ETV Bharat / state

ಎಲ್ಲರನ್ನು ವಿಶ್ವಾಸಕ್ಕೆ ಪಡೆದು, ಸವಾಲುಗಳನ್ನು ಮೆಟ್ಟಿಲಾಗಿ ಮಾಡಿಕೊಳ್ಳುತ್ತೇನೆ: ಬೊಮ್ಮಾಯಿ

ಎಲ್ಲರನ್ನೂ ಒಗ್ಗೂಡಿಸಿ ವಿಶ್ವಾಸಕ್ಕೆ ಪಡೆದು, ಒಗ್ಗಟ್ಟಾಗಿ ಕೆಲ ಮಾಡಿ ಸವಾಲುಗಳನ್ನು ಎದುರಿಸುತ್ತೇವೆ ಎಂದು ನೂತನ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

cm basavaraja bommai
ನೂತನ ಸಿಎಂ ಬಸವರಾಜ ಬೊಮ್ಮಾಯಿ
author img

By

Published : Jul 28, 2021, 12:25 PM IST

ಬೆಂಗಳೂರು: ಎಲ್ಲರನ್ನೂ ಒಗ್ಗೂಡಿಸಿ ವಿಶ್ವಾಸಕ್ಕೆ ಪಡೆದು ಮುಖ್ಯಮಂತ್ರಿ ಅನ್ನುವುದಕ್ಕಿಂತ ಎಲ್ಲರಲ್ಲಿ ಒಬ್ಬನು ಎಂದು ಕೆಲಸ ಮಾಡುತ್ತೇನೆ. ಟೀಂ ವರ್ಕ್ ಆಗಿ ಕೆಲಸ ಮಾಡಿ ರಾಜಕೀಯ, ಆರ್ಥಿಕ, ಸಾಮಾಜಿಕ‌ ಸವಾಲುಗಳನ್ನು ಒಟ್ಟಾಗಿ ಎದುರಿಸುತ್ತೇ‌ವೆ ಎಂದು ನೂತನ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ನೂತನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ರಾಜಭವನದಲ್ಲಿ ಮಾತನಾಡಿದ ಅವರು,‌ ರಾಜ್ಯದ ಜನತೆಗೆ ಕೃತಜ್ಞನಾಗಿದ್ದೇನೆ. ನಮ್ಮ ಪಕ್ಷ ವಿಶ್ವಾಸವಿಟ್ಟು ಬಹುಮತ ಕೊಟ್ಟಿದ್ದಾರೆ. ಜನರು ಪ್ರಧಾನಿ ಮೋದಿ ಮೇಲೂ ಅಪಾರ ವಿಶ್ವಾಸ ಇರಿಸಿದ್ದಾರೆ. ವರಿಷ್ಠರ ಆಶೀರ್ವಾದ, ಯಡಿಯೂರಪ್ಪ ನೇತೃತ್ವದ ಮಾರ್ಗದರ್ಶನದಲ್ಲಿ ಕೆಲಸ ಮಾಡಲಿದ್ದೇನೆ ಎಂದು ತಿಳಿಸಿದರು.

ರಾಜ್ಯದ ಜನತೆ ಕೊರೊನಾದಂತಹ ಸವಾಲು ಎದುರಿಸಿದ್ದಾರೆ. ಎರಡು ಬಾರಿ ಪ್ರವಾಹ ಎದುರಿಸಿದ್ದಾರೆ. ಸಂಕಷ್ಟದಲ್ಲಿರುವ ಜನರ ನೆರವಿಗೆ ನಮ್ಮ ಸರ್ಕಾರ ನಿಲ್ಲಲಿದೆ. ದಕ್ಷ, ಪ್ರಾಮಾಣಿಕ, ಜನಪರ ಆಡಳಿತವನ್ನು ನಮ್ಮ ಸರ್ಕಾರ ನೀಡಲಿದೆ. ನಮ್ಮ ಎಲ್ಲ ನಿರ್ಣಯ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವವರೆಗೂ ತಲುಪಲಿದೆ. ಬಡವರು, ರೈತರು, ದೀನ ದಲಿತ ಹಿಂದುಳಿದ ವರ್ಗದ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಿ ಪ್ರಾದೇಶಿಕ‌ ಅಸಮತೋಲನ ತೊಲಗಿಸಲು ಕೆಲಸ ಮಾಡುವುದಾಗಿ ಆಶ್ವಾಸನೆ ನೀಡಿದರು.

ಇದನ್ನೂ ಓದಿ: ನೂತನ ಸಂಪುಟದಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು: ಶಾಸಕ ತಿಪ್ಪಾರೆಡ್ಡಿ

ಇಂದಿನ‌ ಹಣಕಾಸು ಇತಿಮಿತಿ, ಪರಿಸ್ಥಿತಿ ಅದರ ಎಲ್ಲ ಹಿನ್ನೆಲೆಯಲ್ಲಿ ಚರ್ಚೆ ಮಾಡಿ ಕೆಲ‌ ನಿರ್ಧಾರ ತೆಗೆದುಕೊಳ್ಳುತ್ತೇನೆ. ನಮಗೆ ಸವಾಲುಗಳು ಇವೆ. ಆರ್ಥಿಕ, ಸಾಮಾಜಿಕ‌ ಸವಾಲುಗಳಿವೆ. ಸಹೋದ್ಯೋಗಿಗಳು, ಪಕ್ಷದ‌ ಹಿರಿಯರು, ಶಾಸಕರೊಂದಿಗೆ ಸೇರಿ, ಈ ಸವಾಲುಗಳನ್ನು ಮೆಟ್ಟಿಲಾಗಿ ಮಾಡಿಕೊಂಡು ಅವುಗಳನ್ನು ಎದುರಿಸಿ ಸಫಲನಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.