ಬೆಂಗಳೂರು: ನಾಳೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಸಿಎಂ ಅವರ ಆರ್.ಟಿ.ನಗರ ನಿವಾಸಕ್ಕೆ ಆರೋಗ್ಯ ಸಿಬ್ಬಂದಿ ಆಗಮಿಸಿ ಕೋವಿಡ್ ಟೆಸ್ಟ್ ಮಾಡಿದ್ದಾರೆ. ಪ್ರಧಾನಿ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿರಬೇಕಿದೆ.
![cm bommai covid test at rt nagar residence](https://etvbharatimages.akamaized.net/etvbharat/prod-images/kn-bng-01-cmbommayi-covidtest-script-7201951_19062022111630_1906f_1655617590_569.jpg)
ಕೇಂದ್ರ ಸಚಿವ ಸೋನಾವಾಲ್ ಭೇಟಿ: ಕೇಂದ್ರದ ಬಂದರು ಮತ್ತು ಒಳನಾಡು ಹಾಗೂ ಆಯುಶ್ ಇಲಾಖೆ ಸಚಿವ ಸರ್ಬಾನಂದ ಸೋನಾವಾಲ್ ಆರ್.ಟಿ.ನಗರದ ಸಿಎಂ ನಿವಾಸದಲ್ಲಿ ಬೊಮ್ಮಾಯಿ ಭೇಟಿ ಮಾಡಿದರು. ಬಳಿಕ ಮಾತನಾಡುತ್ತಾ, ನಾನಿಂದು ಕರ್ನಾಟಕದ ಜನಪ್ರಿಯ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದೆ. ನಾಡಿದ್ದು ವಿಶ್ವ ಯೋಗ ದಿನ ಇದೆ. ಯೋಗ ದಿನದಲ್ಲಿ ನಾವೆಲ್ಲ ಭಾಗವಹಿಸುತ್ತೇವೆ ಎಂದರು.
ಇದನ್ನೂ ಓದಿ: ನಾಳೆ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ: ಬೆಂಗಳೂರು ಪೊಲೀಸರಿಂದ ಬಿಗಿ ಭದ್ರತೆ
ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆಗಳ ವಿಚಾರವಾಗಿ ಪ್ರತಿಕ್ರಿಯಿಸಿ, ಅಗ್ನಿಪಥ್ ಯುವ ಸಮೂಹಕ್ಕಾಗಿ ತಂದಿರುವ ಯೋಜನೆ. ಈ ಬಗ್ಗೆ ಯಾರೂ ಚಿಂತಿಸುವ ಅಗತ್ಯವಿಲ್ಲ. ಸೇನಾ ಸೇವೆಯ ಬಳಿಕ ಬೇರೆ ಬೇರೆ ವಲಯಗಳಲ್ಲಿ ಅವಕಾಶ ಸಿಗಲಿದೆ. ಅಗ್ನಿಪಥ್ ಮೂಲಕ ಯುವ ಶಕ್ತಿಗೆ ಬಲ ಬರಲಿದೆ. ಎಲ್ಲ ಯುವ ಸಮೂಹ ಈ ಯೋಜನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.