ಬೆಂಗಳೂರು: ಜಮೀರ್ ಹೇಳಿಕೆ ಎಷ್ಟು ಸಮಂಜಸ ಎಂಬುದನ್ನು ಇಡೀ ದೇಶವೇ ಗಮನಿಸುತ್ತಿದೆ. ಅವರ ಮನಸ್ಥಿತಿ ಏನು ಎನ್ನುವುದು ಗೊತ್ತಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಜಮೀರ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜಮೀರ್ ಹೇಳಿಕೆಗೆ ಇಡೀ ದೇಶವೇ ಪ್ರತಿಕ್ರಿಯಿಸಿದೆ. ಅವರ ಮನಸ್ಥಿತಿ ಏನು ಎನ್ನುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.
ಪ್ರೌಢ ಶಾಲೆ ಆರಂಭವಾಗಿದೆ. ಕೆಲವು ಜಿಲ್ಲೆಗಳಲ್ಲಿ ಒಂದಷ್ಟು ಘಟನೆಗಳಾಗಿವೆ. ಇವತ್ತು ಸಂಜೆ ಸಭೆ ನಡೆಸುತ್ತೇವೆ. ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಅದರ ಪಾಲನೆ ಆಗಬೇಕು. ಹೈಕೋರ್ಟ್ ಆದೇಶ ಪಾಲನೆ ಮಾಡಬೇಕಿರೋದು ಶಾಲೆಗಳು, ಪೋಷಕರ ಜವಾಬ್ದಾರಿ.
ಹೈಕೋರ್ಟ್ ಆದೇಶ ಪಾಲಿಸಿದರೆ ಸೌಹಾರ್ದತೆ ಕಾಪಾಡಬಹುದು. ಇದನ್ನು ಪಾಲನೆ ಮಾಡುವುದಕ್ಕೆ ಮುಕ್ತವಾಗಿ ಬಿಡಬೇಕು. ಆಗ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ ಅಂತ ನನ್ನ ಅಭಿಪ್ರಾಯ ಎಂದರು. ರಾಜ್ಯಪಾಲರ ಭಾಷಣಕ್ಕೆ ಉತ್ತರ ಕೊಡುವಾಗ ಎಲ್ಲದಕ್ಕೂ ಉತ್ತರ ಕೊಡುತ್ತೇವೆ. ಬೇರೆ ಬೇರೆ ಇಲಾಖೆಯ ಎಲ್ಲ ಸಾಧನೆಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸುವುದಕ್ಕೆ ಆಗುವುದಿಲ್ಲ. ಆದರೆ, ಉತ್ತರ ಕೊಡುವ ಸಂದರ್ಭದಲ್ಲಿ ಎಲ್ಲವನ್ನೂ ನಾವು ಹೇಳುತ್ತೇವೆ ಎಂದು ತಿಳಿಸಿದರು.
ಓದಿ: ರಸ್ತೆ ಕೊಡಿ, ಕುಡಿಯಲು ನೀರು ಕೊಡಿ: ಪುತ್ತೂರು ತಾಲೂಕು ಆಡಳಿತಸೌಧದ ಎದುರು ಧರಣಿ