ಬೆಂಗಳೂರು: ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿ ಮೌಲ್ಯ 1 ರಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗುವುದು. ಅಲ್ಲದೇ, ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 66 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮುಂದಿನ ಬಾರಿ ಅರ್ಜಿ ಸ್ವೀಕರಿಸಿ ಪ್ರಶಸ್ತಿ ಕೊಡುವುದಿಲ್ಲ. ಯಾರೂ ಬಯೋಡೇಟಾ ತಯಾರು ಮಾಡೋದು ಬೇಡ. ಪೇಪರ್ ಕಟಿಂಗ್ ಒಟ್ಟು ಮಾಡುವ, ದಪ್ಪ ದಪ್ಪ ಬುಕ್ ಲೆಟ್ಗಳನ್ನು ಮಾಡುವ ಅಗತ್ಯ ಇಲ್ಲ ಎಂದರು.
ನಾವು ಅರ್ಜಿಯನ್ನು ಪಡೆದುಕೊಳ್ಳುವುದಿಲ್ಲ. ಸರ್ಕಾರ ಹಾಗೂ ಆಯ್ಕೆ ಸಮಿತಿ ಎರಡು ತಿಂಗಳು ಮುಂಚೆಯೇ ಶೋಧನೆ ಮಾಡಿ ಆಯ್ಕೆ ಮಾಡುತ್ತದೆ. ಅಲ್ಲದೇ, ಮುಂದಿನ ವರ್ಷದಿಂದ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಸಣ್ಣ ವಯಸ್ಸಿನವರಲ್ಲಿ ವಿಶೇಷ ಪ್ರತಿಭೆ ಇದ್ದರೂ ರಾಜ್ಯೋತ್ಸವ ಪ್ರಶಸ್ತಿ ಕೊಡಲಾಗುವುದು. ಮುಂದಿನ ವರ್ಷದಿಂದ ಅರವತ್ತು ವರ್ಷ ವಯಸ್ಸು ಆಗ್ಲೇಬೇಕು ಎಂಬ ಮಿತಿಯಿಲ್ಲ. ಪ್ರತಿಭೆ ಗುರುತಿಸಿ ಗೌರವಿಸಲಾಗುವುದು. ಈ ವರ್ಷ ಹಾಸ್ಯ ಕಲಾವಿದ ಪ್ರಾಣೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯೋತ್ಸವ ಪ್ರಶಸ್ತಿಯು ಹಾರ, ಶಾಲು, ಮೈಸೂರು ಪೇಟ, ಹಣ್ಣಿನ ಬುಟ್ಟಿ, ಐದು ಗ್ರಾಂ ಚಿನ್ನದ ಪದಕ ಹಾಗೂ ಪ್ರಶಸ್ತಿ ಮೊತ್ತ ರೂ. 1 ಲಕ್ಷವನ್ನು ಒಳಗೊಂಡಿದೆ ಎಂದು ತಿಳಿಸಿದರು.
ಇಂದಿನ ಸಾಧಕರು, ಪ್ರಶಸ್ತಿ ಪುರಸ್ಕೃತರೆಲ್ಲರೂ ಸಮಾಜಮುಖಿಯಾಗಿ, ಪರೋಪಕಾರಿಯಾಗಿ, ಸಾಹಿತ್ಯ, ಕಲಾ, ಸಂಸ್ಕೃತಿ, ನೃತ್ಯ, ಸಂಗೀತ ಕ್ಷೇತ್ರಗಳನ್ನು ಶ್ರೀಮಂತಗೊಳಿಸಿದವರು. ಎಲ್ಲಾ ರತ್ನಗಳನ್ನು ಆಯ್ಕೆ ಮಾಡಿ, ಒಗ್ಗೂಡಿಸಿ ನಮ್ಮ ಮುಂದೆ ನಿಲ್ಲಿಸಿದ್ದಾರೆ ಎಂದರು.
ಸಮಾಜದಿಂದ ಪಡೆದದ್ದನ್ನು ಪರೋಪಕಾರಿಯಾಗಿ ವಾಪಸ್ ಸಮಾಜಕ್ಕೆ ಕೊಡುವ ಕೆಲಸ ಆಗಬೇಕು. ವಿಜ್ಞಾನ, ಜ್ಞಾನದಲ್ಲಿ ಮುಂದುವರಿದಷ್ಟು ಮಾನವೀಯತೆಯಲ್ಲೂ ಮುಂದುವರಿಯುವ ಕೆಲಸ ಆಗಬೇಕು. ನಾವು ಭಾವನಾತ್ಮಕವಾಗಿ ಒಂದಾಗಿದ್ದೇವೆ. ಅದೇ ರೀತಿ ಆರ್ಥಿಕ ಶಿಕ್ಷಣ ಔದ್ಯೋಗಿಕವಾಗಿ ಮುಂದಾಗಬೇಕು. ಕನ್ನಡದ ಪರ್ವ ಆರಂಭವಾಗಬೇಕು. ದೇಶದಲ್ಲಿಯೇ ಎಲ್ಲ ರಂಗದಲ್ಲಿ ಮೊದಲ ಸ್ಥಾನ ಕನ್ನಡಕ್ಕಿರಬೇಕು. ಮೊದಲ ಸ್ಥಾನ ಕನ್ನಡಿಗರಿಗೆ ಇರಬೇಕು. ಕನ್ನಡ ಸಾಹಿತ್ಯಕ್ಕೆ ದೊರೆತ ಎಂಟು ಜ್ಞಾನಪೀಠ ಪ್ರಶಸ್ತಿ ರೀತಿಯೇ ಎಲ್ಲಾ ರಂಗದಲ್ಲೂ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಸಚಿವ ವಿ. ಸುನೀಲ್ ಕುಮಾರ್ ಮಾತನಾಡಿ, ರಾಜ್ಯೋತ್ಸವಕ್ಕಿಂತ ಒಂದು ವಾರ ಪೂರ್ವಭಾಗಿಯಾಗಿ ಕಾರ್ಯಕ್ರಮ, ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯಪಾಲರೇ ಈ ಕಾರ್ಯಕ್ರಮ ಉದ್ಘಾಟಿಸಿದ್ದರು. ಲಕ್ಷ ಕಂಠಗಳಲ್ಲಿ 20 ಲಕ್ಷದ 60 ಸಾವಿರ ಜನ ಕನ್ನಡ ಗೀತೆ ಗಾಯನ ಮಾಡಿ ಯಶಸ್ವಿಯಾಗಿ ನಡೆಯಿತು. 6,500 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಆದರೂ ಸಲಹಾ ಸಮಿತಿ ಅತ್ಯುತ್ತಮ 66 ಜನರನ್ನು ಆಯ್ಕೆಯನ್ನು ಮಾಡಿದೆ.
ಹಿರಿಯ ಪೌರಕಾರ್ಮಿಕೆ ಶರಣಮ್ಮ ಪೀರಪ್ಪ ಗೌರಮ್ಮ ಎಂಬ ಕ್ಯಾನ್ಸರ್ ಪೀಡಿದ ಮಹಿಳೆಯನ್ನು ಆಯ್ಕೆ ಮಾಡಲಾಗಿತ್ತು. ಅವರು ತನಗಿಂತ ಹೆಚ್ಚು ಕೆಲಸ ಮಾಡಿದ ಮಹಿಳೆಯನ್ನು ಸೂಚಿಸಿದ್ದರು. ನಂತರ ರತ್ನಮ್ಮ ಶಿವಪ್ಪ ಬಬಲಾದ ಎಂಬುವರನ್ನು ಆಯ್ಕೆ ಮಾಡಲಾಗಿತ್ತು. ಇದು ಪ್ರಶಸ್ತಿಯ ಗೌರವವನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.
2021 ರ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಸಾಹಿತ್ಯ
ಮಹಾದೇವ ಶಂಕನಪುರ | ಚಾಮರಾಜ ನಗರ |
ಪ್ರೊ. ಡಿ.ಟಿ. ರಂಗಸ್ವಾಮಿ | ಚಿತ್ರದುರ್ಗ |
ಜಯಲಕ್ಷ್ಮೀ ಮಂಗಳಮೂರ್ತಿ | ರಾಯಚೂರು |
ಅಜ್ಜಂಪುರ ಮಂಜುನಾಥ್ | ಚಿಕ್ಕಮಗಳೂರು |
ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿ | ವಿಜಯಪುರ |
ಸಿದ್ದಪ್ಪ ಬಿದರಿ | ಬಾಗಲಕೋಟೆ |
ರಂಗಭೂಮಿ
ಫಕೀರಪ್ಪ ರಾಮಪ್ಪ ಕೊಡಾಯಿ | ಹಾವೇರಿ |
ಪ್ರಕಾಶ್ ಬೆಳವಾಡಿ | ಚಿಕ್ಕಮಗಳೂರು |
ರಮೇಶ್ ಗೌಡ ಪಾಟೀಲ್ | ಬಳ್ಳಾರಿ |
ಮಲ್ಲೇಶಯ್ಯ. ಎನ್ | ರಾಮನಗರ |
ಸಾವಿತ್ರಿ ಗೌಡರ್ | ಗದಗ |
ಜಾನಪದ
ಆರ್.ಬಿ ನಾಯಕ | ವಿಜಯಪುರ |
ಗೌರಮ್ಮ ಹುಚ್ಚಪ್ಪ ಮಾಸ್ತರ್ | ಶಿವಮೊಗ್ಗ |
ದುರ್ಗಪ್ಪ ಚೆನ್ನದಾಸರ | ಬಳ್ಳಾರಿ |
ಬನ್ನಂಜೆ ಬಾಬು ಅಮೀನ್ | ಉಡುಪಿ |
ಮಲ್ಲಿಕಾರ್ಜುನ ರಾಚಪ್ಪ ಮುದಕವಿ | ಬಾಗಲಕೋಟೆ |
ವೆಂಕಪ್ಪ ಗೋವಿಂದಪ್ಪ ಭಜಂತ್ರಿ | ಧಾರವಾಡ |
ಮಹಾರುದ್ರಪ್ಪ ವೀರಪ್ಪ ಇಟಗಿ | ಹಾವೇರಿ |
ಸಂಗೀತ
ತ್ಯಾಗರಾಜು.ಸಿ (ನಾದಸ್ವರ) | ಕೋಲಾರ |
ಹೆರಾಲ್ಡ್ ಸಿರಿಲ್ ಡಿಸೋಜಾ | ದ.ಕನ್ನಡ |
ಚಿತ್ರಕಲೆ
ಡಾ. ಜಿ. ಜ್ಞಾನಾನಂದ | ಚಿಕ್ಕಬಳ್ಳಾಪುರ |
ವೆಂಕಣ್ಣ ಚಿತ್ರಗಾರ | ಕೊಪ್ಪಳ |
ಸಮಾಜಸೇವೆ
ಸೂಲಗಿತ್ತಿ ಯಮೂನವ್ವ (ಸಾಲಮಂಟಪಿ) | ಬಾಗಲಕೋಟೆ |
ಮದಲಿ ಮಾದಯ್ಯ | ಮೈಸೂರು |
ಮುನಿಯಪ್ಪ, ದೊಮ್ಮಲೂರು | ಬೆಂಗಳೂರು ನಗರ |
ಬಿ.ಎಲ್. ಪಾಟೀಲ್, ಅಥಣಿ | ಬೆಳಗಾವಿ |
ಡಾ. ಜೆ. ಎನ್ ರಾಮಕೃಷ್ಣೇಗೌಡ | ಮಂಡ್ಯ |
ವೈದ್ಯಕೀಯ
ಡಾ. ಸುಲ್ತಾನ್. ಬಿ ಜಗಳೂರು | ದಾವಣಗೆರೆ |
ಡಾ. ವ್ಯಾಸ ದೇಶಪಾಂಡೆ(ವೇದವ್ಯಾಸ) | ಧಾರವಾಡ |
ಡಾ. ಎ. ಆರ್ ಪ್ರದೀಪ್ (ದಂತ ವೈದ್ಯಕೀಯ) | ಬೆಂಗಳೂರು ನಗರ |
ಡಾ. ಸುರೇಶ್ ರಾವ್ | ದ. ಕನ್ನಡ |
ಡಾ. ಸುದರ್ಶನ್ | ಬೆಂಗಳೂರು |
ಡಾ. ಶಿವನಗೌಡ ರುದ್ರಗೌಡ ರಾಮನಗೌಡರ್ | ಧಾರವಾಡ |
ಕ್ರೀಡೆ
ರೋಹನ ಬೊಪ್ಪಣ್ಣ | ಕೊಡಗು |
ಕೆ. ಗೋಪಿನಾಥ್ (ವಿಶೇಷ ಚೇತನ) | ಬೆಂಗಳೂರು ನಗರ |
ರೋಹಿತ್ ಕುಮಾರ್ ಕಟೀಲ್ | ಉಡುಪಿ |
ಎ. ನಾಗರಾಜ್ (ಕಬ್ಬಡಿ) | ಬೆಂಗಳೂರು ನಗರ |
ಸಿನಿಮಾ
ದೇವರಾಜ್ | ಬೆಂಗಳೂರು ನಗರ |
ಶಿಕ್ಷಣ
ಸ್ವಾಮಿ ಲಿಂಗಪ್ಪ | ಮೈಸೂರು |
ಶ್ರೀಧರ್ ಚಕ್ರವರ್ತಿ | ಧಾರವಾಡ |
ಪ್ರೊ. ಪಿ.ವಿ ಕೃಷ್ಣಭಟ್ | ಶಿವಮೊಗ್ಗ |
ಸಂಕೀರ್ಣ
ಡಾ. ಬಿ. ಅಂಬಣ್ಣ | ವಿಜಯನಗರ |
ಕ್ಯಾಪ್ಟನ್ ರಾಜಾರಾವ್ | ಬಳ್ಳಾರಿ |
ಗಂಗಾವತಿ ಪ್ರಾಣೇಶ್ | ಕೊಪ್ಪಳ |
ವಿಜ್ಞಾನ-ತಂತ್ರಜ್ಞಾನ
ಡಾ. ಹೆಚ್. ಎಸ್ ಸಾವಿತ್ರಿ | ಬೆಂಗಳೂರು ನಗರ |
ಪ್ರೊ. ಜಿ.ಯು ಕುಲ್ಕರ್ಣಿ | ಬೆಂಗಳೂರು |
ಕೃಷಿ
ಡಾ. ಸಿ. ನಾಗರಾಜ್ | ಬೆಂಗಳೂರು ಗ್ರಾಮಾಂತರ |
ಗುರಲಿಂಗಪ್ಪ ಮೇಲ್ದೊಡ್ಡಿ | ಬೀದರ್ |
ಶಂಕರಪ್ಪ ಅಮ್ಮನಘಟ್ಟ | ತುಮಕೂರು |
ಪರಿಸರ
ಮಹಾದೇವ ವೇಳಿಪ | ಉ.ಕನ್ನಡ |
ಬೈಕಂಪಾಡಿ ರಾಮಚಂದ್ರ | ದ.ಕನ್ನಡ |
ಪತ್ರಿಕೋದ್ಯಮ
ಪಟ್ನಂ ಅನಂತ ಪದ್ಮನಾಭ | ಮೈಸೂರು |
ಯು. ಬಿ ರಾಜಲಕ್ಷ್ಮಿ | ಉಡುಪಿ |
ನ್ಯಾಯಾಂಗ
ಸಿ.ವಿ ಕೇಶವ ಮೂರ್ತಿ | ಮೈಸೂರು |
ಆಡಳಿತ
ಹೆಚ್. ಆರ್ ಕಸ್ತೂರಿ ರಂಗನ್ | ಹಾಸನ |
ಸೈನಿಕ
ನವೀನ್ ನಾಗಪ್ಪ | ಹಾವೇರಿ |
ಯಕ್ಷಗಾನ
ಗೋಪಾಲಾಚಾರ್ಯ (ಗೋಪಾಲ ಆಚಾರ್ಯ) | ಶಿವಮೊಗ್ಗ |
ಹೊರನಾಡು ಕನ್ನಡಿಗ
ಡಾ. ಸುನಿತಾ ಶೆಟ್ಟಿ – ಮುಂಬೈ | ಹೊರನಾಡು |
ಚಂದ್ರಶೇರ್ ಪಾಲ್ತಾಡಿ – ಮುಂಬೈ | ಹೊರನಾಡು |
ಡಾ. ಸಿದ್ದರಾಮೇಶ್ವರ ಕಂಟಿಕರ್ | ಹೊರನಾಡು |
ಪ್ರವೀಣ್ ಶೆಟ್ಟಿ – ದುಬೈ | ಹೊರನಾಡು |
ಪೌರ ಕಾರ್ಮಿಕ
ರತ್ನಮ್ಮ ಶಿವಪ್ಪಾ ಬಬಲಾದ(ರತ್ನಮ್ಮ) | ಯಾದಗಿರಿ |
ಹೈದರಾಬಾದ್-ಕರ್ನಾಟಕ ಏಕೀಕರಣ ಹೋರಾಟಗಾರರು
ಮಹದೇವಪ್ಪ ಕಡೆಚೂರು | ಕಲಬುರಗಿ |
ಯೋಗ
ಭ. ಮ ಶ್ರೀಕಂಠ | ಶಿವಮೊಗ್ಗ |
ಡಾ. ರಾಘವೇಂದ್ರ ಶೆಣೈ | ಬೆಂಗಳೂರು |
ಉದ್ಯಮ
ಶ್ಯಾಮರಾಜು | ಬೆಂಗಳೂರು |
ಇದಲ್ಲದೆಯೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನಲೆ ಈ ಒಂದು ವರ್ಷ ಹತ್ತು ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗಿದೆ. ಈ ಸಂಸ್ಥೆಗಳು ಹೀಗಿವೆ.
ವೀರೇಶ್ವರ ಪುಣ್ಯಾಶ್ರಮ ಅಂಧ ಮಕ್ಕಳ ಶಾಲೆ | ಗದಗ | ಸಂಘ ಸಂಸ್ಥೆ |
ಕರ್ನಾಟಕ ಹಿಮೋ ಫೀಲಿಯಾ ಸೊಸೈಟಿ | ದಾವಣಗೆರೆ | ಸಂಘ ಸಂಸ್ಥೆ |
ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ | ಕಲಬುರಗಿ | ಸಂಘ ಸಂಸ್ಥೆ |
ರಾಮಕೃಷ್ಣಾಶ್ರಮ, ಮಂಗಳೂರು | ದ.ಕನ್ನಡ | ಸಂಘ ಸಂಸ್ಥೆ |
ಆಲ್ ಇಂಡಿಯಾ ಜೈನ್ ಯೂತ್ ಫೆಡರೇಷನ್ | ಹುಬ್ಬಳಿ | ಸಂಘ ಸಂಸ್ಥೆ |
ಅನುಗ್ರಹ ಕಣ್ಣಿನ ಆಸ್ಪತ್ರೆ | ವಿಜಯಪುರ | ಸಂಘ ಸಂಸ್ಥೆ |
ಉತ್ಸವ ರಾಕ್ ಗಾರ್ಡ್ | ಹಾವೇರಿ | ಸಂಘ ಸಂಸ್ಥೆ |
ಅದಮ್ಯ ಚೇತನ | ಬೆಂಗಳೂರು | ಸಂಘ ಸಂಸ್ಥೆ |
ಸ್ಟೆಪ್ ಒನ್ | ಬೆಂಗಳೂರು | ಸಂಘ ಸಂಸ್ಥೆ |
ಓದಿ: ಉರಗ ತಜ್ಞೆ, ಸೂಲಗಿತ್ತಿ ಸುಲ್ತಾನ್ ಬಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ