ETV Bharat / state

ಕಾಂಗ್ರೆಸ್ ಜನರ ದಾರಿ ತಪ್ಪಿಸುವ ಪಿತೂರಿ ಮಾಡುತ್ತಿದೆ: ಸಿಎಂ ಬಿಎಸ್​​ವೈ - ಸಚಿವ ಮಾಧುಸ್ವಾಮಿ

ನಮ್ಮ ರಾಜ್ಯದಲ್ಲಿ ಇಬ್ಬರು ಶಾಸಕರಿದ್ದಾಗ ರಾಜ್ಯಾದ್ಯಂತ ಓಡಾಡಿ ಪಕ್ಷ ಕಟ್ಟಿದ್ದೇವೆ. ಮುಂದಿನ‌ ಚುನಾವಣೆಯಲ್ಲಿ ಬಿಜೆಪಿ 140-145ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ನಾವು ಯಾರ ಬೆಂಬಲಕ್ಕಾಗಿ ಅವಲಂಬಿಸುವ ಪರಿಸ್ಥಿತಿ ಎದುರಾಗಬಾರದು ಎಂದು ಸಿಎಂ ಬಿಎಸ್​​ವೈ ಕರೆ ನೀಡಿದ್ದಾರೆ.

cm-bs-yadiyurappa-talk-about-conspiracy-congress-news
ಬಿಎಸ್​​ವೈ ಕಿಡಿ
author img

By

Published : Dec 19, 2020, 7:12 PM IST

ಬೆಂಗಳೂರು: ಜನರ ದಾರಿ ‌ತಪ್ಪಿಸುವ ಪಿತೂರಿಯನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಕಿಡಿ‌ಕಾರಿದರು.

ಬಿಎಸ್​​ವೈ ಕಿಡಿ

ಕೋರಮಂಗಲದಲ್ಲಿ ನಡೆದ ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಯಾವುದೇ ಸಮಸ್ಯೆ ಆಗಲ್ಲ. ಮಾತುಕತೆಗೆ ಬನ್ನಿ ಎಂದು ಪ್ರಧಾನಿ ಮನವಿ ಮಾಡಿದರೂ ಕಾಂಗ್ರೆಸ್ ಗೊಂದಲ ಮೂಡಿಸುವ ಕೆಲಸ‌ ಮಾಡುತ್ತಿದೆ. ಕೃಷಿ ನಮ್ಮ ಉಸಿರಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ‌ ಪರ ಸರ್ಕಾರವಾಗಿವೆ. ಕೃಷಿಯನ್ನು ಲಾಭದಾಯಕ ಕಸುಬಾಗಿ ಮಾಡಲು ನಾವು ಯತ್ನಿಸುತ್ತಿದ್ದೇವೆ ಎಂದರು.

ಇನ್ನು 20 ವರ್ಷ ಕಾಂಗ್ರೆಸ್ ಪ್ರತಿಪಕ್ಷದಲ್ಲೇ ಇರಬೇಕು ಎಂದು ಗುಲಾಬ್ ನಬಿ ಆಜಾದ್ ಹೇಳಿದ್ದಾರೆ. ಇದು ಅವರ ಸ್ಥಿತಿ, ಅವರಿಗೆ ನಾಯಕತ್ವವೇ ಇಲ್ಲ. ಕೆಲವರು ಸತ್ಯಾಗ್ರಹ ಮಾಡುತ್ತಿದ್ದು, ಇದರ ಹಿಂದೆ ಪಿತೂರಿ ಇದೆ. ಆ ಮೂಲಕ ಗೊಂದಲ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ನನ್ನ ಕೃಷಿ ಉತ್ಪನ್ನವನ್ನು ಮಾರಾಟ ಮಾಡಲು ಯಾರ ಅಪ್ಪನ ಅಪ್ಪಣೆ ಬೇಕು ಎಂದು ಕಿಡಿಕಾರಿದರು.

ಹೊಸೂರಿಗೆ ಹೋಗಿ ನಮ್ಮವರು ಜಮೀನು ಖರೀದಿ ಮಾಡುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಖರೀದಿ ಮಾಡುವ ಹಾಗಿಲ್ಲ. ಅದನ್ನು ತೆಗೆದು ಹಾಕಿದ್ದೇವೆ. ರೈತರಿಗಾಗಿ ಬದುಕಿರುವ ಸರ್ಕಾರ ನಮ್ಮದು. ಸ್ವಾಮಿನಾಥನ್ ವರದಿಯನ್ನು ಮೋದಿ ಸರ್ಕಾರ 99% ಅನುಷ್ಠಾನ ಮಾಡಿದೆ. ಆದರೂ ಟೀಕೆ ಮಾಡುವುದು ಏಕೆ ಎಂದು ಪ್ರಶ್ನಿಸಿದರು.

ನಮ್ಮ ರಾಜ್ಯದಲ್ಲಿ ಇಬ್ಬರು ಶಾಸಕರಿದ್ದಾಗ ರಾಜ್ಯಾದ್ಯಂತ ಓಡಾಡಿ ಪಕ್ಷ ಕಟ್ಟಿದ್ದೇವೆ. ಮುಂದಿನ‌ ಚುನಾವಣೆಯಲ್ಲಿ ಬಿಜೆಪಿ 140-145ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ನಾವು ಯಾರ ಬೆಂಬಲಕ್ಕಾಗಿ ಅವಲಂಬಿಸುವ ಪರಿಸ್ಥಿತಿ ಎದುರಾಗಬಾರದು. ಆ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡಬೇಕು. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಇರುವುದು ಕರ್ನಾಟಕದಲ್ಲಿ ಮಾತ್ರ. ಉಳಿದ ದಕ್ಷಿಣ ರಾಜ್ಯಗಳಲ್ಲೂ ಪಕ್ಷ ಬಲಪಡಿಸಲು ಯತ್ನಿಸಬೇಕು ಎಂದು ಕರೆ ನೀಡಿದರು.

ಸತ್ಯ ಮರೆಮಾಚುವ ಕೆಲಸ ನಡೆಯುತ್ತಿದೆ:

ಇದೇ ವೇಳೆ ಮಾತನಾಡಿದ ಸಚಿವ ಮಾಧುಸ್ವಾಮಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ಸಂಬಂಧ ವಿರೋಧ ಕೇಳಿ ಬರುತ್ತಿದೆ. ಸತ್ಯ ಮರೆಮಾಚಿ ಮಾತನಾಡುವುದರಿಂದ ಅದೇ ಸತ್ಯ ಎಂಬ ಭಾವನೆ ಬರುತ್ತದೆ. ಅದಕ್ಕೆ ನಾವು ಜನರಿಗೆ ಅರಿವು ಮೂಡಿಸುವ ಅನಿವಾರ್ಯತೆ ಬಂದಿದೆ ಎಂದರು.

ರಾಜ್ಯದಲ್ಲಿ 2% ಮಾತ್ರ 79 ಎ ಮತ್ತು ಬಿ ಪ್ರಕರಣದಲ್ಲಿ ಭೂಮಿಯನ್ನು ಮುಟ್ಟುಗೋಲು ಹಾಕಲಾಗಿದೆ. ನ್ಯಾಯಾಲಯವು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಸಂಕಷ್ಟದಿಂದ ಜನರನ್ನು ವಿಮೋಚನೆಗೊಳಿಸಲು 79 ಎ, ಬಿ ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಇದರಿಂದ ಯಾವುದೇ ದೊಡ್ಡ ಸಮಸ್ಯೆ ಆಗಲ್ಲ ಎಂದರು.

79 ಎ ಮತ್ತು ಬಿ ರದ್ದು ಮಾಡಿದ ಹಿನ್ನೆಲೆ ಪ್ರಕರಣಗಳೆಲ್ಲವೂ ಖುಲಾಸೆ ಆಗಿವೆ. ಸೆಕ್ಷನ್ ರದ್ದಾದ ಹಿನ್ನೆಲೆ ಎಸಿ ಹುದ್ದೆಗಳೇ ಅಗತ್ಯ ಇಲ್ಲ ಅಂತಾ ಆಗಿದೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ತಂದು ಯಾವುದೇ ಮಾಡಬಾರದ ಪಾಪ ಮಾಡಿಲ್ಲ. ಇದರಲ್ಲಿ ಯಾವುದೇ ಹಿತಾಸಕ್ತಿ ಇಲ್ಲ. ಇದನ್ನು ರಾಜ್ಯದ ಹಿತದೃಷ್ಟಿಯಿಂದ ಮಾಡಲಾಗಿದೆ. ಕರ್ನಾಟಕದಲ್ಲಿ ಭೂಮಿ ಖರೀದಿ ಸಂಬಂಧ ಅತಿ ಹೆಚ್ಚು ನಿರ್ಬಂಧಗಳಿವೆ. ಹೀಗಾಗಿ ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳು ಬರುತ್ತಿಲ್ಲ. ಇದು ರೈತರ ಹಿತದೃಷ್ಟಿಯಿಂದ ಮಾಡಲಾಗಿದೆ ಎಂದರು.

ಎಪಿಎಂಸಿಯನ್ನು ಮುಚ್ಚುವ ಕೆಲಸ ನಾವು ಮಾಡಿಲ್ಲ. ರೈತರು ತಮಗೆ ಇಷ್ಟ ಬಂದಲ್ಲಿ ಉತ್ಪನ್ನಗಳನ್ನು ಮಾರಬಹುದಾಗಿದೆ. ರಾಜ್ಯದಲ್ಲಿ ಮೆಟ್ರೋ ಬರಲು ಕಾರಣ ಕಾಂಗ್ರೆಸ್, ಎಪಿಎಂಸಿಗೆ ಪ್ಯಾರಲಲ್ ವ್ಯವಸ್ಥೆ ತರಲು ಕಾರಣ ಕಾಂಗ್ರೆಸ್. ಯಾರ ಹಂಗಿನಲ್ಲಿ ಈ ಪ್ರತಿಭಟನೆ ಆಗುತ್ತಿದೆ?. ನಾನು ರೈತ, ನನಗೆ ಯಾವುದೇ ಸಮಸ್ಯೆ ಆಗಲ್ಲ.

ಪಂಜಾಬ್‌ ಮತ್ತು ಮಹಾರಾಷ್ಟ್ರದವರು ಇಡೀ ದೇಶವನ್ನು ಕಂಟ್ರೋಲ್ ಮಾಡ್ತಾ ಇದ್ದಾರೆ. ಪಂಜಾಬ್ ರೈತರಿಗೆ ಈ ಕಾಯ್ದೆಯಿಂದ ನಷ್ಟ ಆಗುತ್ತೆ ಎಂಬ ಭಯ ಇದೆ. ಆದರೆ ಇದರಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.