಾಸ್ ಪ್ರಶ್ನೆಗೆ ಉತ್ತರಿಸುತ್ತಾ, ನಾನು 1980ರಲ್ಲಿ ಲೋಕಸಭೆಯಲ್ಲಿ ನಿಂತು ಕೆಟ್ಟದಾಗಿ ಸೋತಿದ್ದೆ. 1983 ನಲ್ಲಿ ಪಕ್ಷೇತರರಾಗಿ ನಿಂತೆ. ಆವಾಗ ಚುನಾವಣೆಗೆ ಖರ್ಚು ಮಾಡಿರುವುದು 63,000 ರೂ. ಆವಾಗ ಎರಡೇ ಕಾರು ಬಳಕೆ ಮಾಡಿದ್ದೆ. ಈಗ ಆ ಪರಿಸ್ಥಿತಿ ಇದ್ದಿಲ್ಲ. ಆಗ ಅಷ್ಟು ಜಾತಿ ಇದ್ದಿಲ್ಲ. ಈಗ ಯುವಕರು ತಮಗೆ ಅನಿಸಿದವರಿಗೆ ಮತ ಹಾಕುತ್ತಾರೆ. ಈಗ ಪಕ್ಷಾಂತರ ಜಾಸ್ತಿಯಾಗಿದೆ. ಲಂಗು ಲಗಾಮಿ ಇಲ್ಲದೆ ಪಕ್ಷಾಂತರ ನಡೆಯುತ್ತದೆ. ಈ ಹಿಂದೆ ಆಪರೇಷನ್ ಕಮಲ, ಆಪರೇಷನ್ ಹಸ್ತ, ಆಪರೇಷನ್ ಜೆಡಿಎಸ್ ಇದ್ದಿಲ್ಲ. ಈಗ ಅದು ಹೆಚ್ಚಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಾನು ಕಾನೂನು ಓದುತ್ತಿದ್ದೆ. ರೈತ ಮುಖಂಡ ನಂಜುಡಸ್ವಾಮಿ ಅಧ್ಯಾಪಕರಾಗಿದ್ದರು. ಅವರ ಸಂಪರ್ಕಕ್ಕೆ ಬಂದೆ. ಆವಾಗ ಅವರು ದೇಶದ ರಾಜಕಾರಣದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ನಾನು ರಾಜರಣಕ್ಕೆ ಬರಲು ಪ್ರೊ.ನಂಜುಡಸ್ವಾಮಿ ಕಾರಣ ಎಂದ ಸಿಎಂ, ನಾನು ತುರ್ತು ಪರಿಸ್ಥಿತಿಯನ್ನು ವಿರೋಧ ಮಾಡಿದ್ದೆ. ಪೊಲೀಸ್ ಠಾಣೆಯಲ್ಲಿ ನನ್ನನ್ನು ಒಂದು ದಿನ ಇಟ್ಟಿದ್ದರು. ತುರ್ತು ಪರಿಸ್ಥಿತಿ ವಿರೋಧಿಸಿ ಕರಪತ್ರ ಹಂಚುತ್ತಿದೆ. ಆಗ ದೇವರಾಜ್ ಅರಸ್ ಠಾಣೆಯವರು ನನ್ನನ್ನು ಒದ್ದು ಒಳಗೆ ಹಾಕಿದ್ದರು ಎಂದು ಸ್ಮರಿಸಿದರು.

ಮೊಬೈಲ್ ಬಳಕೆ ಮಾಡಲ್ಲ: ನಾನು ಮೊಬೈಲ್ ಬಳಕೆ ಮಾಡಿಲ್ಲ. ಮೊಬೈಲ್ ಬಂದಾಗ ಮೊದಲು ಆರು ತಿಂಗಳು ಬಳಕೆ ಮಾಡಿದ್ದೆ. ಜನರು ರಾತ್ರಿಯೆಲ್ಲಾ ಫೋನ್ ಮಾಡುವವರು. ಕೆಲವರು ಕುಡಿದು ಬಿಟ್ಟು ಫೋನ್ ಮಾಡುತ್ತಿದ್ದರು. ಹಾಗಾಗಿ ಮೊಬೈಲ್ ಬಿಟ್ಟೆ. ಈಗ ನಮ್ಮ ಪಿಎಸ್, ಗನ್​ಮ್ಯಾನ್​ಗಳ ಜೊತೆ ಫೋನ್ ಇರುತ್ತದೆ ಎಂದರು. ಸುಳ್ಯ ಶಾಸಕಿ ಭಾಗೀರಥಿ ನಿಮಗೆ ತೃಪ್ತಿ ಕೊಟ್ಟ ಪಕ್ಷ ಯಾವುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ನನಗೆ ಸಂವಿಧಾನವೇ ಗುರು. ಸಂವಿಧಾನ ಪ್ರಕಾರ ಯಾವ ಪಕ್ಷ ನಡೆಯುತ್ತೆ, ಆ ಪಕ್ಷ ನಮಗೆ ತೃಪ್ತಿ ಕೊಡುತ್ತದೆ ಎಂದರು.

ಇದನ್ನೂ ಓದಿ: ಪ್ರತಿ ಜೀವಿಗೂ ಬದುಕುವ ಹಕ್ಕಿದೆ : ಅರಣ್ಯ, ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.