ETV Bharat / state

ಸಚಿವ ಸಂಪುಟ ಸಭೆಯಲ್ಲಿ ಗುತ್ತಿಗೆದಾರರ ಬಾಕಿ ಬಿಲ್, ಚಲುವರಾಯಸ್ವಾಮಿ ವಿರುದ್ಧದ ದೂರಿನ‌ ಪತ್ರದ ಬಗ್ಗೆ ಗಂಭೀರ ಚರ್ಚೆ - ಈಟಿವಿ ಭಾರತ ಕನ್ನಡ

ಸಚಿವ ಸಂಪುಟ ಸಭೆಯಲ್ಲಿ ಗುತ್ತಿಗೆದಾರರ ಬಿಲ್ ಬಾಕಿ ಹಾಗೂ ಸಚಿವ ಚಲುವರಾಯಸ್ವಾಮಿ ವಿರುದ್ಧದ ದೂರಿನ ಪತ್ರದ ಬಗ್ಗೆ ಗಂಭೀರ ಚರ್ಚೆ ನಡೆಯಿತು.

cabinet
ಸಚಿವ ಸಂಪುಟ ಸಭೆ
author img

By

Published : Aug 10, 2023, 4:36 PM IST

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗುತ್ತಿಗೆದಾರರ ಬಿಲ್ ಬಾಕಿ ಹಾಗೂ ಸಚಿವ ಚಲುವರಾಯಸ್ವಾಮಿ ವಿರುದ್ಧದ ದೂರಿನ ಪತ್ರದ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಈ ವೇಳೆ ಗುತ್ತಿಗೆದಾರರ ಬಿಲ್ ಬಾಕಿ ಉಳಿದಿರೋದು ನಿಜ. ಕಾನೂನು ಪ್ರಕಾರ ಬಿಲ್ ಪಾವತಿ ಆಗುತ್ತಿದೆ. ಕೆಲವು ಕಡೆ ಕಾಮಗಾರಿಗಳು ಆಗಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಡಿಕೆಶಿ, ಗುತ್ತಿಗೆದಾರರು ಎಲ್ಲೆಲ್ಲಿ ಹೋಗ್ತಿದ್ದಾರೆ ಗೊತ್ತಿದೆ.‌ ಅವರನ್ನು ಯಾರು ಛೂ ಬಿಟ್ಟಿದ್ದಾರೆ ಅನ್ನೋದು ಗೊತ್ತಿದೆ. ಕೆಲವು ಕಡೆ ಕಾಮಗಾರಿಗಳೇ ನಡೆದಿಲ್ಲ. ನಡೆಯದ ಕಾಮಗಾರಿಗೆ ಬಿಲ್ ಮಾಡಲಾಗಿದೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. ಅದಕ್ಕೆ ತನಿಖೆಗೆ ಕೊಟ್ಟಿರೋದು. ಆದರೆ ಬಿಜೆಪಿಯವರು ಇದನ್ನು ದೊಡ್ಡದು‌ ಮಾಡ್ತಿದ್ದಾರೆ. ತನಿಖೆ ಆದ್ಮೇಲೆ ಎಲ್ಲರ ಹುಳುಕು‌ ಹೊರಗೆ ಬರುತ್ತದೆ. ನಾವು ಅದರ ಬಗ್ಗೆ ಹೆಚ್ಚು ಗಮನ ಕೊಡೋದು ಬೇಡ. ತನಿಖೆ ನಡೆಯಲಿ, ಸತ್ಯಾಂಶ ಹೊರಗೆ ಬರಲಿ ಬಿಡಿ ಎಂದರು.

ಚಲುವರಾಯಸ್ವಾಮಿ ದೂರಿನ‌ ಪತ್ರದ ಬಗ್ಗೆ ಚರ್ಚೆ: ಸಚಿವ ಸಂಪುಟ ಸಭೆಯಲ್ಲಿ, ಚಲುವರಾಯಸ್ವಾಮಿ ಮೇಲಿನ ಲಂಚದ ಆರೋಪ ವಿಚಾರವೂ ಪ್ರಸ್ತಾಪವಾಗಿದೆ. ಪ್ರತಿಪಕ್ಷಗಳು ನಮ್ಮನ್ನು ಪೇಚಿಗೆ ಸಿಲುಕಿಸೋಕೆ ಪ್ರಯತ್ನ ಮಾಡುತ್ತಿವೆ. ಕೆಲವು ಪ್ರಯತ್ನಗಳನ್ನು ಅವರು ಮಾಡುತ್ತಿದ್ದಾರೆ. ನಮ್ಮ‌ ಗ್ಯಾರಂಟಿಗಳು ಅವರಿಗೆ ಇರುಸು ಮುರುಸಾಗಿವೆ. ಲೋಕಸಭಾ ಚುನಾವಣೆಗೆ ಇದರ ಲಾಭವಾಗಲಿದೆ. ಹಾಗಾಗಿಯೇ ಕೆದಕಿ ಕೆದಕಿ ಆರೋಪಿಸುತ್ತಿದ್ದಾರೆ. ಕೆಲವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಚಲುವರಾಯಸ್ವಾಮಿ ಕೂಡ ಟಾರ್ಗೆಟ್ ಆಗಿದ್ದಾರೆ. ಜೆಡಿಎಸ್​ನವರು ಕಷ್ಟಕ್ಕೆ ಸಿಲುಕಿಸೋಕೆ ನೋಡುತ್ತಿದ್ದಾರೆ. ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ರಾಜಕೀಯ ಮಾಡ್ತಿದ್ದಾರೆ. ಅದಕ್ಕೆ ಚಲುವರಾಯಸ್ವಾಮಿನ ಟಾರ್ಗೆಟ್ ಮಾಡ್ತಿದ್ದಾರೆ ಎಂದು ಡಿಕೆಶಿ ವಿಷಯ ಪ್ರಸ್ತಾಪಿಸಿದರು.

ನಾನು ಚಲುವರಾಯಸ್ವಾಮಿ ಜೊತೆ ಮಾತನಾಡಿದ್ದೇನೆ. ಅವರು ನನ್ನೊಂದಿಗೆ ಎಲ್ಲಾ ಹೇಳಿಕೊಂಡಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ. ಅವರು ಏನು ಬೇಕಾದ್ರೂ‌ ಮಾತನಾಡಲಿ. ನೀವ್ಯಾರು ಸುಮ್ಮನೆ ಮಾತನಾಡಲು ಹೋಗಬೇಡಿ. ನಿಮ್ಮ ಇಲಾಖೆ ಕೆಲಸದ ಕಡೆ ಗಮ‌ನಕೊಡಿ. ರಾಜ್ಯದ ಜನರಿಗೆ ನಾವು ಉತ್ತಮ ಆಡಳಿತ ಕೊಡಬೇಕು. ಅದರ ಕಡೆ ಗಮನಹರಿಸಿ. ಲೋಕಸಭಾ ಚುನಾವಣೆಗೆ ಪಕ್ಷ ಕಟ್ಟಿ‌. ಉಳಿದಿದ್ದು ನಾವು ನೋಡಿಕೊಳ್ಳುತ್ತೇವೆ ಎಂದು ಸಚಿವರಿಗೆ ಸಿಎಂ ಸಿದ್ದರಾಮಯ್ಯ ಅಭಯ ನೀಡಿದರು.

ಸರ್ಕಾರಕ್ಕೆ ಕಳಂಕ ತರುವ ಕೆಲಸ ಸಫಲವಾಗಲ್ಲ: ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜನಪ್ರಿಯತೆ ಹೆಚ್ಚಿದೆ. ಅದಕ್ಕೆ ಇಂತಹ ಆರೋಪ ಬರುತ್ತಿರಬಹುದು. ಮೊದಲು 15% ಅಂದ್ರು, ಅರ್ಧ ಗಂಟೆ ಹಿಂದೆ 7% ಅಂತ ಕೆಂಪಣ್ಣ ಹೇಳಿದ್ರು ಅಂತ ನೀವೇ ಹೇಳ್ತೀರಾ. ಡಿಸಿಎಂ ಸೇರಿದಂತೆ ಯಾರ ಮೇಲೆ ಆರೋಪ ಮಾಡಿದ್ರೋ, ಅದಕ್ಕೆಲ್ಲಾ ಉತ್ತರ ಕೊಡಲಾಗಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.

ಮುಂದುವರೆದು, ಬಿಲ್ ಬಿಡುಗಡೆ ಆಗಿಲ್ಲ ಅಂತ ಆರೋಪ ಮಾಡಿದ್ದಾರೆ. ಆದರೆ ಕಮಿಷನ್ ಬಗ್ಗೆ ಎಲ್ಲೂ ಅವರು ಮಾತನಾಡಿಲ್ಲ. ಈಗಾಗಲೇ ಸಂಬಂಧ ಪಟ್ಟ ಸಚಿವರು ಉತ್ತರ ಕೊಟ್ಟಿದ್ದಾರೆ. ಕಾಮಗಾರಿಗಳೇ ಆಗದೇ ಇರೋ ಬಗ್ಗೆ ತನಿಖೆ ಆಗುತ್ತಿದೆ. 5 ಗ್ಯಾರಂಟಿಗಳಿಂದ ನಮ್ಮ ವಿಶ್ವಸಾರ್ಹತೆ ಹೆಚ್ಚುತ್ತಿದೆ. ಇದರ ಯಶಸ್ಸಿನಿಂದ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಗುತ್ತಿಗೆದಾರರು ಆರೋಪ ಮಾಡಿರೋದು ಸುಳ್ಳು. ತನಿಖೆ ನಡೆಯುತ್ತಿದೆ. ಯಾವುದೇ ಆಧಾರ ರಹಿತ ಆರೋಪ ಮಾಡಿದ್ರೆ ನಾನು ಖಂಡಿಸುತ್ತೇನೆ. ಸಚಿವರ ವಿರುದ್ಧ ಲೆಟರ್ ಬರೆದಿದ್ದು ಫೇಕ್ ಅಂತ ಗೊತ್ತಾಗಿದೆ. ಈ ವಿಚಾರವೂ ಹಾಗೆಯೇ. ಗುತ್ತಿಗೆದಾರರ ಲಘು ಆರೋಪವನ್ನು ಖಂಡಿಸುತ್ತೇನೆ. ಆರೋಪದ ಸುದ್ದಿಯಲ್ಲಿ ಯಾವುದೇ ಸತ್ಯ ಇಲ್ಲ. ಸರ್ಕಾರಕ್ಕೆ ಅನಗತ್ಯ ಕಳಂಕ ಹಚ್ಚುವ ಕೆಲಸ ಫಲಕಾರಿಯಾಗಲ್ಲ ಎಂದರು.

ಇದನ್ನೂ ಓದಿ: 'ಚಲುವರಾಯಸ್ವಾಮಿ ತೇಜೋವಧೆಗೆ ಯತ್ನ': ರಾಜ್ಯಪಾಲರಿಗೆ ನೀಡಿದ ದೂರಿನ ಪತ್ರದ FSL ತನಿಖೆಗೆ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.