ಬೆಂಗಳೂರು: ಉತ್ತಮ ಕರ್ನಾಟಕ ಹಾಗೂ ಉತ್ತರ ಭಾರತದಲ್ಲಿ ಸಂಕಷ್ಟದಲ್ಲಿರುವ ಕಾರ್ಮಿಕರು ಹಾಗೂ ಬಡವರಿಗೆ ಸಂಸದೆ ಶೋಭಾ ಕರಂದ್ಲಾಜೆ ಸರಬರಾಜು ಮಾಡುತ್ತಿರುವ ದಿನಸಿ ಹಾಗೂ ಆಹಾರ ಪದಾರ್ಥಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರಿಶೀಲನೆ ನಡೆಸಿದರು.
ಕೋವಿಡ್ -19 ನಿಯಂತ್ರಣಕ್ಕಾಗಿ ಜಾರಿಗೆ ತಂದಿರುವ ಭಾರತ್ ಲಾಕ್ಡೌನ್ನಿಂದ ತೊಂದರೆಗೆ ಒಳಗಾಗಿರುವ ಸಂತ್ರಸ್ತರಿಗೆ ಪ್ರತಿದಿನ 10 ಸಾವಿರ ಕುಟುಂಬಗಳಿಗೆ 20 ದಿನಗಳ ತನಕ 10 ಕೆಜಿ ಅಕ್ಕಿ, 2 ಕೆಜಿ ಬೇಳೆ, ಅರ್ಧ ಕೆಜಿ ಎಣ್ಣೆ ಮತ್ತು 1 ಕೆಜಿ ಉಪ್ಪಿನ ಪ್ಯಾಕೆಟ್ಗಳನ್ನು ಸಂಸದೆ ಶೋಭಾ ಕರಂದ್ಲಾಜೆ ಸರಬರಾಜು ಮಾಡುತ್ತಿದ್ದಾರೆ. ರೇಷನ್ ಕಾರ್ಡ್ ಇಲ್ಲದ ಉತ್ತರ ಭಾರತೀಯ ಮತ್ತು ಉತ್ತರ ಕರ್ನಾಟಕದ ಕಾರ್ಮಿಕರು ಹಾಗೂ ಬಡವರಿಗೆ ಈ ದಿನಸಿ ಸಾಮಗ್ರಿಗಳು ನೀಡಲಾಗುತ್ತಿದೆ.
ವೈಯಾಲಿ ಕಾವಲ್ನಲ್ಲಿರುವ ಶೋಭಾ ಕರಂದ್ಲಾಜೆ ಅವರ ಕಚೇರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಹಾರ ಧಾನ್ಯಗಳ ಪರಿಶೀಲನೆ ನಡೆಸಿದರು. ಕಳೆದ ಮೂರು ದಿನಗಳಿಂದ ಆಹಾರ ಧಾನ್ಯಗಳನ್ನು ಕಳುಹಿಸಿ ಕೊಡುತ್ತಿರುವುದಕ್ಕೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.