ETV Bharat / state

ಯಡಿಯೂರಪ್ಪರ ಹೇಳಿಕೆ ಸಲಹೆ ಅಷ್ಟೇ; ರಾಜ್ಯದ ಬಗ್ಗೆ ಮೋದಿ, ಶಾ ತೀರ್ಮಾನ ತೆಗೆದುಕೊಳ್ತಾರೆ: ಸಿಎಂ - Shikaripura election

ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸಿಎಂ ಬೊಮ್ಮಾಯಿ‌ ಹಾಗೂ ಸಚಿವ ಆರ್.ಅಶೋಕ್ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು. ಬಳಿಕ ಸಿಎಂ ಬೊಮ್ಮಾಯಿ‌ ಅವರು ಯಡಿಯೂರಪ್ಪರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

CM Bommai reacts on BS Yadiyurappa statement
ಯಡಿಯೂರಪ್ಪ ಭೇಟಿಯಾದ ಬೊಮ್ಮಾಯಿ
author img

By

Published : Jul 23, 2022, 6:43 PM IST

ಬೆಂಗಳೂರು: ಶಿಕಾರಿಪುರದಲ್ಲಿ ವಿಜಯೇಂದ್ರರ ಸ್ಪರ್ಧೆ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಅವರು ನಿನ್ನೆ ನೀಡಿದ್ದು ಸಲಹೆ ಅಷ್ಟೇ. ಕ್ಷೇತ್ರದ ಜನರು ಚುನಾವಣೆ ಬಗ್ಗೆ ಕೇಳಿದ್ದಕ್ಕೆ ಯಡಿಯೂರಪ್ಪ ಹಾಗೆ ಹೇಳಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

ಬೆಂಗಳೂರು ಕಾವೇರಿ ನಿವಾಸದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸಿಎಂ ಬೊಮ್ಮಾಯಿ‌ ಹಾಗೂ ಸಚಿವ ಆರ್.ಅಶೋಕ್ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ಚುನಾವಣೆಗೆ ನಿಲ್ಲುವಂತೆ ಕ್ಷೇತ್ರದ ಜನರು ಪದೇ ಪದೆ ಕೇಳುತ್ತಿದ್ರು, ಹಾಗಾಗಿ ಯಡಿಯೂರಪ್ಪನವರು ನಿನ್ನೆ ಆ ಹೇಳಿಕೆ ನೀಡಿದ್ದಾರೆ. ವಿಜಯೇಂದ್ರ ಬಗ್ಗೆ ಮಾತ್ರವಲ್ಲ, ಇಡೀ ರಾಜ್ಯದ ಬಗ್ಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ‌

ಯಡಿಯೂರಪ್ಪ ಎಂದರೆ ಒಂದು ದೊಡ್ಡ ಶಕ್ತಿ. ನಾಲ್ಕು ದಶಕಗಳಿಂದ ರಾಜಕೀಯದಲ್ಲಿ ಇದ್ದಾರೆ. ಯಡಿಯೂರಪ್ಪ ಹೇಳಿಕೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲ್ಲ. ಅವರು ಸಿಎಂ ಸ್ಥಾನದಿಂದ ಇಳಿದಾಗಲೇ ಇಕ್ಕಟ್ಟು ಸೃಷ್ಟಿ ಮಾಡಿರಲಿಲ್ಲ. ಈಗ ಸೃಷ್ಟಿ ಮಾಡ್ತಾರಾ?. ಯಡಿಯೂರಪ್ಪ ತಮಗೆ ಅನಿಸಿದ್ದನ್ನು ಮಾಧ್ಯಮದ ಮುಂದೆ ಹೇಳ್ತಾರೆ. ಅದು ಸಲಹೆ ಅಷ್ಟೇ ಎಂದರು.

ದಯವಿಟ್ಟು ಗೊಂದಲಕ್ಕೆ ಯಾರೂ ಒಳಗಾಗಬೇಡಿ. ಅವರು ಸಿಎಂ ಸ್ಥಾನವನ್ನೇ ಬಿಟ್ಟುಕೊಟ್ರು. ಅಂತಹ ಹಿರಿಯರು‌ ಅವರು. ವಿಜಯೇಂದ್ರರ ಬಗ್ಗೆ ಪ್ರೀತಿಯನ್ನು ತೋರಿಸಿದ್ದಾರೆ. ಅವರು ಸಲಹೆ ಕೊಟ್ಟಿದ್ದಾರೆ ಹೊರತು ಬೇರೇನೂ ಇಲ್ಲ. ಅಂತಿಮವಾಗಿ ವರಿಷ್ಠರು ತೀರ್ಮಾನ ಮಾಡ್ತಾರೆ. ಆದರೆ ಕಾಂಗ್ರೆಸ್ ಅಯೋಮಯ ಆಗಿದೆ. ಮೊದಲು ಜಾತಿವಾರು ಮತಗಳನ್ನು ಕೇಳುವುದನ್ನು ಬಿಡಲಿ ಎಂದು ಟೀಕಿಸಿದರು.

ದೊಡ್ಡ ಮೇಳ ಮಾಡೋಣ ಎಂದಿದ್ದಾರೆ: ನಾವು ಬಿಎಸ್​ವೈ ಭೇಟಿ ಮಾಡಿದೆವು. ಅವರು ನಗುನಗುತ್ತಲೇ ಮಾತನಾಡಿದರು. ದೊಡ್ಡ ದೊಡ್ಡ ರ್ಯಾಲಿ ಮಾಡೋಣ ಎಂದಿದ್ದಾರೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು. ಕಾಂಗ್ರೆಸ್ ಮುಗಿಸೋಕೆ ಜಮೀರ್​ಗೆ ಸುಪಾರಿ ಕೊಟ್ಟಿದ್ದೀರಾ ಎಂಬ ಪ್ರಶ್ನೆಗೆ, ಬಹಳಷ್ಟು ಜನಕ್ಕೆ ನಾವು ಸುಪಾರಿ ಕೊಟ್ಟಿದ್ದೇವೆ. ನೋಡ್ತಿರಿ ಯಾರ್ಯಾರು ಬರುತ್ತಾರೆಂದು. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ. ಅವರು ನಮ್ಮದನ್ನು ಏನು‌ ಹೇಳೋದು, ಅವರದನ್ನು ಮೊದಲು ಸರಿಪಡಿಸಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಅಶೋಕ್ ತಿರುಗೇಟು ನೀಡಿದರು.

ಇದನ್ನೂ ಓದಿ: ಜನ ಒತ್ತಾಯ ಮಾಡಿದ ಕಾರಣಕ್ಕೆ ನಾನು ಆ ಹೇಳಿಕೆ ನೀಡಿದ್ದೆ, ಅಂತಿಮ‌ ತೀರ್ಮಾನ ಪಕ್ಷದ್ದು: ಬಿಎಸ್ ವೈ

ನಮ್ಮದು ಕಾಂಗ್ರೆಸ್ ಪಾರ್ಟಿ ಅಲ್ಲ, ಬೇಲ್​ನಲ್ಲಿ ಇರುವ ಪಾರ್ಟಿ ಅಲ್ಲ. ಯಾರಿಗೆ ಟಿಕೇಟ್ ಕೊಡಬೇಕು, ಕೊಡಬಾರದು ಅನ್ನೋದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಕಳೆದ ಬಾರಿ ಯಾವ ರೀತಿ ಓಡಾಡಿದೆನೋ ಅದೇ ರೀತಿ ಈ ಬಾರಿಯೂ ಓಡಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ನೋ ರಿಟೈರ್ಮೆಂಟ್, ಪ್ರಧಾನಿ ಏನು ಹೇಳುತ್ತಾರೋ ಅದನ್ನು ಚಾಚೂ ತಪ್ಪದೇ ನಡೆಯುತ್ತೇನೆ ಅಂತ ಯಡಿಯೂರಪ್ಪರು ತಿಳಿಸಿದ್ದಾರೆ.

ಆದರೆ ಕಾಂಗ್ರೆಸ್ ಬೀದಿ ರಂಪ ಮಾಡುತ್ತಿದೆ. ಜಮೀರ್ ನೋಡಿದರೆ ಏನು ಬೇಕಾದರೂ ಮಾಡು, ನಾನು ಹೀಗೇ ಮಾತಾಡೋದು ಅಂತ ಹೇಳ್ತಾರೆ ಎಂದು ಟೀಕಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.