ETV Bharat / state

ಯಲಹಂಕ ಮೇಲ್ಸೇತುವೆಗೆ ಸಾವರ್ಕರ್​ ಹೆಸರಿಡುವುದು ಶತಸಿದ್ಧ: ಎಸ್​​.ಆರ್​ ವಿಶ್ವನಾಥ್​​ - CM Political Secretory tweet on Yalahanka Flyover issue

ಯಲಹಂಕ ನೂತನ ಮೇಲ್ಸೇತುವೆಗೆ ಸಾವರ್ಕರ್​​ ಹೆಸರಿಡುವ ಕುರಿತು ವಿವಾದಗಳು ಭುಗಿಲೆದ್ದಿರುವ ನಡುವೆಯೇ ಟ್ವೀಟ್​ ಮಾಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಯಲಹಂಕ ಕ್ಷೇತ್ರದ ಶಾಸಕ ಎಸ್​.ಆರ್​ ವಿಶ್ವನಾಥ್​, ಮೇಲ್ಸೇತುವೆಗೆ ಸಾವರ್ಕರ್​ ಹೆಸರಿಡುವುದು ಶತಸಿದ್ದ ಎಂದಿದ್ದಾರೆ.

CM Political Secretory tweet on Yalahanka Flyover issue
ಯಲಹಂಕ ಮೇಲ್ಸೆತುವೆ ಸೇತುವೆಗೆ ಸಾವರ್ಕರ್​ ಹೆಸರಿಡುವುದು ಶತಸಿದ್ದ
author img

By

Published : May 28, 2020, 8:11 AM IST

ಯಲಹಂಕ: ಯಲಹಂಕ ಮೇಲ್ಸೇತುವೆಗೆ ಸಾವರ್ಕರ್​ ಹೆಸರಿಡುವುದು ಶತಸಿದ್ದ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಸ್​.ಆರ್​ ವಿಶ್ವನಾಥ್​​ ಹೇಳಿದ್ದಾರೆ.

ಈ ಬಗ್ಗೆ ಟ್ವಿಟ್​ ಮಾಡಿರುವ ಅವರು, "ಯಲಹಂಕದ ವೀರ ಸಾವರ್ಕರ್ ಫ್ಲೈಓವರ್" ಉದ್ಘಾಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಯಾವುದೇ ಟೀಕೆ ಟಿಪ್ಪಣಿಗಳಿಗು ಕಿವಿಗೊಡಬೇಡಿ. ವೀರ ಸಾವರ್ಕರ್ ಹೆಸರು ಶತಸಿದ್ಧ ಕೇವಲ ಉದ್ಘಾಟನೆಯಷ್ಟೇ ಮುಂದೂಡಲಾಗಿದೆ, ಜನತೆ ಸಹಕರಿಸಬೇಕಾಗಿ ವಿನಂತಿ ಎಂದಿದ್ದಾರೆ.

  • " ಯಲಹಂಕದ ವೀರ ಸಾವರ್ಕರ್ ಫ್ಲೈಓವರ್ "
    ಲಾಕ್ ಡೌನ್ ಹಾಗೂ ಮುಂಜಾಗ್ರತೆ ವಹಿಸಿ ಉದ್ಘಾಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ..ಯಾವುದೇ ಟೀಕೆ ಟಿಪ್ಪಣಿಗಳಿಗು ಕಿವಿಗೊಡಬೇಡಿ ..
    ವೀರ ಸಾವರ್ಕರ್ ಹೆಸರು ಶತಸಿದ್ಧ ಕೇವಲ ಉದ್ಘಾಟನೆಯಷ್ಟೇ ಮುಂದೂಡಲಾಗಿದೆ, ಜನತೆ ಸಹಕರಿಸಬೇಕಾಗಿ ವಿನಂತಿ.. pic.twitter.com/2NjuJilmzm

    — S R Vishwanath (@SRVishwanathBJP) May 27, 2020 " class="align-text-top noRightClick twitterSection" data=" ">

ಸಾವರ್ಕರ್ ಜನ್ಮದಿನದ ಅಂಗವಾಗಿ ಯಲಹಂಕ ವಿಧಾನಸಭಾ ಕ್ಷೇತ್ರದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯ ಮದರ್ ಡೈರಿ ವೃತ್ತದ ಬಳಿ ನೂತನವಾಗಿ ನಿರ್ಮಿಸಿರುವ ಮೇಲ್ಸೇತುವೆಗೆ ವೀರ ಸಾವರ್ಕರ್ ಫ್ಲೈಓವರ್​ ಎಂದು ನಾಮಕರಣ ಮಾಡಲು ಸರ್ಕಾರ ನಿರ್ಧರಿಸಿತ್ತು. ಆದರೆ, ಇದಕ್ಕೆ ವಿರೋಧ ಪಕ್ಷಗಳು ಮತ್ತು ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕನ್ನಡಿಗರ ಹೆಸರನ್ನಿಡುವಂತೆ ಒತ್ತಾಯಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ಸರ್ಕಾರ ಸಾರ್ವಕರ್ ಹೆಸರಿಡುವ ನಿರ್ಧಾರವನ್ನು ಕೈಬಿಟ್ಟಿದೆ ಎಂಬ ಸುದ್ದಿಗಳು ಹರಿದಾಡಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.