ETV Bharat / state

ಬಜೆಟ್: ರಾಜ್ಯದ ನಿರೀಕ್ಷೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ: ಸಿಎಂ ಬೊಮ್ಮಾಯಿ

ರಾಜ್ಯದ ಎಲ್ಲಾ ನಿರೀಕ್ಷೆಗಳಿಗೂ ಬಜೆಟ್ ಮೂಲಕ ಕೇಂದ್ರ ಸರ್ಕಾರ ಸ್ಪಂದಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Feb 2, 2023, 3:57 PM IST

ಕೇಂದ್ರ ಬಜೆಟ್ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

ಬೆಂಗಳೂರು: "ಸಮತೋಲಿತ, ಅತ್ಯಂತ ಪ್ರಗತಿಪರ, ಸರ್ವ ಸ್ಪರ್ಶಿ, ಸರ್ವ ವ್ಯಾಪ್ತಿ ಬಜೆಟ್ ಅನ್ನು ಕೇಂದ್ರ ಸರ್ಕಾರ ಮಂಡಿಸಿದೆ. ರಾಜ್ಯದ ಎಲ್ಲಾ ನಿರೀಕ್ಷೆಗಳಿಗೂ ಸ್ಪಂದನೆ ದೊರೆತಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ನೀರಾವರಿ ಇಲಾಖೆಗೆ ಅನುದಾನ ಬರಲಿದೆ" ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ‌

"ಭಾರತದ ಆರ್ಥಿಕ ಸ್ಥಿತಿ ವಿಶ್ವದ ಇತರ ಪ್ರಗತಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಮುಂದುವರೆಯುತ್ತಿದೆ. ಬಹಳ ದೇಶಗಳಲ್ಲಿ ಆರ್ಥಿಕ‌ ಸಂಕಷ್ಟವಿದೆ. ನಮ್ಮ ದೇಶದ ಆರ್ಥಿಕತೆ ಗಟ್ಟಿ ಅಡಿಪಾಯದ ಮೇಲಿದೆ. ಪ್ರಧಾನಿಯವರು‌ ಮೂಲಭೂತ ಸುಧಾರಣೆ ತಂದಿದ್ದಾರೆ. ಹಾಗಾಗಿ, ನಮ್ಮ‌ ಜಿಡಿಪಿ ಆರೋಗ್ಯಪೂರ್ಣವಾಗಿದೆ. ಬಜೆಟ್​ನ ಪ್ರಮುಖ ಅಂಶ, ದೇಶದ ಆರ್ಥಿಕ ವೃದ್ಧಿಗೆ ಇನ್ನಷ್ಟು ಬಲ ನೀಡುತ್ತದೆ" ಎಂದು ವಿವರಿಸಿದರು.

ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಒತ್ತು: "ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಮಹತ್ವ ಕೊಡಲಾಗಿದೆ. ಗ್ರಾಮಗಳಲ್ಲಿ ಮನೆ ಕಟ್ಟಲು ಅನುದಾನ ಹೆಚ್ಚಿಸಲಾಗಿದೆ. ಕುಡಿಯುವ ನೀರು ಕೊಡುವ ಗುರಿಗೆ ಪೂರಕವಾಗಿ ಅನುದಾನ ಹೆಚ್ಚಿಗೆ ಮಾಡಿದ್ದಾರೆ. ಸಣ್ಣ ಕೈಗಾರಿಕೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಲಾಗಿದೆ. ಮಹಿಳೆಯರ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪೂರಕ ಬಜೆಟ್ ಇದು. ಉದ್ಯೋಗ ಸೃಷ್ಟಿಗೆ ಕ್ರಮ ವಹಿಸಿದ್ದಾರೆ. ಯುವಕರ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕೃಷಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಸಹಾಯವಾಗಲಿದೆ" ಎಂದರು.

"ಭದ್ರಾ ಮೇಲ್ದಂಡೆಗೆ 5,300 ಕೋಟಿ ರೂ‌. ನೀಡಲಾಗಿದೆ. ನಿಜಲಿಂಗಪ್ಪ ಕಾಲದಲ್ಲಿ ಭದ್ರಾ ಮೇಲ್ದಂಡೆ ಆಗಬೇಕು ಎಂಬುದಿತ್ತು. ಆಗಿನಿಂದ 40 ವರ್ಷ ಕಳೆದರೂ ಯಾವ ಸರ್ಕಾರವೂ ಏನೂ ಮಾಡಿಲ್ಲ. ನಾವು ಬಂದ‌ ಮೇಲೆ ಯೋಜನೆ ಬಗ್ಗೆ ಕ್ರಮ ಕೈಗೊಂಡಿದ್ದೇವೆ. ರಾಷ್ಟ್ರೀಯ ಮಾನ್ಯತೆ ಸಂಬಂಧ ಕೇಂದ್ರದ ಇಲಾಖೆಗಳಿಂದ ಎಲ್ಲವೂ ಒಪ್ಪಿಗೆ ಸಿಕ್ಕಿದೆ. ಈಗ 5,300 ಕೋಟಿ ಘೋಷಿಸಿರುವುದು ರಾಷ್ಟ್ರೀಯ ಮಾನ್ಯತೆ ಸಿಕ್ಕಿದ ಹಾಗೆ" ಎಂದರು.

ಯೋಜನೆ ಪೂರ್ಣಗೊಳಿಸಲು ಕ್ರಮ: "ಯುಪಿಎ ಸರ್ಕಾರ ಇದ್ದಾಗ ಎಕ್ಸಲರೇಟರ್ ಇರಿಗೇಷನ್ ಬೆನಿಫಿಟ್ ಪ್ರೋಗ್ರಾಂ (AIBP)ಯಡಿ ರಾಜ್ಯದ ಪಾಲು ಖರ್ಚು ಮಾಡಿದರೆ ಮಾತ್ರ ಕೇಂದ್ರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡುವ ಷರತ್ತು ಹಾಕಿತ್ತು. ಹಾಗಾಗಿ ಅನುದಾನವೇ ಬಿಡುಗಡೆ ಮಾಡುತ್ತಿರಲಿಲ್ಲ. ಎನ್​ಡಿಎ ಸರ್ಕಾರ ಬಂದ ಬಳಿಕ ಆ ಷರತ್ತನ್ನು ತೆಗೆದು ಹಾಕಲಾಗಿದೆ. ಯಾವುದೇ ಕರಾರಿಲ್ಲದೆ 5,300 ಕೋಟಿ ರೂ‌. ಕೊಟ್ಟಿದ್ದರೆ ಅದು ಮೋದಿ ಸರ್ಕಾರದ ಅವಧಿಯಲ್ಲಿ. ಯೋಜನೆ ಪೂರ್ಣಗೊಳಿಸಲು ಎಲ್ಲಾ ಕ್ರಮ ವಹಿಸುತ್ತೇವೆ" ಎಂದು ಸಿಎಂ ಹೇಳಿದರು.

"ಈ ಘೋಷಣೆಯನ್ನು ನಾವು ಸ್ವಾಗತ ಮಾಡಬೇಕು. ಆದರೆ ಅದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ. ಪ್ರತಿಪಕ್ಷಗಳಿಗೆ ಅನುದಾನ ಘೋಷಣೆಯಿಂದ ನಿರಾಶೆ ಆಗಿದೆ. ಛೇ, 5300 ಕೋಟಿ ರೂ. ಬಂದಿದೆ ಎಂದು ನಿರಾಶೆ ಆಗಿದ್ದಾರೆ. ಅದಕ್ಕಾಗಿ ಪ್ರತಿಪಕ್ಷ ವಿರೋಧ ಮಾಡುತ್ತಿದೆ. ಮೂರು ದಶಕಗಳಿಂದ ಪ್ರತಿಪಕ್ಷಗಳ ಟೀಕೆ ಕೇಳಿ ಕೇಳಿ ಸಾಕಾಗಿದೆ" ಎಂದರು.

"ಎಲ್ಲಾ ಇಲಾಖೆಗಳ ಅನುದಾನದಲ್ಲಿ ಕರ್ನಾಟಕಕ್ಕೆ ಪಾಲು ಬರಲಿದೆ. ಆರ್ಥಿಕತೆಗೆ ಭದ್ರ ಬುನಾದಿ ಹಾಕುವ ಎಲ್ಲಾ ಅಂಶಗಳು ಬಜೆಟ್‌ನಲ್ಲಿವೆ. ಆರ್ಥಿಕ‌ ಸುಧಾರಣೆಗೆ ಕೇಂದ್ರ ಬಜೆಟ್​ನಲ್ಲಿ ಹೆಚ್ಚಿನ ಕೊಡುಗೆ ನೀಡಿದ್ದಾರೆ. ನರೇಗಾಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಬಂದಿದ್ದು, ಕಡಿಮೆ ಆಗಿಲ್ಲ. ಗ್ರಾಮೀಣ ಪ್ರದೇಶದ ಆಸ್ತಿ ಸೃಜನೆಗೆ ಯಾವುದೇ ಅಡ್ಡಿ ಆಗಲ್ಲ" ಎಂದು ಸಿಎಂ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ.. ಇಂದು ಕೈ ನಾಯಕರ ಮಹತ್ವದ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.