ETV Bharat / state

ಸುಶಾಸನ ದಿನ: 10 ಸಾವಿರ ಯುವ ಜನರಿಗೆ ಉದ್ಯೋಗಪತ್ರ ವಿತರಿಸಿದ ಸಿಎಂ ಬೊಮ್ಮಾಯಿ - CM launched the distribution of job cards

ಸುಶಾಸನ ದಿನದ ಭಾಗವಾಗಿ ಒಟ್ಟು 10 ಸಾವಿರ ಯುವಜನರಿಗೆ ಉದ್ಯೋಗಪತ್ರ ವಿತರಿಸಲಾಯಿತು-ಕೌಶಲ್ಯಾಭಿವೃದ್ಧಿ ಇಲಾಖೆಯ ಸಿಬ್ಬಂದಿ ಅತ್ಯುತ್ತಮ ಕೆಲಸ ಮಾಡಿದ್ದಾರೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

cm distribution of job cards to 10 thousand youth
10 ಸಾವಿರ ಯುವಜನರಿಗೆ ಉದ್ಯೋಗಪತ್ರ ವಿತರಣೆಗೆ ಚಾಲನೆ ನೀಡಿದ ಸಿಎಂ
author img

By

Published : Dec 25, 2022, 9:47 PM IST

ಬೆಂಗಳೂರು: ಮಾಜಿ ಪ್ರಧಾನಿ ವಾಜಪೇಯಿಯವರ ಜನ್ಮದಿನದ ಅಂಗವಾಗಿ ಆಚರಿಸಲ್ಪಡುವ ಸುಶಾಸನ ದಿನದ ಭಾಗವಾಗಿ ಒಟ್ಟು 10 ಸಾವಿರ ಯುವಜನರಿಗೆ ಉದ್ಯೋಗಪತ್ರಗಳನ್ನು ವಿತರಿಸಲಾಯಿತು. ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಂಕೇತಿಕವಾಗಿ ಎಂಟು ಅಭ್ಯರ್ಥಿಗಳಿಗೆ ಉದ್ಯೋಗಾದೇಶಗಳನ್ನು ಹಸ್ತಾಂತರಿಸಿದರು.

ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕವನ್ನು ಬಿಟ್ಟರೆ ಬೇರ್‍ಯಾವ ರಾಜ್ಯದಲ್ಲೂ ಉದ್ಯೋಗ ನೀತಿ ಇಲ್ಲ. ಇದಕ್ಕೆ ಪೂರಕವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿಯನ್ನೂ ತರಲಾಗಿದೆ. ಸ್ಥಳೀಯರಿಗೆ ಉದ್ಯೋಗ ಸಿಗಬೇಕೆನ್ನುವುದು ಸರಕಾರದ ಗುರಿಯಾಗಿದ್ದು, ನೇಮಕಾತಿಗೆ ತಕ್ಕ ಪ್ರೋತ್ಸಾಹ ಕೊಡಲಾಗುತ್ತಿದೆ. ಇದರಂತೆ ವಿದ್ಯುತ್‌ಚಾಲಿತ ವಾಹನಗಳ ಕ್ಷೇತ್ರದಲ್ಲಿ ಬೆಂಗಳೂರಿನಲ್ಲಿ ತಮ್ಮ ಆರ್ & ಡಿ ಕೇಂದ್ರಗಳನ್ನು ಹೊಂದಿರುವ ಕಂಪನಿಗಳು ನಮ್ಮ ರಾಜ್ಯದಲ್ಲೇ ಉತ್ಪಾದನಾ ಘಟಕಗಳನ್ನೂ ಕಡ್ಡಾಯವಾಗಿ ಸ್ಥಾಪಿಸುವಂತೆ ನೋಡಿಕೊಳ್ಳಬೇಕು ಎಂದರು.

ಇದಲ್ಲದೆ, ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಒಂದು ಲಕ್ಷ ರೂ ಸಬ್ಸಿಡಿ ಸಹಿತ ತಲಾ 5 ಲಕ್ಷ ರೂ.ಗಳ ಸಾಲ ಸೌಲಭ್ಯ ಒದಗಿಸುವ ಮೂಲಕ 5 ಲಕ್ಷ ಮಹಿಳೆಯರ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡಲಾಗುವುದು. ಹಾಗೆಯೇ, ಸ್ವಾಮಿ ವಿವೇಕಾನಂದ ಯೋಜನೆಯ ಮುಖಾಂತರ ಗ್ರಾಮೀಣ ಭಾಗಗಳ 5 ಲಕ್ಷ ಯುವಜನರಿಗೆ ಉದ್ಯೋಗ ಕೊಡಲಾಗುವುದು. ಇದರಿಂದ ರಾಜ್ಯದ ಆರ್ಥಿಕ ಬೆಳವಣಿಗೆಗೆ ವೇಗ ಮತ್ತು ಅಗಾಧತೆ ಸಿಕ್ಕಲಿದೆ ಎಂದು ಅವರು ಹೇಳಿದರು.

ರಾಜ್ಯಕ್ಕೆ ಇತ್ತೀಚೆಗೆ 8 ಲಕ್ಷ ಕೋಟಿ ರೂ. ಹೂಡಿಕೆ ಬರುವುದು ಖಾತ್ರಿಯಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲು ಕೌಶಲ್ಯಾಭಿವೃದ್ಧಿ ನಿರ್ಣಾಯಕವಾಗಿದೆ. ಹೀಗಾಗಿ ಐಟಿಐ, ಜಿಟಿಟಿಸಿ, ಪಾಲಿಟೆಕ್ನಿಕ್‌, ಎಂಜಿನಿಯರಿಂಗ್‌ ಕಾಲೇಜುಗಳೆಲ್ಲವನ್ನೂ ಕೌಶಲ್ಯದ ವ್ಯಾಪ್ತಿಗೆ ತರಲಾಗಿದೆ. ಇನ್ನೊಂದೆಡೆಯಲ್ಲಿ, ಪ್ರಧಾನಮಂತ್ರಿಗಳ ಸ್ಕಿಲ್‌ ಇಂಡಿಯಾ ಮತ್ತು ದೀನ್‌ ದಯಾಳ್‌ ಉಪಾಧ್ಯಾಯ ಕೌಶಲ್ಯ ಯೋಜನೆಗಳಡಿ ಯುವಜನರನ್ನು ಉದ್ಯೋಗಗಳಿಗೆ ಅರ್ಹರನ್ನಾಗಿ ಮತ್ತು ಉದ್ಯೋಗದಾತರನ್ನಾಗಿ ಮಾಡಲಾಗುತ್ತಿದೆ. ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಮುದ್ರಾದ ಅಡಿಯಲ್ಲಿ ರಾಜ್ಯದ 25 ಲಕ್ಷ ಜನರಿಗೆ ತಮ್ಮ ವಹಿವಾಟು ಮತ್ತು ಉದ್ಯಮಗಳನ್ನು ಆರಂಭಿಸಲು ಗರಿಷ್ಠ ತಲಾ 10 ಲಕ್ಷ ರೂ.ವರೆಗೆ ಸುಗಮವಾಗಿ ಸಾಲ ಕೊಡಲಾಗಿದೆ ಎಂದು ಅವರು ತಿಳಿಸಿದರು.

ಪಾಶ್ಚಾತ್ಯ ರಾಷ್ಟ್ರಗಳು ಈಗ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿದ್ದು, ಪಕ್ಕದ ಚೀನಾ ಕೋವಿಡ್‌ನಿಂದ ತತ್ತರಿಸುತ್ತಿದೆ. ಆದರೆ, ಶೇಕಡ 46ರಷ್ಟು ಯುವಜನರೊಂದಿಗೆ ಭಾರತವು ದೈತ್ಯ ಆರ್ಥಿಕ ಶಕ್ತಿಯಾಗುವತ್ತ ಮುನ್ನುಗ್ಗುತ್ತಿದೆ. ಯುವಜನರು ಜಾಗತಿಕ ಸ್ಪರ್ಧೆಯನ್ನು ಕಡೆಗಣಿಸದೆ ವೈಯಕ್ತಿಕ ಯಶಸ್ಸನ್ನು ಸಾಧಿಸಿ, ಸಾಮುದಾಯಿಕ ಸಾಧನೆಗೆ ಬೆಂಬಲವಾಗಿ ನಿಲ್ಲಬೇಕು ಎಂದು ಬೊಮ್ಮಾಯಿ ಆಶಿಸಿದರು.

ಸಚಿವರಿಗೆ ವೆಲ್‌ ಡನ್‌ ಎಂದ ಸಿಎಂ: ಸಚಿವ ಸಿ ಎನ್ ಅಶ್ವತ್ಥನಾರಾಯಣ ಅವರು ಏಕಕಾಲದಲ್ಲಿ 10 ಸಾವಿರ ಜನರಿಗೆ ಉದ್ಯೋಗಪತ್ರ ವಿತರಿಸುವ ಮೂಲಕ ದೇಶಕ್ಕೇ ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ. ಅವರಿಗೆ ಇಷ್ಟೊಂದು ಖಾತೆಗಳನ್ನೇಕೆ ಕೊಡಲಾಗಿದೆ ಎನ್ನುವ ಪ್ರಶ್ನೆಗೆ ಇವತ್ತಿನ ಅವರ ಕೆಲಸವೇ ಉತ್ತರವಾಗಿದೆ. ಅವರ ನೇತೃತ್ವದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಸಿಬ್ಬಂದಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಇದು ವಾಜಪೇಯಿಯವರಿಗೆ ನಿಜವಾದ ಗೌರವ ಸಲ್ಲಿಸುವ ಕೆಲಸವಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಮ್ಮ ಭಾಷಣದ ಆರಂಭದಲ್ಲೇ ಶ್ಲಾಘಿಸಿದರು. ಜೊತೆಗೆ, ಇಂತಹ ಉಪಕ್ರಮವನ್ನು ತಿಂಗಳಿಗೆ ಒಮ್ಮೆಯಾದರೂ ನಡೆಸಬೇಕು, ಇದರಿಂದ ನಿರುದ್ಯೋಗ ಸಮಸ್ಯೆ ತನ್ನಿಂತಾನೇ ನಿವಾರಣೆ ಆಗುತ್ತದೆ ಎಂದು ಅವರು ಸಲಹೆ ನೀಡಿದರು.

ವೃತ್ತಿ ತರಬೇತಿ ಆರಂಭ:ಸಚಿವ ಡಾ ಸಿಎನ್ ಅಶ್ವತ್ಥನಾರಾಯಣ ಮಾತನಾಡಿ, ಈ ವರ್ಷದಿಂದ ಬೆಂಗಳೂರು ವಿವಿ ವ್ಯಾಪ್ತಿಯಲ್ಲಿ ವೃತ್ತಿ ತರಬೇತಿ ಪದವಿಯನ್ನು (ಬಿ.ವೋಕ್‌) ಪ್ರಾರಂಭಿಸಲಾಗುವುದು. ಇದಕ್ಕಾಗಿ ಜಿಟಿಟಿಸಿ ಮತ್ತು ವಿವಿ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದರ ಮೂಲಕ ಸರ್ವರಿಗೂ ಉದ್ಯೋಗ ನೀತಿಯ ಸಾಕಾರ ಮಾಡಲಾಗುವುದು ಎಂದರು.

ಈಗಾಗಲೇ ರಾಜ್ಯದಲ್ಲಿ ಸರಕಾರಿ 150 ಐಟಿಐಗಳನ್ನು ಉನ್ನತೀಕರಿಸಲಾಗಿದೆ. ಈ ವರ್ಷ ಉಳಿದ 30 ಐಟಿಐಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಜಿಟಿಟಿಸಿಗಳಲ್ಲಿ ಈಗಾಗಲೇ ಅಲ್ಪಾವಧಿಯ 10 ಮತ್ತು ದೀಘಾವಧಿಯ 30 ಹೊಸ ಕೋರ್ಸುಗಳಿಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿರುವ ಉದ್ಯೋಗಾವಕಾಶಗಳು ಹೊರರಾಜ್ಯಗಳವರ ಪಾಲಾಗುವುದಕ್ಕಿಂತ ನಮ್ಮ ಯುವಜನರಿಗೇ ಸಿಗುವಂತೆ ಮಾಡುವುದು ನಮ್ಮ ಮುಂದಿರುವ ಹೆಗ್ಗುರಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.

ಉನ್ನತ ಶಿಕ್ಷಣ ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಪಾರದರ್ಶಕತೆ, ಉತ್ತರದಾಯಿತ್ವ, ಸುಲಭ ವರ್ಗಾವಣೆ, ಕುಂದುಕೊರತೆಗಳ ಸುಗಮ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಸುಶಾಸನ ಮಾಸವನ್ನು ರಚನಾತ್ಮಕವಾಗಿ ಆಚರಿಸಲಾಗಿದೆ, ಸ್ಕಿಲ್‌ ಕನೆಕ್ಟ್‌ ಪೋರ್ಟಲ್‌ ಮುಖಾಂತರ ವಿದ್ಯಾರ್ಥಿಗಳ ಆಸಕ್ತಿಗಳು ಇತ್ಯಾದಿಗಳನ್ನು ಗಮನಿಸಿ, ಸೂಕ್ತ ಕೌಶಲ್ಯಾಭಿವೃದ್ಧಿ ಒದಗಿಸಲಾಗುವುದು ಎಂದು ಅವರು ನುಡಿದರು.

ಇದೇ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಬೋಧಕೇತರ ಸಿಬ್ಬಂದಿಗಳ ಕುಂದುಕೊರತೆ ನಿವಾರಣೆಗೆ ರೂಪಿಸಿರುವ ಶಿಕ್ಷಣ ಸ್ಪಂದನ ಉಪಕ್ರಮ ಮತ್ತು ಜಿಟಿಟಿಸಿ ಪುನಾರಚನೆ ವರದಿಗಳನ್ನು ಬಿಡುಗಡೆ ಮಾಡಲಾಯಿತು.

ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆಯ ಈ ಉಪಕ್ರಮದಡಿ, ಮಾಸಿಕ ಕನಿಷ್ಠ 18 ಸಾವಿರ ರೂ.ಗಳಿಂದ ಹಿಡಿದು ಗರಿಷ್ಠ 45 ಸಾವಿರ ರೂ. ವೇತನದವರೆಗಿನ ಉದ್ಯೋಗಗಳು ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ. ಉದ್ಯೋಗ ಪಡೆದುಕೊಂಡವರಲ್ಲಿ ಎಂಜಿನಿಯರಿಂಗ್, ಬಿ.ಎಸ್ಸಿ, ಬಿ.ಕಾಂ., ನರ್ಸಿಂಗ್‌, ಡಿಪ್ಲೊಮಾ, ಪಾಲಿಟೆಕ್ನಿಕ್‌ ಪದವೀಧರರಿದ್ದಾರೆ. ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯೋಗ ಪಡೆದುಕೊಂಡ 3 ಸಾವಿರ ಅಭ್ಯರ್ಥಿಗಳು ಹಾಜರಿದ್ದರು.

ಅತ್ಯುತ್ತಮ ಸಂಸ್ಥೆಗಳು, ವಿದ್ಯಾರ್ಥಿಗಳಿಗೆ ಬಹುಮಾನ:ಸುಶಾಸನ ದಿನದ ಕಾರ್ಯಕ್ರಮದಲ್ಲಿ ಹಾವೇರಿಯ ಸರಕಾರಿ ಎಂಜಿನಿಯರಿಂಗ್ ಕಾಲೇಜು (ಅತ್ಯುತ್ತಮ ಸರಕಾರಿ ಎಂಜಿನಿಯರಿಂಗ್ ಕಾಲೇಜು), ಬೆಂಗಳೂರಿನ ಸರಕಾರಿ ಆರ್‍‌ ಸಿ ವಾಣಿಜ್ಯ ಕಾಲೇಜು (ಅತ್ಯುತ್ತಮ ಸರಕಾರಿ ಪ್ರಥಮ ದರ್ಜೆ ಕಾಲೇಜು), ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು (ಅತ್ಯುತ್ತಮ ಫಲಿತಾಂಶ) ಬೆಳಗಾವಿ ಜಿಟಿಟಿಸಿ (ಅತ್ಯುತ್ತಮ ಜಿಟಿಟಿಸಿ), ಮಂಗಳೂರಿನ ಸರಕಾರಿ ಮಹಿಳಾ ಐಟಿಐಗಳಿಗೆ (ಅತ್ಯುತ್ತಮ ಐಟಿಐ) ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು. ಜತೆಗೆ ಝಳಕಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೇದಿತಾ ಎಸ್‌ ಕಾಟ್ಕರ್‍‌ (ಪ್ರಬಂಧ), ಪುಂಜಾಲಕಟ್ಟೆ ಕಾಲೇಜಿನ ವಿದ್ಯಾರ್ಥಿನಿ ರಫಿಯಾ (ಭಾಷಣ) ಮತ್ತು ಕಾರವಾರ ಪ್ರಥಮ ದರ್ಜೆ ಕಾಲೇಜಿನ ಡಿ ಎಚ್ ಭಾವನಾ (ಪೋಸ್ಟರ್‍‌ ರಚನೆ) ಅವರಿಗೆ ಆಯಾ ವಿಭಾಗಗಳಲ್ಲಿ ಪ್ರಥಮ ಬಹುಮಾವನ್ನು ವಿತರಿಸಲಾಯಿತು.

ಪುರಸ್ಕಾರ:ಬೆಂಗಳೂರಿನಲ್ಲಿ ಭಾನುವಾರ ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಗಳ ವತಿಯಿಂದ ನಡೆದ ಸುಶಾಸನ ಮಾಸ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುರಸ್ಕಾರಗಳನ್ನು ಪ್ರದಾನ ಮಾಡಿದರು.

ಇದನ್ನೂ ಓದಿ:ಅಟಲ ಬಿಹಾರಿ ವಾಜಪೇಯಿ ಅಜಾತಶತ್ರು: ಸಿಎಂ ಬಸವರಾಜ ಬೊಮ್ಮಾಯಿ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.