ETV Bharat / state

ವೈಜ್ಞಾನಿಕ ಮನೋಭಾವದ ಪದವೀಧರರನ್ನು ಸಜ್ಜುಗೊಳಿಸಿ: ಉಪಕುಲಪತಿಗಳಿಗೆ ಸಿಎಂ ಸಿದ್ದರಾಮಯ್ಯ ಸಲಹೆ - etv bharat kannada

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ, ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದರು.

ಉಪಕುಲಪತಿಳೊಂದಿಗೆ ಸಿಎಂ  ಸಭೆ
ಉಪಕುಲಪತಿಳೊಂದಿಗೆ ಸಿಎಂ ಸಭೆ
author img

By

Published : Aug 21, 2023, 5:02 PM IST

ಬೆಂಗಳೂರು: ವೈಜ್ಞಾನಿಕತೆ ಮತ್ತು ವೈಚಾರಿಕತೆ ಇಲ್ಲದೆ ತಲೆತುಂಬ ಕೇವಲ ಮೌಢ್ಯವನ್ನೇ ತುಂಬಿಕೊಂಡ ಪದವೀಧರರು ವಿಶ್ವವಿದ್ಯಾಲಯಗಳಿಂದ ಹೊರಗೆ ಬಂದರೆ ದೇಶಕ್ಕೆ, ನಾಡಿಗೆ ಮತ್ತು ಈ ಸಮಾಜಕ್ಕೆ ಏನು ಪ್ರಯೋಜನ?. ಆದ್ದರಿಂದ ವೈಜ್ಞಾನಿಕ ಮನೋಭಾವದ ಪದವೀಧರರನ್ನು ಸಜ್ಜುಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಲಪತಿಗಳಿಗೆ ಸೂಚನೆ ನೀಡಿದರು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರ್ಕಾರದ ವ್ಯಾಪ್ತಿಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ದೇಶವನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ, ಆರ್ಥಿಕವಾಗಿ ಮತ್ತು ನಾಗರಿಕವಾಗಿ ಮುನ್ನಡೆಸುವ ಪದವೀಧರರನ್ನು ವಿಶ್ವವಿದ್ಯಾಲಯಗಳು ಸಜ್ಜುಗೊಳಿಸಬೇಕು. ಅದನ್ನು ಬಿಟ್ಟು ಕೇವಲ ಮೌಢ್ಯಗಳನ್ನು ತುಂಬಿಕೊಂಡು ಹೊರಗೆ ಬಂದರೆ ಅದರಿಂದ ದೇಶಕ್ಕೂ ಉಪಯೋಗವಿಲ್ಲ. ನಾಡಿಗೂ ಪ್ರಯೋಜನವಿಲ್ಲ. ಅಂತಹ ಪದವೀಧರರ ಭವಿಷ್ಯಕ್ಕೂ ಉಪಯೋಗವಿಲ್ಲ ಎಂದರು.

ಸಭೆಯ ಮುಖ್ಯಾಂಶಗಳು:

  • ರಾಜ್ಯದ 32 ಸಾರ್ವಜನಿಕ ವಿವಿಗಳ ಉಪಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
  • ಕರ್ನಾಟಕ ರಾಜ್ಯದ ನಿವ್ವಳ ನೋಂದಣಿ ಅನುಪಾತ (GER) 36%
  • ರಾಷ್ಟ್ರೀಯ GER 27.4%
  • 2030ರ ವೇಳೆಗೆ GER ಶೇ. 50ಕ್ಕೆ ಹೆಚ್ಚಿಸುವ ಗುರಿ.
  • ಪುರುಷರ GER- 34.8%
  • ಮಹಿಳೆಯರು- 37.2%
  • ಪರಿಶಿಷ್ಟ ಜಾತಿ- 25.6%
  • ಪರಿಶಿಷ್ಟ ಪಂಗಡ- 23.4%
  • ರಾಜ್ಯದ 32 ಸಾರ್ವಜನಿಕ ವಿವಿಗಳಲ್ಲಿ 1.31 ಲಕ್ಷ ವಿದ್ಯಾರ್ಥಿಗಳು GER ಪ್ರಮಾಣ ಸರ್ಕಾರಿ ಕಾಲೇಜುಗಳಲ್ಲಿ ಎಷ್ಟು, ಖಾಸಗಿ ಕಾಲೇಜುಗಳಲ್ಲಿ ಎಷ್ಟು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಅಲ್ಪಸಂಖ್ಯಾತರದ್ದು ಎಷ್ಟು ಎಂದು ಮಾಹಿತಿ ಇಟ್ಟುಕೊಂಡಿರಬೇಕು. ಯುಯುಸಿಎಂಎಸ್​ನಲ್ಲಿ ಮಾಹಿತಿ ದಾಖಲಿಸಲಾಗುತ್ತಿದೆ. GER ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಾದ ಚಾಮರಾಜನಗರ, ಯಾದಗಿರಿ, ಹಾಸನ, ಕೊಪ್ಪಳ, ಕೊಡಗು ಮೊದಲಾದ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಿಸಲು ಮತ್ತು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಮತ್ತು ಸಂಶೋಧನೆಗಳನ್ನು ಹೆಚ್ಚಿಸುವಂತೆ ಸಿಎಂ ಸೂಚಿಸಿದರು. ರಾಜ್ಯದ ಅತ್ಯಂತ ಹಳೆಯ ಮತ್ತು ಮೊದಲ ವಿವಿ ಆಗಿರುವ ಮೈಸೂರು ವಿವಿಯ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸೂಚನೆ ನೀಡಿದರು.

ಇದನ್ನೂ ಓದಿ: ಕಾಂಗ್ರೆಸ್​ಗೆ ಆಪರೇಷನ್ ಹಸ್ತದ ಅವಶ್ಯಕತೆ ಇಲ್ಲ: ಶಾಸಕ ತನ್ವೀರ್ ಸೇಠ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.