ಬೆಂಗಳೂರು : ಕೊರೊನಾ ಹಿನ್ನೆಲೆ ಸಿಎಂ ಕಾವೇರಿ ನಿವಾಸದಲ್ಲಿ ಇಂದು ಸ್ಯಾನಿಟೈಸ್ ಮಾಡಲಾಯಿತು. ಸಿಎಂ ಆಪ್ತ ಸಿಬ್ಬಂದಿಗೆ ಕೊರೊನಾ ಪೊಸಿಟಿವ್ ಬಂದ ಹಿನ್ನೆಲೆ ಈಗಾಗಲೇ ಗೃಹ ಕಚೇರಿ ಕೃಷ್ಣಾವನ್ನು ಐದು ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ. ಇಂದು ಪಕ್ಕದ ಸಿಎಂ ಕಾವೇರಿ ನಿವಾಸವನ್ನೂ ಸ್ಯಾನಿಟೈಸ್ ಮಾಡಲಾಯಿತು.
ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಸಿಎಂ ಸರ್ಕಾರಿ ನಿವಾಸ ಕಾವೇರಿಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಯಿತು. ನಿವಾಸದ ಗಾರ್ಡನ್ ಸುತ್ತಮುತ್ತ ಸಿಬ್ಬಂದಿ ಸ್ಯಾನಿಟೈಸ್ ಮಾಡಿ, ಶುಚಿಗೊಳಿಸಿದರು.
ಸದ್ಯ ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಸೆಲ್ಫ್ ಕ್ವಾರಂಟೈನ್‌ನಲ್ಲಿದ್ದಾರೆ. ಸಾರ್ವಜನಿಕರ ಭೇಟಿಗೆ ನಿರ್ಬಂಧ ಹೇರಲಾಗಿದೆ. ಸಚಿವರುಗಳು ದೂರವಾಣಿ ಮೂಲಕ ಸಿಎಂಗೆ ಕೊರೊನಾ ಬೆಳವಣಿಗೆಗಳ ಸಂಬಂಧ ಮಾಹಿತಿ ನೀಡುತ್ತಿದ್ದಾರೆ.