ETV Bharat / state

ಸಾಲ ಮಾಡದೇ 'ಪಂಚ ಖಾತರಿ' ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

ನೂತನ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಕಾಂಗ್ರೆಸ್​ ಸರ್ಕಾರದ ಮೊದಲ ಸಚಿವ ಸಂಪುಟ ನಡೆಯಿತು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಪಂಚ ಖಾತರಿಗಳನ್ನು ರಾಜ್ಯವನ್ನು ಸಾಲಕ್ಕೆ ತಳ್ಳದೇ ಜಾರಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ನೂತನ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮೊದಲ ಸಂಪುಟ ಸಭೆ

author img

By

Published : May 20, 2023, 4:01 PM IST

Updated : May 20, 2023, 6:30 PM IST

ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪಟ್ಟಾಭಿಷೇಕದ ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಡಿಸಿಎಂ ಡಿಕೆಶಿವಕುಮಾರ್​ ಹಾಗೂ ನೂತನ ಮಂತ್ರಿಗಳ ಸಮ್ಮುಖದಲ್ಲಿ ವಿಧಾನಸೌಧದಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಬಹುನಿರೀಕ್ಷಿತ ಐದೂ ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಆದರೆ, ಉಚಿತ ಗ್ಯಾರಂಟಿಗಳ ರೂಪುರೇಷೆಯನ್ನು ಚರ್ಚಿಸಿ ಆ ಬಳಿಕ ಜಾರಿ ಮಾಡಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.

ಆ ಮೂಲಕ ಉಚಿತ ಯೋಜನೆಗಳ ಅನುಷ್ಠಾನ ಇನ್ನೂ ವಿಳಂಬವಾಗಲಿದೆ. ಪ್ರಮಾಣವಚನ ಬಳಿಕ ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ತಮ್ಮ ನೇತೃತ್ವದಲ್ಲಿ ಮೊದಲ ಸಚಿವ ಸಂಪುಟ ಸಭೆ ನಡೆಸಿದರು. ಸಂಪುಟ ಸಭೆಯಲ್ಲಿ ತಮ್ಮ ಆಶ್ವಾಸನೆಯಂತೆ ಐದು ಗ್ಯಾರಂಟಿಗಳಿಗೆ ತಾತ್ವಿಕ ಅನುಮೋದನೆ ನೀಡಿದೆ.

ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್​​ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವೀಧರರಿಗೆ 3,000 ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ ಹಾಗೂ ಬಿಪಿಎಲ್ ಕಾರ್ಡ್​ದಾರರಿಗೆ 10 ಕೆ.ಜಿ. ಅನ್ನಭಾಗ್ಯ ಯೋಜನೆಯ ಒಟ್ಟು ಐದು ಗ್ಯಾರಂಟಿಗಳಿಗೆ ತಾತ್ವಿಕ ಸಮ್ಮತಿ ನೀಡಲಾಯಿತು ಎಂದು ತಿಳಿಸಿದರು.

ಮುಂದಿನ ಕ್ಯಾಬಿನೆಟ್​​ನಲ್ಲಿ ತೀರ್ಮಾನಿಸಿ ಜಾರಿ: ಈ ಗ್ಯಾರಂಟಿಗಳ ಖರ್ಚು, ವೆಚ್ಚ, ಸ್ಪಷ್ಟ‌ ಲೆಕ್ಕಾಚಾರ, ರೂಪುರೇಷೆಯನ್ನು ಲೆಕ್ಕ ಹಾಕಿದ ಬಳಿಕ ಆದೇಶ ಹೊರಡಿಸಲಾಗುವುದು. ಐದೂ ಗ್ಯಾರಂಟಿಗಳಿಗೆ ಅಂದಾಜು ಸುಮಾರು 50,000 ಸಾವಿರ ಕೋಟಿ ರೂ. ಆಗುವ ಸಾಧ್ಯತೆ ಇದೆ. ಗೃಹ ಜ್ಯೋತಿ ಯೋಜನೆಗಾಗಿ ಒಂದು ತಿಂಗಳಿಗೆ ಅಂದಾಜು 1,200 ಕೋಟಿ ರೂ. ವೆಚ್ಚ ಆಗುವ ಸಾಧ್ಯತೆ ಇದೆ. ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ನೀಡುವ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡುತ್ತೇವೆ. ಖರ್ಚು ವೆಚ್ಚ ಬಗ್ಗೆ ನಾವು ಚರ್ಚೆ ಮಾಡಿ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ‌ ಮಾಡುತ್ತೇವೆ ಎಂದು ಹೇಳಿದರು.

ಕೇವಲ ಎರಡು ವರ್ಷದವರೆಗೆ ನಿರುದ್ಯೋಗಿ ಪದವೀಧರಿಗೆ 3 ಸಾವಿರ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ 1,500 ರೂ., ಕರ್ನಾಟಕದ ಮಹಿಳೆಯರಿಗೆ ಮಾತ್ರ ಅನ್ವಯವಾಗುವಂತೆ ಉಚಿತ ಬಸ್ ಪಾಸ್ ನೀಡಲಿದ್ದೇವೆ. ಇದರ ರೂಪುರೇಷೆ ಚರ್ಚಿಸಿ ಆಮೇಲೆ ಜಾರಿ ಮಾಡುತ್ತೇವೆ. ಇಂದು ತಾಂತ್ರಿಕವಾಗಿ ಎಲ್ಲದಕ್ಕೂ ಒಪ್ಪಿಗೆ ನೀಡಿದ್ದೇವೆ. ಆದೇಶದಲ್ಲಿ ಎಲ್ಲವನ್ನೂ ಸವಿವರವಾಗಿ ಚರ್ಚಿಸಿ ಆದೇಶ ಹೊರಡಿಸುತ್ತೇವೆ. ಮುಂದಿನ ಕ್ಯಾಬಿನೆಟ್​ನಲ್ಲಿ ಐದೂ ಗ್ಯಾರಂಟಿಯನ್ನು ಜಾರಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸಾಲ ಮಾಡದೇ ಗ್ಯಾರಂಟಿ ಜಾರಿ: ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸದೇ, ರಾಜ್ಯವನ್ನು ದಿವಾಳಿ ಮಾಡದೇ ಈ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. 3.25 ಲಕ್ಷ ಕೋಟಿ ರೂ. ಮೊತ್ತದ ಬಜೆಟ್​​ ಅನ್ನು ಜುಲೈನಲ್ಲಿ ಮಂಡಿಸಲಿದ್ದೇನೆ. ಅನಗತ್ಯ ವೆಚ್ಚ ಕಡಿತ, ಆದಾಯ ಸಂಗ್ರಹ ಹೆಚ್ಚಿಗೆ ಮಾಡುತ್ತೇವೆ ಎಂದು ಹೇಳಿದರು.

ಮೂರು ದಿನ ಅಧೀವೇಶನ: ಸೋಮವಾರ, ಮಂಗಳವಾರ, ಬುಧವಾರ ಮೂರು ದಿನಗಳ ಅಧಿವೇಶನ ಕರೆಯಲಾಗುವುದು. ಸ್ಪೀಕರ್​ ಆಯ್ಕೆ, ಶಾಸಕರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಸಲಾಗುವುದು. ಮುಂದಿನ ವಾರದಲ್ಲೇ ಮತ್ತೊಂದು ಸಚಿವ ಸಂಪುಟ ಸಭೆ ಕರೆದು ಐದು ಗ್ಯಾರಂಟಿಗಳ ಬಗ್ಗೆ ಚರ್ಚಿಸಿ ಜಾರಿ ಬಗ್ಗೆ ತಿಳಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದರು. ಆರ್.ವಿ.ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡುತ್ತೇವೆ. ಬಳಿಕ ಅಧೀವೇಶನದಲ್ಲಿ ನೂತನ ಸ್ಪೀಕರ್​ ಆಯ್ಕೆ ನಡೆಯಲಿದೆ ಎಂದರು.

ಎಲ್ಲರಿಗೂ ಸಿಗಲ್ಲ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್​ ಮಾತನಾಡಿ, ರಸ್ತೆಯಲ್ಲಿ ಹೋಗುವವರಿಗೆಲ್ಲಾ ಗ್ಯಾರಂಟಿಗಳನ್ನು ಕೊಡಲಾಗುವುದಿಲ್ಲ. ಉಚಿತಗಳನ್ನು ಯಾರಿಗೆ ಕೊಡಬೇಕು ಎಂಬುದು ನಿರ್ಧರಿಸಲಾಗುವುದು. ಫಲಾನುಭವಿಗಳ ಹೆಸರಲ್ಲಿ ಖಾತೆ ಇರಬೇಕು. ಅದಕ್ಕೆ ಲೆಕ್ಕ ಬೇಕು. ಅಕೌಂಟೆಬಿಲಿಟಿ ಇರಬೇಕು. ಬಳಿಕ ಆದೇಶ ಹೊರಡಿಸುತ್ತೇವೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಟೀಕಾ ಪ್ರಹಾರ: ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಮೊದಲ ಸಭೆಯಲ್ಲಿ ವಾಗ್ದಾಳಿ ನಡೆಸಿದರು. 15ನೇ ಹಣಕಾಸು ಆಯೋಗದಲ್ಲಿ ನಮಗೆ ಭಾರಿ ಅನ್ಯಾಯವಾಗಿದೆ ಎಂದು ಆರೋಪಿಸಿದರು. ನಮಗೆ ಬರಬೇಕಾದ ದುಡ್ಡು ಬರಲಿಲ್ಲ, ಪಾಲು ಸಿಗಲಿಲ್ಲ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಈ ಹಿಂದೆ ಇದ್ದ ಬಿಜೆಪಿಯ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದರು. ಬೇಜವಾಬ್ದಾರಿ ಸರ್ಕಾರ ಎಂದು ಹಿಯಾಳಿಸಿದರು. ನ್ಯಾಯಯುತವಾಗಿ ಬರಬೇಕಾದ 5492 ಕೋಟಿ ರೂಪಾಯಿ ನಮಗೆ ಬರಲಿಲ್ಲ. ಇದು ದೊಡ್ಡ ಅನ್ಯಾಯ. ಈ ಬಗ್ಗೆ ಹಿಂದಿನ ಸರ್ಕಾರ ಚಕಾರ ಎತ್ತಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಿಂದಲೇ ಆರಿಸಿ ಹೋದ ಹಣಕಾಸು ಸಚಿವರು ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಇಷ್ಟೊಂದು ಹಣ ನಮಗೆ ನಷ್ಟವಾಯಿತು. ಕೇಂದ್ರದ ಮಂತ್ರಿ ಪ್ರಹ್ಲಾದ್​ ಸಚಿವ ಏನೂ ಕೇಳಲಿಲ್ಲ. 25 ಸಂಸದರೂ ಒಂದೂ ಚಕಾರ ಎತ್ತಲಿಲ್ಲ. ಇನ್ನು ಈ ಹಿಂದಿನ ಸಿಎಂ ಜಿಎಸ್​ಟಿ ಮಂಡಳಿ ಚೇರ್ಮನ್​ ಕೂಡಾ ಆಗಿದ್ದಾರೆ. ಆದರೂ ಅವರೂ ಏನೂ ಮಾಡಲಿಲ್ಲ.

ಟ್ಯಾಕ್ಸ್​ನಲ್ಲಿ ನಮ್ಮ ಪಾಲು ಕೇವಲ 50 ಸಾವಿರ ಕೋಟಿ, ಅದಷ್ಟೇ ನಮಗೆ ಬರಬೇಕಾಗಿದ್ದು ಎಂದು ವಿವರಣೆ ನೀಡಿದರು. ರಾಜ್ಯ ಸರ್ಕಾರವನ್ನು ಸಾಲಕ್ಕೆ ದೂಡಿದ್ದಾರು. ಮನಮೋಹನ್​ ಸಿಂಗ್​ ಇದ್ದಾಗ ದೇಶದ ಸಾಲ 53 ಲಕ್ಷದ 11 ಸಾವಿರ ಕೋಟಿ, ಈಗ ದೇಶದ ಸಾಲ 155 ಲಕ್ಷ ಕೋಟಿ ಇದೆ. ಮೋದಿ ದೇಶವನ್ನು ಸಾಲಗಾರರ ರಾಷ್ಟ್ರವಾಗಿ ಮಾಡಿದೆ. ನಾನು ರಾಜ್ಯದಲ್ಲಿ ಸಿಎಂ ಆಗಿರುವವರೆಗೂ ಇದ್ದ ಸಾಲ 2ಲಕ್ಷದ 42 ಸಾವಿರ ಕೋಟಿ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ, 3ಲಕ್ಷದ 22 ಸಾವಿರ ಕೋಟಿ ಸಾಲ ಮಾಡಿದ್ದಾರೆ. 23-24ನೇ ಸಾಲಿನಲ್ಲಿ 78 ಸಾವಿರ ಕೋಟಿ ರೂ ಸಾಲ ಮಾಡುತ್ತಿದ್ದಾರೆ.

ಸಾಲ ಯಾರ ಕಾಲದಲ್ಲಿ ಜಾಸ್ತಿ ಆಯಿತಪ್ಪ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಾನು ಅಧಿಕಾರದಲ್ಲಿದ್ದಾಗ ಸಾಲ ಮಾಡಿದ್ದು, 1 ಲಕ್ಷದ 16 ಸಾವಿರ ಕೋಟಿ ಎಂದು ವಿವರಣೆ ನೀಡಿದ್ದಾರೆ. ಅಸಲು - ಬಡ್ಡಿ ಸೇರಿ ಪ್ರತಿವರ್ಷ 56 ಸಾವಿರ ಕೋಟಿ ರೂ ಕಟ್ಟಬೇಕಾಗುತ್ತದೆ. ಹೀಗಾಗಿ ನಮ್ಮ ಭರವಸೆಗಳನ್ನು ಈಡೇರಿಸಲು 50 ಸಾವಿರ ಬಡವರಿಗೆ ಕೊಡಲು ಆಗಲ್ವಾ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಮೊದಲ ಸಚಿವ ಸಂಪುಟ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್​, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಡಾ. ಜಿ. ಪರಮೇಶ್ವರ್ ಸತೀಶ್​ ಜಾರಕಿಹೊಳಿ, ಹೆಚ್​ಕೆ ಮುನಿಯಪ್ಪ, ಕೆಜೆ ಜಾರ್ಜ್​​, ಎಂಬಿ ಪಾಟೀಲ್, ರಾಮಲಿಂಗಾರೆಡ್ಡಿ, ಜಮೀರ್​ ಅಹ್ಮದ್​, ಪ್ರಿಯಾಂಕ್ ಖರ್ಗೆ ಅವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಇದನ್ನೂ ಓದಿ: ನೂತನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಶುಭ ಕೋರಿದ ಪ್ರಧಾನಿ: ಕನ್ನಡದಲ್ಲಿ ಮೋದಿ ಟ್ವೀಟ್​

Last Updated : May 20, 2023, 6:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.