ETV Bharat / state

ತಂತ್ರಜ್ಞಾನದ ಅಭಿವೃದ್ಧಿ ಎಲ್ಲರಿಗೂ ದೊರೆಯುವಂತೆ ಮಾಡುವುದು ನಮ್ಮ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ - etv bharat kannada

ದೇಶದ ಡಿಜಿಟಲ್ ಭವಿಷ್ಯವನ್ನು ಕರ್ನಾಟಕ ಮುನ್ನಡೆಸಲು ಸಾಧ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

cm-siddaramaiah-speech-in-bangalore-tech-summit
ತಂತ್ರಜ್ಞಾನದ ಅಭಿವೃದ್ಧಿ ಎಲ್ಲರಿಗೂ ದೊರೆಯುವಂತೆ ಮಾಡುವುದು ನಮ್ಮ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ
author img

By ETV Bharat Karnataka Team

Published : Sep 4, 2023, 5:10 PM IST

ಬೆಂಗಳೂರು: ತಂತ್ರಜ್ಞಾನದ ಅಭಿವೃದ್ಧಿ ಎಲ್ಲರಿಗೂ ದೊರೆಯುವಂತೆ ಮಾಡುವುದು ನಮ್ಮ ಜವಾಬ್ದಾರಿ. ತಂತ್ರಜ್ಞಾನ ಮಾನವನ ಅಭಿವೃದ್ಧಿಗೆ ಸಾಧನವಾಗಿದೆ. ಅಂತರಗಳನ್ನು ಕಡಿಮೆ ಮಾಡಿ ಜೀವನಮಟ್ಟ ಸುಧಾರಣೆ, ಸುಸ್ಥಿರ ಅಭಿವೃದ್ಧಿ ಪ್ರೇರೇಪಿಸುವ ಶಕ್ತಿಯನ್ನು ಇದು ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬೆಂಗಳೂರು ಟೆಕ್ ಸಮ್ಮಿಟ್ ನಿಮಿತ್ತ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಯಮಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಡಿಜಿಟಲ್ ಭವಿಷ್ಯವನ್ನು ಕರ್ನಾಟಕ ಮುನ್ನಡೆಸಲು ಸಾಧ್ಯವಿದೆ. ನಾವೀನ್ಯತಾ ತಂತ್ರಜ್ಞಾನ ಹಾಗೂ ಪ್ರಗತಿಯೆಡೆಗೆ ನಮ್ಮ ಬದ್ಧತೆಗೆ ಬೆಂಗಳೂರು ಟೆಕ್ ಸಮ್ಮಿಟ್ ಸಾಕ್ಷಿಯಾಗಿದೆ. ತಂತ್ರಜ್ಞಾನದಲ್ಲಿ ನಮ್ಮ ಸಾಧನೆಯನ್ನು ಮಾತ್ರವಲ್ಲದೇ ನಮ್ಮ ರಾಜ್ಯದ ಅದಮ್ಯ ಚೇತನವನ್ನು ವಾಖ್ಯಾನಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನಕ್ಕೆ ಇನ್ನಷ್ಟು ವೇಗವನ್ನು ನೀಡಲು ನಮಗಿರುವ ಅಚಲ ಬದ್ಧತೆಯನ್ನು ಟೆಕ್ ಸಮ್ಮಿಟ್ ಪ್ರತಿನಿಧಿಸುತ್ತದೆ ಎಂದರು.

ರಾಜಕೀಯ ವ್ಯವಸ್ಥೆಯಲ್ಲಿ ಸದಾ ಸ್ಥಿರತೆ: 80ರ ದಶಕದ ಅಂತ್ಯ ಹಾಗೂ 90ರ ದಶಕದಲ್ಲಿಯೇ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ದೂರದೃಷ್ಟಿಯಂತೆ ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಐಟಿ, ಬಿಟಿಗೆ ಭದ್ರ ಬುನಾದಿ ಹಾಕಿತ್ತು. ನೀತಿ ನಿರೂಪಣೆ, ತಂತ್ರಜ್ಞಾನ ಹಾಗೂ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲಾಯಿತು. ಕರ್ನಾಟಕದ ಮೊಟ್ಟಮೊದಲ ಐಟಿ ನೀತಿಯನ್ನು ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ 1992ರಲ್ಲಿ ರೂಪಿಸಿತು. ಈ ನೀತಿಯು ದೇಶಕ್ಕೇ ಮಾದರಿ ಐಟಿ ನೀತಿಯಾಗಿ ಹೊರಹೊಮ್ಮಿತು. ಕಾಂಗ್ರೆಸ್ ಸರ್ಕಾರ ರಾಜಕೀಯ ವ್ಯವಸ್ಥೆಯಲ್ಲಿ ಸದಾ ಸ್ಥಿರತೆಯನ್ನು ತಂದುಕೊಟ್ಟಿದ್ದು, ಆಡಳಿತದಲ್ಲಿ ಸುಸ್ಥಿರತೆ ತರಲು ಹಾಗೂ ದೀರ್ಘಾವಧಿ ಹೂಡಿಕೆಗಳನ್ನು ಕೈಗೊಳ್ಳಲು ಶ್ರಮಿಸಿದೆ ಎಂದರು.

ವಿಶ್ವದಲ್ಲಿಯೇ ಮೊದಲ ಸ್ಥಾನಕ್ಕೇರಲು ಸಮರ್ಥ: ಬೆಂಗಳೂರು ಐಟಿ ರಾಜಧಾನಿಯಾಗಿದ್ದು ಅಗತ್ಯ ಮೂಲಸೌಕರ್ಯಗಳನ್ನು ಹೊಂದಿದೆ. ಬೆಂಗಳೂರು ಐಟಿ/ಬಿಟಿ ರಫ್ತಿನಲ್ಲಿ ಮುಂಚೂಣಿಯಲ್ಲಿದೆ. ವಿಶ್ವದಲ್ಲಿಯೇ ಮೊದಲ ಸ್ಥಾನಕ್ಕೇರಲು ಎಲ್ಲ ಸಾಮರ್ಥ್ಯವನ್ನು ಹೊಂದಿದ್ದು ನಮ್ಮ ಸರ್ಕಾರ ಈ ಗುರಿಯನ್ನು ಸಾಧಿಸಲು ಹಿಂದೆ ಬೀಳುವುದಿಲ್ಲ ಎಂದರು. ನಾವೀನ್ಯತಾ ವಲಯಗಳು ಬೆಂಗಳೂರಿನಲ್ಲಿ ನೆಲೆಸಿರುವುದು ಅತ್ಯಂತ ಸೂಕ್ತವಾಗಿದೆ ಐಒಟಿ, ಕೃತಕ ಬುದ್ದಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್ ಮುಂತಾದವುಗಳಲ್ಲಿಯೂ ಮುಂಚೂಣಿಯಲ್ಲಿದೆ. ಜಾಗತಿಕ ಹೂಡಿಕೆ ಹಾಗೂ ಪ್ರತಿಭೆಗಳನ್ನು ಕರ್ನಾಟಕಕ್ಕೆ ಆಕರ್ಷಿಸಲು ಇದು ಸಹಾಯಕವಾಗಿದೆ. ನಾವು ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು, ಉತ್ಕೃಷ್ಟತಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಸಿಎಂ ವಿವರಿಸಿದರು.

ಕೌಶಲ್ಯ ಮಂಡಳಿ ರಚನೆ: ಉದ್ಯಮಶೀಲತೆ ಹಾಗೂ ಶಿಕ್ಷಣವನ್ನು ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ರೂಪಸಿ ಭವಿಷ್ಯದ ಬೇಡಿಕೆಗಳನ್ನು ಪರಿಣಾಮಕಾರಿಯಾಗಿ ಪೂರೈಸುವಂತೆ ಮಾಡಲಾಗಿದೆ. ಕೌಶಲಾಭಿವೃದ್ಧಿಗೆ ಪ್ರತ್ಯೇಕ ಇಲಾಖೆ ರಚಿಸಿದ ಮೊದಲ ರಾಜ್ಯ ಕರ್ನಾಟಕ. ಸಂಬಂಧಪಟ್ಟ ಎಲ್ಲಾ ಪಾಲುದಾರರ ಸಹಯೋಗದೊಂದಿದೆ ಕೌಶಲ್ಯ ಮಂಡಳಿ ರಚನೆಯತ್ತಲೂ ನಮ್ಮ ರಾಜ್ಯ ಕಾರ್ಯನಿರ್ವಹಿಸುತ್ತಿದೆ ಎಂದರು.

ಉದ್ಯಮ ಹಾಗೂ ಶಿಕ್ಷಣ ಸಂಸ್ಥೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಇದೊಂದು ದೊಡ್ಡ ಮೈಲಿಗಲ್ಲಾಗಲಿದೆ.ಶಿಕ್ಷಣ ಹಾಗೂ ಉದ್ಯಮ ಕ್ಷೇತ್ರದ ಸಹಯೋಗದಲ್ಲಿ ಭವಿಷ್ಯಕ್ಕೆ ಸಿದ್ದರಾಗಿರುವ ಕಾರ್ಯಪಡೆಯನ್ನು ಸಿದ್ಧಪಡಿಸುವಲ್ಲಿ ನೆರವಾಗಲಿದೆ. ಜಾಗತಿಕ ತಾಪಮಾನ, ಹಾವಾಮಾನ ಬದಲಾವಣೆ, ಸೈಬರ್ ಸೆಕ್ಯೂರಿಟಿ ಮುಂತಾದ ಜಾಗತಿಕ ಸಮಸ್ಯೆಗಳನ್ನು ಎದುರಿಸಲು ನಮ್ಮ ಶಕ್ತಿಯನ್ನು ಬಳಸಲು ನಾವು ಬದ್ಧರಾಗಿದ್ದೇವೆ ಹೇಳಿದರು.

ಇದನ್ನೂ ಓದಿ: ಶಾಲೆಗೆ ತೆರಳಿದ ಮಕ್ಕಳ ಮೇಲೆ ನಿಗಾವಹಿಸಲು ಮೊಬೈಲ್​ ಆ್ಯಪ್: ಮಂಗಳೂರು ಖಾಸಗಿ ಕಾಲೇಜಿನಲ್ಲಿ ಹೊಸ ಪ್ರಯೋಗ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.