ಬೆಂಗಳೂರು: ಎಷ್ಟೇ ಕೆಲಸದ ಒತ್ತಡವಿರಲಿ, ಯಾವುದೇ ಊರಿಗೆ ಹೋಗಲಿ ನಿತ್ಯ ವಾಕಿಂಗ್ ಮಾಡುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದೈನಂದಿನ ದಿನಚರಿ. ವಿದೇಶಕ್ಕೆ ತೆರಳಿದ್ರು ಸಿಎಂ ವಾಕಿಂಗ್ ಮಾತ್ರ ಮಿಸ್ ಮಾಡ್ತಾ ಇಲ್ಲ.
ಸ್ವಿಟ್ಜರ್ಲೆಂಡ್ನ ದಾವೊಸ್ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಭಾಗಿಯಾಗಿದ್ದಾರೆ. ಮೊದಲನೇ ದಿನ ಬೆಳಗ್ಗೆ ಸಮಯದ ವ್ಯತ್ಯಾಸದಿಂದಾಗಿ ವಾಕಿಂಗ್ ಮಿಸ್ ಮಾಡಿಕೊಂಡ ಬಿಎಸ್ವೈ, ನೇರವಾಗಿ ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶಕ್ಕೆ ಹಾಜರಾದರು. ಇನ್ವೆಸ್ಟ್ ಕರ್ನಾಟಕ ಪೆವಿಲಿಯನ್ ಉದ್ಘಾಟಿಸಿ ನಂತರ ವಿವಿಧ ಸಭೆಗಳಲ್ಲಿ ಭಾಗವಹಿಸಿದರು.
ಮೊದಲ ದಿನದ ಸಮಾವೇಶ ಮುಗಿಯುತ್ತಿದ್ದಂತೆ ದಾವೊಸ್ನ ರಸ್ತೆಯಲ್ಲಿ ಸಿಎಂ ವಾಕ್ ಮಾಡಿದರು. ಬೆಳಗ್ಗೆ ಹಾಗೂ ಸಂಜೆ ವಾಯು ವಿಹಾರದ ಹವ್ಯಾಸ ರೂಢಿಸಿಕೊಂಡಿರುವ ಸಿಎಂ ಸಮಾವೇಶ ಮುಗಿದ ಬಳಿಕ ಸಮಯ ಸಿಗುತ್ತಿದ್ದಂತೆ ಸಮಾವೇಶ ಸ್ಥಳದ ಅಕ್ಕಪಕ್ಕದ ರಸ್ತೆಗಳಲ್ಲೇ ವಿಹರಿಸಿದ್ರು.