ETV Bharat / state

ಶ್ರೀರಾಮುಲು ಖಾತೆ ಬದಲಾವಣೆ: ಸುಧಾಕರ್​​ಗೆ ಆರೋಗ್ಯ ಖಾತೆ ನೀಡಲು ಸಿಎಂ ನಿರ್ಧಾರ

ಕೋವಿಡ್ ನಿಯಂತ್ರಣ ಸಂಬಂಧ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಮಧ್ಯೆ ಸಮನ್ವಯತೆಯ ಕೊರತೆ ಇದೆ. ಜೊತೆಗೆ ಸಚಿವರ ಮಧ್ಯೆ ಗೊಂದಲಗಳು ಏರ್ಪಡುತ್ತಿವೆ. ಈ ಗೊಂದಲ ನಿವಾರಿಸಿ, ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಿ ಕೊರೊನಾ ನಿಯಂತ್ರಿಸಲು ಅನುಕೂಲವಾಗಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೆಗಲಿಗೆ ಆರೋಗ್ಯ ಇಲಾಖೆಯನ್ನೂ ಸಹ ನೀಡಲು ಸಿಎಂ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

cm decided to give helth sector to dr. k sudakar
ಸಚಿವ ಶ್ರೀರಾಮುಲು ಖಾತೆ ಬದಲಾವಣೆ: ಡಾ. ಕೆ. ಸುಧಾಕರ್​​ಗೆ ಆರೋಗ್ಯ ಖಾತೆ ನೀಡಲು ಸಿಎಂ ನಿರ್ಧಾರ !
author img

By

Published : Oct 11, 2020, 9:10 PM IST

ಬೆಂಗಳೂರು: ಆರೋಗ್ಯ ಸಚಿವ ಸ್ಥಾನದಿಂದ ಶ್ರೀರಾಮುಲುಗೆ ಕೊಕ್ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ. ಶ್ರೀರಾಮುಲು‌ ಕೈಯಲ್ಲಿರುವ ಆರೋಗ್ಯ ಖಾತೆಯನ್ನು ಡಾ.ಕೆ.ಸುಧಾಕರ್​​ಗೆ ವಹಿಸಲು ಸಿಎಂ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಾ.ಕೆ.ಸುಧಾಕರ್ ಅವರ ಬಳಿ ವೈದ್ಯಕೀಯ ಶಿಕ್ಷಣ ಖಾತೆ ಇದ್ದು, ಅದರ ಜೊತೆಗೆ ಆರೋಗ್ಯ ಖಾತೆಯನ್ನೂ ಸಹ ನೀಡಲು ಸಿಎಂ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ರಾಮುಲುಗೆ ಹಾಲಿ ಇರುವ ಹಿಂದುಳಿದ ವರ್ಗಗಳ ಇಲಾಖೆ ಖಾತೆ ಜೊತೆಗೆ ಸಮಾಜ‌ ಕಲ್ಯಾಣ ಖಾತೆ ನೀಡಲು ಸಿಎಂ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಕೋವಿಡ್ ನಿರ್ವಹಣೆ ರಾಮುಲುಗೆ ಕಷ್ಟಕರವಾಗುತ್ತಿದ್ದು, ಕೋವಿಡ್ ಮಧ್ಯೆ ಉಳಿದ ಇಲಾಖೆ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲ. ಕೋವಿಡ್ ನಿಯಂತ್ರಣ ಸಂಬಂಧ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಮಧ್ಯೆ ಸಮನ್ವಯತೆ ಕೊರತೆ ಇದೆ. ಜೊತೆಗೆ ಸಚಿವರ ಮಧ್ಯೆ ಗೊಂದಲಗಳು ಏರ್ಪಡುತ್ತಿವೆ. ಈ ಗೊಂದಲ ನಿವಾರಿಸಿ, ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಿ ಕೊರೊನಾ ನಿಯಂತ್ರಿಸಲು ಅನುಕೂಲವಾಗಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೆಗಲಿಗೆ ಆರೋಗ್ಯ ಇಲಾಖೆಯನ್ನೂ ಸಹ ನೀಡಲು ಸಿಎಂ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಎರಡೂ ಖಾತೆಗಳನ್ನು ಒಬ್ಬ ಸಚಿವನ ಹೆಗಲಿಗೆ ನೀಡುವುದರಿಂದ ಕೊರೊನಾ ನಿಯಂತ್ರಣ ಸುಲಭವಾಗಲಿದೆ‌. ಕೊರೊನಾ‌ ಸಂಬಂಧ ಎರಡೂ ಇಲಾಖೆಗಳಾದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಿರ್ಧಾರವನ್ನು ತ್ವರಿತವಾಗಿ ತೆಗೆದುಕೊಳ್ಳಬಹುದು. ಯಾವುದೇ ಗೊಂದಲ, ವಿಳಂಬ ಇಲ್ಲದೇ ಒಬ್ಬನೇ ಸಚಿವ ಎರಡು ಖಾತೆಗಳ ಸಂಬಂಧ ನಿರ್ಧಾರ ಕೈಗೊಳ್ಳಲು ಸುಲಭವಾಗಲಿದೆ ಎಂಬ ಕಾರಣಕ್ಕೆ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ಡಿಸಿಎಂ ಗೋವಿಂದ ಕಾರಜೋಳ ಬಳಿ ಸಮಾಜ ಕಲ್ಯಾಣ ಇಲಾಖೆ ಇದೆ. ಈ ಖಾತೆಯನ್ನು ರಾಮುಲುಗೆ ನೀಡಲು ಸಿಎಂ ಮುಂದಾಗಿದ್ದಾರೆ. ಕಾರಜೋಳ ಬಳಿ ಲೋಕೊಪಯೋಗಿ ಇಲಾಖೆ ಮಾತ್ರ ಉಳಿಯಲಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜೊತೆಗೆ ಸಮಾಜ ಕಲ್ಯಾಣ ಇಲಾಖೆಯ ಹೊಣೆಯನ್ನೂ ರಾಮುಲುಗೆ ನೀಡಲು ಸಿಎಂ ಮುಂದಾಗಿದ್ದಾರೆ.

ಖಾತೆ ಬದಲಾವಣೆ ಸಂಬಂಧ ನಾಳೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಖಾತೆ ಹಂಚಿಕೆ ಸಂದರ್ಭ ರಾಮುಲು ಸಮಾಜ‌ ಕಲ್ಯಾಣ ಇಲಾಖೆ ಪರ ಒಲವು ಹೊಂದಿದ್ದರು. ಆದರೆ ಬಳಿಕ ಅವರಿಗೆ ಆರೋಗ್ಯ ಇಲಾಖೆ ನೀಡಲಾಗಿತ್ತು. ಮೊದಲಿನಿಂದಲೂ ಸಮಾಜ ಕಲ್ಯಾಣ ಇಲಾಖೆಯತ್ತ ಒಲವು ಹೊಂದಿದ್ದ ರಾಮುಲುಗೆ ಆ ಜವಾಬ್ದಾರಿಯನ್ನು ಸಿಎಂ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.