ETV Bharat / state

ಪ್ರಧಾನಿ ಮೋದಿ ನಿದ್ರೆ ಮಾಡುತ್ತಿರುವ ವ್ಯಂಗ್ಯಭರಿತ ಫೋಟೋ ಟ್ವೀಟ್ ಮಾಡಿ ಸಿಎಂ ಸರಣಿ ಟೀಕೆ

ಪ್ರಧಾನಿ ಮೋದಿ ಅವರ ವ್ಯಂಗ್ಯಭರಿತ ಪೋಟೋಗಳನ್ನು ಎಕ್ಸ್​ನಲ್ಲಿ ಸಿಎಂ ಶೇರ್​ ಮಾಡಿ ಟೀಕಿಸಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಸಿಎಂ ಸರಣಿ ಟೀಕೆ
ಪ್ರಧಾನಿ ಮೋದಿ ವಿರುದ್ಧ ಸಿಎಂ ಸರಣಿ ಟೀಕೆ
author img

By ETV Bharat Karnataka Team

Published : Jan 16, 2024, 8:29 PM IST

ಬೆಂಗಳೂರು: ಪ್ರಧಾನಿ ಮೋದಿ ನಿದ್ದೆ ಮಾಡುತ್ತಿರುವ ವ್ಯಂಗ್ಯ ಭರಿತ ಫೋಸ್ಟರ್​ ಅನ್ನು ಎಕ್ಸ್​ನಲ್ಲಿ ಶೇರ್​ ಮಾಡಿರುವ ಸಿಎಂ ಸಿದ್ದರಾಮಯ್ಯ ಪ್ರಧಾನಿಯ ಗಾಢ ನಿದ್ರೆ ಕರ್ನಾಟಕದ ಅಭಿವೃದ್ಧಿಗದೇ ಪ್ರಮುಖ ತೊಂದ್ರೆ ಎಂದು ಟೀಕಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು, ತನಗೆ ತಾನೇ ಪ್ರಚಾರ ಕೊಟ್ಟುಕೊಳ್ಳಲು ಹಾಗೂ ಬಿಜೆಪಿಗಾಗಿ ಪ್ರಚಾರ ಮಾಡಲು ಸದಾ ಎದ್ದಿರುವ ನರೇಂದ್ರ ಮೋದಿ ಅವರು ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಯಾವಾಗಲೂ ತೂಕಡಿಸುತ್ತಿರುತ್ತಾರೆ. ಕರ್ನಾಟಕದ ಕಟು ವಾಸ್ತವಕ್ಕೆ ಸ್ಪಂದಿಸದ ಮೋದಿಯಿಂದ ಸದಾ ಪಲಾಯನ ಎಂದು ವಾಗ್ದಾಳಿ ನಡೆಸಿದ್ದಾರೆ.

  • ಪ್ರಧಾನಿಯ ಗಾಢ ನಿದ್ರೆ
    ಕರ್ನಾಟಕದ ಅಭಿವೃದ್ಧಿಗದೇ ಪ್ರಮುಖ ತೊಂದ್ರೆ

    ತನಗೆ ತಾನೇ ಪ್ರಚಾರ ಕೊಟ್ಟುಕೊಳ್ಳಲು ಹಾಗೂ ಬಿಜೆಪಿಗಾಗಿ ಪ್ರಚಾರ ಮಾಡಲು ಸದಾ ಎದ್ದಿರುವ ನರೇಂದ್ರ ಮೋದಿ ಅವರು ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಯಾವಾಗಲೂ ತೂಕಡಿಸುತ್ತಿರುತ್ತಾರೆ.

    ಕರ್ನಾಟಕದ ಕಟು ವಾಸ್ತವಕ್ಕೆ ಸ್ಪಂದಿಸದ ಮೋದಿಯಿಂದ ಸದಾ ಪಲಾಯನ
    - ಕೇಂದ್ರವು… pic.twitter.com/q37nCcijbn

    — Siddaramaiah (@siddaramaiah) January 16, 2024 " class="align-text-top noRightClick twitterSection" data=" ">

ಕೇಂದ್ರವು ಸರಿಯಾಗಿ ಅನುದಾನ ಕೊಡುತ್ತಿಲ್ಲ, ಕನ್ನಡಿಗರ ಮಹತ್ವಾಕಾಂಕ್ಷೆಗಳಿಗೆ ಕಿಂಚಿತ್ತು ಬೆಲೆ ನೀಡುತ್ತಿಲ್ಲ, ಕೇಂದ್ರದ ಪರಿಹಾರ ಹಣ ಇನ್ನೂ ರೈತರ ಕೈಗೆ ತಲುಪಿಲ್ಲ. ಮೋದಿ ಮಂತ್ರವಿಷ್ಟೇ, ಕಡೆಗಣಿಸು. ನಿರ್ಲಕ್ಷಿಸು. ನಿದ್ರಿಸು. ಮತ್ತದನ್ನೇ ಪುನರಾವರ್ತಿಸು!. ಇನ್ನು ಬಿಜೆಪಿ ಸಂಸದರ ಮಂತ್ರ, ಬಾಯಿಗೆ ಬೀಗ ಹಾಕಿಕೊಂಡಿರು. ಮೋದಿಯದ್ದೇ ಜಪ ಮಾಡಿಕೊಂಡಿರು. ಕನ್ನಡಿಗರ ನಂಬಿಕೆಗೆ ದ್ರೋಹ ಬಗೆಯುತ್ತಿರು. ಮೋದಿ ನಿಶ್ಚಿಂತೆಯಿಂದ ನಿದ್ರಿಸಲು ಮತ್ತದನ್ನೇ ಪುನರಾವರ್ತಿಸು! ಎಂದು ಟೀಕಿಸಿದ್ದಾರೆ.

ರಾಜ್ಯಕ್ಕೆ ಆಗಿರುವ ಅನ್ಯಾಯ ಕುರಿತು ಆನ್ಸರ್ ಮಾಡಿ ಮೋದಿ ಎಂದು ಟ್ವೀಟ್​ ಮಾಡಿರುವ ಅವರು, 47 ವರ್ಷಗಳಲ್ಲೇ ಅತ್ಯಂತ ಕೆಟ್ಟ ಬರಗಾಲ ಎದುರುಸುತ್ತಿದೆ ಕರ್ನಾಟಕ ಆದ್ರೂ ಇದುವರೆಗೂ ಪರಿಹಾರ ಬಿಡುಗಡೆ ಮಾಡಿಲ್ಲ ಎಂಬ ಪೋಸ್ಟರ್​ ಶೇರ್​ ಮಾಡಿ ವ್ಯಂಗ್ಯವಾಡಿದ್ದಾರೆ.

ಮಹದಾಯಿ ಕೃಷ್ಣ ಜಲಭಾಗ್ಯ ಸೇರಿದಂತೆ ರಾಜ್ಯದ ಜಲ ವಿಚಾರ ಬಂದಗಲೂ ಮೋದಿ ನಿದ್ದೆ. ಗುತ್ತಿಗೆದಾರನ ಆತ್ಮಹೆತ್ಯೆ ಪ್ರಶ್ನೆ ಕೇಳಿದಾಗಲೂ ಮೋದಿ ನಿದ್ದೆ. ಪಿಎಂ ಮೋದಿಯವರೇ ಎದ್ದೇಳಿ ಕರ್ನಾಟಕದ ಪಾಲಿನ ಅನುದಾನ ನೀಡಿ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಾಗಬೇಕು: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.