ETV Bharat / state

ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣದ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ: ಸಿಎಂ

ಸಿಸಿಟಿವಿಯಲ್ಲಿ ಚಂದ್ರಶೇಖರ್ ಗುರೂಜಿ ಕೊಲೆ ದೃಶ್ಯ ಸ್ಪಷ್ಟವಾಗಿ ದಾಖಲಾಗಿದೆ. ತನಿಖೆಯ ನಂತರ ಇವರ ಕೊಲೆಗೆ ನಿಖರ ತಿಳಿದು ಬರಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

cm-bommai-reaction-on-vastu-expert-chandrashekhar-guruji-murder
ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣದ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ: ಸಿಎಂ
author img

By

Published : Jul 5, 2022, 8:09 PM IST

ಬೆಂಗಳೂರು: ಖ್ಯಾತ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ಹೀನ ಕೃತ್ಯವಾಗಿದ್ದು, ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಲು ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಾವೇರಿ ನೀರಾವರಿ ನಿಗಮ ನಿಯಮಿತದ ಬಳಿ ಮಾಧ್ಯಮದವರೊಂದಿಗೆ ಮಾನತಾಡಿದ ಅವರು, ಚಂದ್ರಶೇಖರ್ ಗುರೂಜಿ ಅವರ ಹತ್ಯೆ ದುರದೃಷ್ಟಕರವಾಗಿದೆ. ಸಿಸಿಟಿವಿಯಲ್ಲಿ ಕೊಲೆ ದೃಶ್ಯ ಸ್ಪಷ್ಟವಾಗಿ ದಾಖಲಾಗಿದೆ. ಇದರ ಆಧಾರದ ಮೇಲೆ ಕೊಲೆಪಾತಕರನ್ನು ಬಂಧಿಸಲಾಗಿದೆ. ಕೊಲೆ ನಡೆದಿರುವ ಕಾರಣ ತನಿಖೆಯಿಂದ ತಿಳಿದು ಬರಲಿದೆ ಎಂದರು.

ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣದ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ: ಸಿಎಂ

ಪಿಎಸ್ಐ ಅಕ್ರಮ ನೇಮಕಾತಿ‌ ಪ್ರಕರಣದಲ್ಲಿ‌ ಎಡಿಜಿಪಿ‌ ಬಂಧನ ವಿಚಾರ ಸಿಎಂ‌ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ‌ ಮಾನದಂಡದಲ್ಲಿ ಹೇಳೋದಾದರೆ ಈ ಹಿಂದೆ ಸಿದ್ದರಾಮಯ್ಯ ಹತ್ತು ಸಲ ರಾಜೀನಾಮೆ ಕೊಡಬೇಕಿತ್ತು.

ಅವರು ಹಿಂದೆ ಅಧಿಕಾರದಲ್ಲಿದ್ದಾಗ ಇದೇ ಪೊಲೀಸ್ ನೇಮಕಾತಿ ವಿಚಾರದಲ್ಲಿ ಗುಲ್ಬರ್ಗಾದಲ್ಲಿ ಪ್ರಶ್ನೆಪತ್ರಿಕೆ ಲೀಕ್ ಆಗಿತ್ತು. ಪ್ರಶ್ನೆಪತ್ರಿಕೆ ಸೆಟ್ ಮಾಡಿದ್ದ ಡಿಐಜಿ ಅವರ ಮನೆಯಿಂದಲೇ ಲೀಕ್ ಆಗಿತ್ತು. ಅದು ತನಿಖೆ ಆಗಿ ಡಿಐಜಿಯನ್ನು ಆರೋಪಿ ಮಾಡಿದರು. ಮುಂದೆ ಈ ಪ್ರಕರಣ ಏನಾಯಿತು?, ಅವರು ಯಾವ ಕ್ರಮ ತಗೊಂಡರು ಪ್ರಶ್ನಿಸಿದರು.

ಅಲ್ಲದೇ, ಡಿಐಜಿಯನ್ನು ಸಸ್ಪೆಂಡ್ ಮಾಡಿದ್ರಾ?, ಅರೆಸ್ಟ್ ಮಾಡಿದ್ರಾ?, ನನ್ನ ರಾಜೀನಾಮೆ ಕೇಳಲು ಸಿದ್ದರಾಮಯ್ಯಗೆ ಯಾವ ನೈತಿಕತೆ ಇದೆ?. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇಂಥ ಇನ್ನೂ ಮೂರ್ನಾಲ್ಕು ಪ್ರಕರಣಗಳನ್ನು ಮುಚ್ಚಿ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಅವುಗಳ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಸರಳವಾಸ್ತು ಗುರೂಜಿ ಕೊಲೆ ಕೇಸ್: ರಾಮದುರ್ಗದಲ್ಲಿ ಸಿಕ್ಕಿಬಿದ್ದ ಆರೋಪಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.