ETV Bharat / state

ಗಾಂಧಿ - ಶಾಸ್ತ್ರಿ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ: ಸಿಎಂ ಕರೆ - ಮಹಾತ್ಮಗಾಂಧಿ ಜಯಂತ್ಯುತ್ಸವ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಹಾತ್ಮಾ ಗಾಂಧಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಪ್ರಯುಕ್ತ ವಿಧಾನಸೌಧದಲ್ಲಿ ಪುಷ್ಪನಮನ ಅರ್ಪಿಸಿ, ಗೌರವ ಸಲ್ಲಿಸಿದರು.

CM bommai
ಗಾಂಧಿ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸ ಮಾತನಾಡಿದ ಸಿಎಂ ಬೊಮ್ಮಾಯಿ
author img

By

Published : Oct 2, 2021, 12:25 PM IST

ಬೆಂಗಳೂರು: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ನಿಮಿತ್ತ ಸಿಎಂ ಬೊಮ್ಮಾಯಿ ವಿಧಾನಸೌಧದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಈ ವೇಳೆ ಸಚಿವರಾದ ಸುನಿಲ್ ಕುಮಾರ್, ಗೋವಿಂದ ಕಾರಜೋಳ, ಎಂ.ಟಿ.ಬಿ.ನಾಗರಾಜ್ ಹಾಗೂ ಹಾಲಪ್ಪ ಆಚಾರ್ ಹಾಗೂ ಸಂಸದ ಶಿವಕುಮಾರ್ ಉದಾಸಿ ಉಪಸ್ಥಿತರಿದ್ದರು.

ಗಾಂಧಿ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸ ಮಾತನಾಡಿದ ಸಿಎಂ ಬೊಮ್ಮಾಯಿ

ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ, ಇವತ್ತು ಗಾಂಧಿ ಹಾಗೂ ಶಾಸ್ತ್ರಿ ಜನ್ಮದಿನ. ಇಬ್ಬರೂ ಮಹಾನ್ ಚೇತನಗಳು. ಪೂಜ್ಯ ಗಾಂಧಿಯವರು ಸತ್ಯ, ಅಹಿಂಸೆ ಎನ್ನುವ ಅಸ್ತ್ರ ಇಟ್ಟುಕೊಂಡು ವಿಶ್ವದೆಲ್ಲೆಡೆ ಗಮನ ಸೆಳೆದವರು. ಶಾಸ್ತ್ರಿಯವರು ಸತ್ಯದಿಂದ ನುಡಿದು ನಡೆದವರು ಎಂದು ಸ್ಮರಿಸಿದರು.

ಮಹಾತ್ಮಾ ಗಾಂಧಿಯವರ ದುಡಿಯುವ ಕೈಗಳಿಗೆ ಕೆಲಸ ಸಿಗಬೇಕು ಎಂಬ ಮಾತು 21ನೇ ಶತಮಾನಕ್ಕೆ ಪ್ರಸ್ತುತವಾಗಿದೆ. ಅವರ ಶುದ್ಧ ಸಾರ್ವಜನಿಕ ಬದುಕು ನಮಗೆ ಸದಾ ಪ್ರೇರಣೆಯಾಗುತ್ತದೆ. ಅವರ ದೇಶ ಭಕ್ತಿ ಅತ್ಯಂತ ಶ್ರೇಷ್ಠವಾಗಿದ್ದು, ಅವರು ಕೊಟ್ಟ ಸ್ಪೂರ್ತಿಯ ಸೆಲೆಯನ್ನು ಇನ್ನಷ್ಟು ಬಲಗೊಳಿಸುವ ಕೆಲಸ ಆಗಬೇಕು ಎಂದರು.

ಅತ್ಯಂತ ಪ್ರಮಾಣಿಕತೆಯ ಪ್ರತೀಕ ಲಾಲ್ ಬಹದ್ದೂರು ಶಾಸ್ತ್ರಿ, ಅವರ ಸರಳತೆ ಹಾಗೂ ಸೂಕ್ಷ್ಮತೆ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ಅವರು ಕೊಟ್ಟ ಘೋಷವಾಕ್ಯ ' ಜೈ ಜವಾನ್, ಜೈ ಕಿಸಾನ್' ಎಂದಿಗೂ ಮರೆಯುವಂತದ್ದಲ್ಲ.‌ ಎಲ್ಲಿವರೆಗೆ ಭಾರತ ಇರುತ್ತದೆ ಅಲ್ಲಿವರೆಗೆ ಈ ಜಯಘೋಷ ಇರುತ್ತದೆ ಎಂದರು.

ಲಾಲ್ ಬಹದ್ದೂರ್ ಶಾಸ್ತ್ರಿಗೂ ಕರ್ನಾಟಕಕ್ಕೂ ವಿಶೇಷವಾದ ನಂಟು ಇದೆ. ಅವರು ಆಲಮಟ್ಟಿ ಅಣೆಕಟ್ಟಿಗೆ ಅಡಿಗಲ್ಲು ಹಾಕಿದ್ದರು. ಆಲಮಟ್ಟಿ ನಮ್ಮ ಉ.ಕರ್ನಾಟಕದ ಜೀವನದಿ. ಈ ಇಬ್ಬರೂ ಮಾನವತಾವಾದಿ, ಶ್ರೇಷ್ಠರ ಜನ್ಮದಿನವನ್ನು ನಾವು ಅರ್ಥಪೂರ್ಣವಾಗಿ ಆಚರಿಸಬೇಕು. ಅವರ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.