ETV Bharat / state

108 ಆ್ಯಂಬುಲೆನ್ಸ್​ ಡ್ರೈವರ್ ಉಮೇಶ್ ಪತ್ನಿಗೆ ಸಿಎಂ ಸಾಂತ್ವನ, ಪರಿಹಾರದ ಭರವಸೆ - ಮೃತ ಆ್ಯಂಬುಲೆನ್ಸ್​​ ಚಾಲಕನ ಕುಟುಂಬಕ್ಕೆ ಯಡಿಯೂರಪ್ಪ ಸಾಂತ್ವನ

ಹೃದಯಾಘಾತದಿಂದ ಮೃತಪಟ್ಟ 108 ಆ್ಯಂಬುಲೆನ್ಸ್​​ ಚಾಲಕ ಉಮೇಶ್ ಅವರ ಪತ್ನಿಗೆ ಸಿಎಂ ಯಡಿಯೂರಪ್ಪ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೆ, ಮೃತನ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯ ಮಾಡುವುದಾಗಿ ಅಭಯ ನೀಡಿದ್ದಾರೆ.

cm bsy  talk with  ambulence driver wife
ಸಿಎಂ ಸಾಂತ್ವನ
author img

By

Published : Jun 1, 2020, 12:02 PM IST

ಬೆಂಗಳೂರು: ಹೃದಯಾಘಾತದಿಂದ ಮೃತಪಟ್ಟ 108 ಆ್ಯಂಬುಲೆನ್ಸ್​​ ಚಾಲಕ ಉಮೇಶ್ ಫಕೀರಪ್ಪ ಪತ್ನಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ‌ ಮಾಡಿ ಸಾಂತ್ವನ ಹೇಳಿದ್ದು ಪರಿಹಾರಧನ ಕೊಡುವ ಭರವಸೆ ನೀಡಿದ್ದಾರೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರಿನ 108 ಆ್ಯಂಬುಲೆನ್ಸ್​​ ಚಾಲಕ ಉಮೇಶ್ ಹೃದಯಾಘಾತದಿಂದ ಮೃತಪಟ್ಟ ಮಾಹಿತಿ ಹಿನ್ನೆಲೆ ಅವರ ಪತ್ನಿಗೆ ಖುದ್ದು ಸಿಎಂ ಬಿ.ಎಸ್‌. ಯಡಿಯೂರಪ್ಪ ಕರೆ ಮಾಡಿ ಘಟನೆಯ ಮಾಹಿತಿ ಪಡೆದುಕೊಂಡರು. ಇಬ್ಬರು ಮಕ್ಕಳಿದ್ದಾರೆ, ಹೊಲ, ಮನೆ ಏನೂ ಇಲ್ಲದೆ ದಿಕ್ಕೇ‌ ತೋಚುತ್ತಿಲ್ಲ ಎಂದ ಮಹಿಳೆಯ ನೋವಿಗೆ ಸ್ಪಂದಿಸಿ ಸೂಕ್ತ ನೆರವಿನ ಭರವಸೆ ನೀಡಿದ್ದಾರೆ.

ಸಿಎಂ ಸಾಂತ್ವನ

ಇದೆಂಥ ವಿಧಿಯಾಟ... ತಾಳಿ ಅಡವಿಟ್ಟು ಗಂಡನ ಶ್ರಾದ್ಧ ಕಾರ್ಯ ಮಾಡಿದ ಕೊರೊನಾ ವಾರಿಯರ್​‌ ಪತ್ನಿ!
ಕೊರೊನಾ ನಿಧಿಯಿಂದ ಏನಾದರೂ ಕೊಡಲು ಸಾಧ್ಯವೇ ಎಂದು ಪರಿಶೀಲನೆ ಮಾಡುತ್ತೇನೆ. ಆ್ಯಂಬುಲೆನ್ಸ್​​​​ಗೆ ವಿಮೆ ಇರಲಿದೆ, ಅದರ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ನೆರವನ್ನು ಕಲ್ಪಿಸುವುದಾಗಿ ಅಭಯ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.