ಬೆಂಗಳೂರು: ಕರ್ನಾಟಕ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಒಂದು ವರ್ಷದ ಸಾಧನೆಯ ಕಿರು ಹೊತ್ತಿಗೆ 'ಅರುಣೋದಯ'ವನ್ನು ಮುಖ್ಯಮಂತ್ರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಡುಗಡೆ ಮಾಡಿದರು.
![CM released of Arya Vaishya Development Corporation booklet](https://etvbharatimages.akamaized.net/etvbharat/prod-images/kn-bng-07-cm-book-release-script-7208080_05102020201148_0510f_1601908908_325.jpg)
ಗೃಹ ಕಚೇರಿ ಕೃಷ್ಣಾದಲ್ಲಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಉಪಸ್ಥಿತಿಯಲ್ಲಿ ಕಿರು ಹೊತ್ತಿಗೆಯನ್ನು ಸಿಎಂ ಬಿಡುಗಡೆ ಮಾಡಿದರು. ಇದೇ ವೇಳೆ, ಚಿತ್ರ ಕಲಾವಿದ ಎಂ.ಎಸ್. ಶಶಿಧರ್ ಅವರು ಚಿತ್ರಿಸಿರುವ ಸಿದ್ದಗಂಗಾ ಕ್ಷೇತ್ರದ ಡಾ. ಶಿವಕುಮಾರ ಸ್ವಾಮಿಗಳ ಜೀವನದ ವರ್ಣಚಿತ್ರ ಕಲಾಕೃತಿಗಳ "ಚಿತ್ರ ಸಂಗಮ ಪುಸ್ತಕ"ವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಬಿಡುಗಡೆ ಮಾಡಿದರು. ಕಲಾವಿದರಾದ ಎಂ.ಎಸ್.ಶಶಿಧರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
![CM released of Arya Vaishya Development Corporation booklet](https://etvbharatimages.akamaized.net/etvbharat/prod-images/kn-bng-07-cm-book-release-script-7208080_05102020201148_0510f_1601908908_879.jpg)