ETV Bharat / state

ಗಣೇಶೋತ್ಸವ ಆಚರಣೆಗೆ ವಿನಾಯಿತಿ ಕೋರಿಕೆ: ಸಂಜೆ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಿರುವ ಸಿಎಂ - ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆ

ಸಾರ್ವಜನಿಕ ಗಣೇಶೋತ್ಸವ ಆಚರಣೆ ಕುರಿತು ಸರ್ಕಾರ ಕೆಲವು ನಿರ್ಧಾರಗಳನ್ನು ಮಾಡಿದೆ. ಅದೇ ರೀತಿ ಬಿಬಿಎಂಪಿ ತನ್ನದೇ ಆದ ನಿರ್ಧಾರವನ್ನು ಮಾಡಿದೆ. ಇದರ ಬಗ್ಗೆ ನಮ್ಮ ಸಚಿವರು, ಬಿಬಿಎಂಪಿ ಆಯುಕ್ತರು ಕುಳಿತು ಮಾತುಕತೆ ನಡೆಸಿ ಬಗೆಹರಿಸಲು ಸೂಚನೆ ಕೊಟ್ಟಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

cm-bommai
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Sep 9, 2021, 3:34 PM IST

Updated : Sep 9, 2021, 4:22 PM IST

ಬೆಂಗಳೂರು: ಗಣೇಶ ಚತುರ್ಥಿ ಆಚರಣೆ ಕುರಿತು ಸರ್ಕಾರದ ನಿರ್ಧಾರದ ಹೊರತಾಗಿ ಬಿಬಿಎಂಪಿ ಹೊಸ ಆದೇಶಗಳನ್ನು ನೀಡಿರುವ ಬಗ್ಗೆ ಸೃಷ್ಠಿಯಾಗಿರುವ ಗೊಂದಲ ಪರಿಹರಿಸಲು ಸಚಿವರು ಮತ್ತು ಪಾಲಿಕೆ ಆಯುಕ್ತರಿಗೆ ಸೂಚನೆ ಕೊಡಲಾಗಿದೆ. ಸಂಜೆ ಮತ್ತೊಮ್ಮೆ ಸಭೆ ನಡೆಸಿ ಜಿಲ್ಲೆಗಳಿಂದ ಬಂದಿರುವ ಬೇಡಿಕೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಗಣೇಶೋತ್ಸವ ಆಚರಣೆ ಕುರಿತು ಸರ್ಕಾರ ಕೆಲವು ನಿರ್ಧಾರಗಳನ್ನು ಮಾಡಿದೆ. ಅದೇ ರೀತಿ ಬಿಬಿಎಂಪಿ ತನ್ನದೇ ಆದ ನಿರ್ಧಾರವನ್ನು ಮಾಡಿದೆ. ನಾವು ಐದು ದಿನ ಅವಕಾಶ ನೀಡಿದ್ದರೆ ಬಿಬಿಎಂಪಿ ಮೂರು ದಿನ ಮಾತ್ರ ಅವಕಾಶ ನೀಡಿದೆ. ಇದರಿಂದ ಗೊಂದಲ ಸೃಷ್ಟಿಯಾಗಿದೆ. ಇದರ ಬಗ್ಗೆ ನಮ್ಮ ಸಚಿವರು ಬಿಬಿಎಂಪಿ ಆಯುಕ್ತರು ಕುಳಿತು ಮಾತುಕತೆ ನಡೆಸಿ ಬಗೆಹರಿಸಲು ಸೂಚನೆ ಕೊಟ್ಟಿದ್ದೇನೆ ಎಂದರು.

ವಾರ್ಡ್​ಗೆ ಒಂದೇ ಗಣೇಶ ಎನ್ನುವ ವಿಚಾರ ಕುರಿತು ಬಿಬಿಎಂಪಿ ಆಯುಕ್ತರು, ನಗರ ಪೊಲೀಸ್ ಆಯುಕ್ತರು, ಬೆಂಗಳೂರಿನ ಸಚಿವರು ಎಲ್ಲರೂ ಸೇರಿ ಒಂದು ತೀರ್ಮಾನ ಮಾಡಲಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದಲೂ ಹಲವಾರು ಬೇಡಿಕೆಗಳು ಬಂದಿವೆ. ನಮ್ಮ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಂಜೆಯೊಳಗೆ ಒಂದು ತೀರ್ಮಾನ ಮಾಡಲಾಗುತ್ತದೆ ಎಂದು ಗಣೇಶೋತ್ಸವಕ್ಕೆ ಮತ್ತಷ್ಟು ವಿನಾಯಿತಿ ನೀಡುವ ಬಗ್ಗೆ ಸುಳಿವು ನೀಡಿದರು.

Last Updated : Sep 9, 2021, 4:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.