ಬೆಂಗಳೂರು: ಕಾವೇರಿ ವಿವಾದ ಹಿನ್ನೆಲೆ ಪ್ರಧಾನಿ ಮೋದಿ ನಡೆದುಕೊಂಡು ಹೋಗುತ್ತಿರುವ ಪಯಣದ ದಿಕ್ಕಿನ ವಿಡಂಬನಾತ್ಮಕ ಪೋಸ್ಟರ್ ಪೋಸ್ಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಪ್ರಧಾನಿ ಮೋದಿ ಎಂದೂ ತುಳಿಯದ ಹಾದಿ ಎಂಬ ಶೀರ್ಷಿಕೆಯಡಿ ಚುನಾವಣೆ ಪ್ರಚಾರ ಮತ್ತು ಕಾವೇರಿ ಸಮಸ್ಯೆ ಇತ್ಯರ್ಥ ಎಂಬ ಪಯಣದ ದಿಕ್ಕಿನ ನಾಮಫಲಕ ಬಿಂಬಿಸುವ ಪೋಸ್ಟರ್ ಹಾಕಿದ್ದಾರೆ. ಪ್ರಧಾನಿ ಮೋದಿ ಕಾವೇರಿ ಸಮಸ್ಯೆ ಇತ್ಯರ್ಥದತ್ತ ಹೋಗುವ ಬದಲು ಚುನಾವಣಾ ಪ್ರಚಾರದತ್ತ ನಡೆದು ಕೊಂಡು ಹೋಗುವುದನ್ನು ವಿಡಂಬನಾತ್ಮಕವಾಗಿ ಟೀಕಿಸಲಾಗಿದೆ.
-
ನಮ್ಮ ಕರ್ತವ್ಯದ ಬದ್ಧತೆಯು ನಮ್ಮ ಪಯಣದ ದಿಕ್ಕನ್ನು ನಿರ್ಧರಿಸುತ್ತದೆ.
— Siddaramaiah (@siddaramaiah) September 28, 2023 " class="align-text-top noRightClick twitterSection" data="
"ನನ್ನ ಬದ್ಧತೆ ಕರ್ನಾಟಕ ಮತ್ತು ಕಾವೇರಿ". pic.twitter.com/W7avb6XCYO
">ನಮ್ಮ ಕರ್ತವ್ಯದ ಬದ್ಧತೆಯು ನಮ್ಮ ಪಯಣದ ದಿಕ್ಕನ್ನು ನಿರ್ಧರಿಸುತ್ತದೆ.
— Siddaramaiah (@siddaramaiah) September 28, 2023
"ನನ್ನ ಬದ್ಧತೆ ಕರ್ನಾಟಕ ಮತ್ತು ಕಾವೇರಿ". pic.twitter.com/W7avb6XCYOನಮ್ಮ ಕರ್ತವ್ಯದ ಬದ್ಧತೆಯು ನಮ್ಮ ಪಯಣದ ದಿಕ್ಕನ್ನು ನಿರ್ಧರಿಸುತ್ತದೆ.
— Siddaramaiah (@siddaramaiah) September 28, 2023
"ನನ್ನ ಬದ್ಧತೆ ಕರ್ನಾಟಕ ಮತ್ತು ಕಾವೇರಿ". pic.twitter.com/W7avb6XCYO
ಮತದಾರರ ದಾಹ ತಣಿಸುವುದಕ್ಕಿಂತ ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಾದಾಗ ಎಂಬ ಅಡಿ ಬರಹ ಹಾಕಿ ಪ್ರಧಾನಿ ಮೋದಿ ಕಾವೇರಿ ವಿಚಾರವಾಗಿ ಮಧ್ಯಸ್ಥಿಕೆ ವಹಿಸುತ್ತಿಲ್ಲ ಎಂಬ ಬಗ್ಗೆ ಪೋಸ್ಟರ್ ಮೂಲಕ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಪೋಸ್ಟರ್ ಜೊತೆ ನಮ್ಮ ಕರ್ತವ್ಯದ ಬದ್ಧತೆಯು ನಮ್ಮ ಪಯಣದ ದಿಕ್ಕನ್ನು ನಿರ್ಧರಿಸುತ್ತದೆ. "ನನ್ನ ಬದ್ಧತೆ ಕರ್ನಾಟಕ ಮತ್ತು ಕಾವೇರಿ" ಎಂದು ಸಿಎಂ ಬರೆದುಕೊಂಡಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಇಂದು ಕರ್ನಾಟಕ ಬಂದ್ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಈ ಫೋಸ್ಟರ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. ಕಾವೇರಿ ವಿವಾದ ಸಂಬಂಧ ತಮಿಳುನಾಡು ಸಿಎಂ ಸ್ಟಾಲಿನ್ ಹಾಗೂ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರನ್ನು ಕರೆದು ಮಧ್ಯಸ್ಥಿಕೆ ವಹಿಸುವಂತೆ ಕಾಂಗ್ರೆಸ್ ಸರ್ಕಾರ ಆಗ್ರಹಿಸುತ್ತಲೇ ಇದೆ. ಇತ್ತ ವಿವಾದ ಸುಪ್ರೀಂ ಕೋರ್ಟ್ನಲ್ಲಿರುವಾಗ ಪ್ರಧಾನಿ ಮಧ್ಯಸ್ಥಿಕೆ ಅಸಾಧ್ಯ, ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಿಸುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸುತ್ತಿದೆ.
ಇದನ್ನೂ ಓದಿ: ಕಾವೇರಿ ಸಮಸ್ಯೆಯನ್ನು ಮಾನವೀಯ ನೆಲೆಯಲ್ಲಿ ನೋಡಿ: ತಮಿಳುನಾಡು ಸಿಎಂಗೆ ಲೆಹರ್ ಸಿಂಗ್ ಮನವಿ