ETV Bharat / state

ಬಾಬ್ರಿ ಮಸೀದಿ ತೀರ್ಪು ಸಿಎಂಗೆ ವೈಯಕ್ತಿಕ ಖುಷಿಯಾಗಿದೆಯಂತೆ..

ಬಹಳ ಜನರು ತೀರ್ಪು ಯಾವ ರೀತಿ ಬರಲಿದೆ ಎಂದು ಕಾಯುತ್ತಿದ್ದರು. ಹೋರಾಟಕ್ಕೆ ಯಾವಾಗಲೂ ಗೆಲುವು ಸಿಗಲಿದೆ ಎನ್ನುವುದು ಸಾಬೀತಾಗಿದೆ. ಅಂದು ಅಡ್ವಾಣಿ ಅವರ ಮಾಡಿದ್ದ ಭಾಷಣ ಯಾರು ಮರೆಯಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ಈಗಾಗಲೇ ರಾಮ ಮಂದಿರ ನಿರ್ಮಾಣಕ್ಕೆ ಕೆಲಸ ಆರಂಭವಾಗಿದೆ..

CM BS Yedyyurappa
ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ
author img

By

Published : Sep 30, 2020, 2:42 PM IST

ಬೆಂಗಳೂರು : ಬಾಬ್ರಿ ಮಸೀದಿ ದ್ವಂಸ ಪ್ರಕರಣ ಕುರಿತು ಸಿಬಿಐ ನ್ಯಾಯಾಲಯ ನೀಡಿರುವ ತೀರ್ಪನ್ನು ಸ್ವಾಗತ ಮಾಡುತ್ತೇನೆ. ಸತ್ಯಕ್ಕೆ ಸಂದ ಜಯ ಇದಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

ಬಾಬ್ರಿ ಮಸೀದಿ ತೀರ್ಪು ಕುರಿತು ಸಿಎಂ ಬಿಎಸ್​​ವೈ ಪ್ರತಿಕ್ರಿಯೆ

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯರೆಲ್ಲರೂ ಸಂತೋಷ ಪಡುವ ಶುಭದಿನ ಇದಾಗಿದೆ. ಲಖನೌ ಸಿಬಿಐ ನ್ಯಾಯಾಲಯ ಐತಿಹಾಸಿಕ‌ ತೀರ್ಪು ನೀಡಿದೆ. ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಮುರುಳಿ ಮನೋಹರ ಜೋಷಿ, ಉಮಾಭಾರತಿ ಸೇರಿ 32 ಆರೋಪಿಗಳು ದೋಷ ಮುಕ್ತ ಎಂದು ತೀರ್ಪು ನೀಡಿದೆ. ಇದು ಉದ್ದೇಶಪೂರ್ವಕ ನಡೆದ ಕೃತ್ಯ ಅಲ್ಲ ಎಂದು ಅಭಿಪ್ರಾಯಪಟ್ಟಿದೆ. ಸತ್ಯಕ್ಕೆ ಜಯ‌ಸಿಕ್ಕಿದೆ, ನಾನು ಕೂಡ ಹೋರಾಟದಲ್ಲಿ ನೇರ ಭಾಗಿಯಾಗಿದ್ದೆ. ನನಗೂ ವೈಯಕ್ತಿಕ ಖುಷಿ ತಂದಿದೆ ಎಂದರು.

ಬಹಳ ಜನರು ತೀರ್ಪು ಯಾವ ರೀತಿ ಬರಲಿದೆ ಎಂದು ಕಾಯುತ್ತಿದ್ದರು. ಹೋರಾಟಕ್ಕೆ ಯಾವಾಗಲೂ ಗೆಲುವು ಸಿಗಲಿದೆ ಎನ್ನುವುದು ಸಾಬೀತಾಗಿದೆ. ಅಂದು ಅಡ್ವಾಣಿ ಅವರ ಮಾಡಿದ್ದ ಭಾಷಣ ಯಾರು ಮರೆಯಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ಈಗಾಗಲೇ ರಾಮ ಮಂದಿರ ನಿರ್ಮಾಣಕ್ಕೆ ಕೆಲಸ ಆರಂಭವಾಗಿದೆ. ಇದಕ್ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ ಹೋರಾಟ ಕಾರಣ. ಈ ತೀರ್ಪನ್ನು ಸ್ವಾಗತಿಸುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.