ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಪೊಲೀಸರಿಗೆ ಆತ್ಮಹತ್ಯೆ ಯತ್ನ ಪ್ರಕರಣ ಒಂದು ದೊಡ್ಡ ಚಾಲೆಂಜ್ ಆಗಿದೆ. ಪೊಲೀಸರ ಮುಂದೆ ದೊಡ್ಡ ಸವಾಲುಗಳೇ ಎದುರಾಗಿವೆ.
ಸದಾಶಿವ ನಗರ ಪೊಲೀಸರು ಈಗಾಗಲೇ ಸಂತೋಷ್ ಪತ್ನಿ ಹೇಳಿಕೆಯನ್ನು ಪಡೆದಿದ್ದಾರೆ. ಇವರ ಹೇಳಿಕೆ ಹಾಗೂ ಸಂತೋಷ್ ಮಾಧ್ಯಮದವರ ಎದುರು ನೀಡಿರುವ ಹೇಳಿಕೆಯು ಗೊಂದಲದಿಂದ ಕೂಡಿದ್ದು, ಪೊಲೀಸರು ನಿಜಾಂಶ ಪತ್ತೆಹಚ್ಚಬೇಕಿದೆ.
ಘಟನೆ ನಡೆದ ಬಳಿಕ ಸಂತೋಷ್ ಪತ್ನಿ ಜಾಹ್ನವಿ ತನ್ನ ಪತಿ ಪ್ರತಿ ದಿನ ಒಂದು ನಿದ್ದೆ ಮಾತ್ರೆ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಅದರೆ ಘಟನೆ ನಡೆದ ದಿನ ತನಗೆ ಅನುಮಾನ, ಭಯ ಅಗಿತ್ತು. ಅವರಿಗೆ ಕೆಲಸದಲ್ಲಿ ಸ್ವಲ್ಪ ಪೊಲಿಟಿಕಲ್ ಇಂಬ್ಯಾಲೆನ್ಸ್ ಆಗಿತ್ತು. ನನಗೆ ಆಗುತ್ತಿಲ್ಲಾ ಎಂದು ಹೇಳಿಕೊಂಡು ಕಣ್ಣೀರು ಹಾಕಿದ್ದರು ಎಂದು ಪೊಲೀಸರ ಎದುರು ಹಾಗೂ ಮಾಧ್ಯಮದ ಎದುರು ಹೇಳಿದ್ದರು.
ಆದರೆ ಸಂತೋಷ್ ಅಸ್ಪತ್ರೆಯಿಂದ ಹೊರಬಂದ ನಂತರ ಪೂರ್ತಿ ಚಿತ್ರಣವನ್ನೇ ಬದಲಿಸಲು ಯತ್ನಿಸಿದ್ದಾರೆ. ತನಗೆ ಊಟದಲ್ಲಿ ಸಮಸ್ಯೆ ಅಗಿತ್ತು. ಆ ಮಾತ್ರೆ ಬದಲಿಗೆ ನಿದ್ದೆ ಮಾತ್ರೆ ತೆಗೆದುಕೊಂಡಿದ್ದೆ ಎಂದಿದ್ದಾರೆ. ಜೊತೆಗೆ ರಾಜಕೀಯ ಒತ್ತಡವನ್ನು ಅಲ್ಲಗಳೆದಿದ್ದಾರೆ. ಹಾಗಾದ್ರೆ ಸಂತೋಷ್ ಅತ್ಮಹತ್ಯೆಗೆ ಯತ್ನಿಸಿದ್ರಾ ಅಥವಾ ಅಕಸ್ಮಾತಾಗಿ ಮಾತ್ರೆ ಸೇವನೆ ಮಾಡಿದ್ರಾ? ಈ ಸತ್ಯವನ್ನು ಹೊರಗೆಳೆಯುವ ಚಾಲೆಂಜ್ ಈಗ ಪೊಲೀಸರ ಮುಂದಿದೆ.
ಸಂತೋಷ್ ಮನೆಯಲ್ಲಿ ನಿದ್ದೆ ಮಾತ್ರೆ ಹೇಗೆ ಬಂತು? ಯಾವ ವೈದ್ಯರಿಂದ ಸಂತೋಷ್ಗೆ ನಿದ್ದೆ ಮಾತ್ರೆ ಸೇವಿಸಲು ಸಲಹೆ ನೀಡಲಾಗಿತ್ತು? ಸಂತೋಷ್ ಅಸಲಿಗೆ ಸೇವಿಸಿದ್ದು ಎಷ್ಟು ಮಾತ್ರೆಗಳು.? ಘಟನೆ ನಡೆದಾಗ ವೈದ್ಯರು ಮೊದಲ ದಿನ ಪೊಲೀಸರಿಗೆ ನೀಡಿದ್ದ ಮಾಹಿತಿ ಪ್ರಕಾರ ಹನ್ನೆರಡು ಮಾತ್ರೆಗಳು ಸೇವಿಸಿದ್ದಾರೆ ಎಂದು, ಅದ್ರೆ ಸಂತೋಷ್ ಅದಕ್ಕೆ ಒಪ್ಪಿಕೊಳ್ಳುತ್ತಿಲ್ಲಾ. ಇದರ ಹಿಂದಿರುವ ಕಾರಣ ಸಹ ತನಿಖೆ ಬಳಿಕ ತಿಳಿಯಬೇಕಿದೆ.
ಇದನ್ನೂ ಓದಿ: ಸಂತೋಷ್ ವಿರುದ್ಧ ಎಫ್ಐಆರ್: ಸಿಎಂಗೆ ಶುರುವಾಗುತ್ತಾ ಪೀಕಲಾಟ ..?