ETV Bharat / state

ದಸರಾ ಮಹೋತ್ಸವ : ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ಆರಂಭ

ಸಾರ್ವಜನಿಕ ಗಣೇಶೋತ್ಸವ ಹಾಗೂ ದಸರಾ ಆಚರಣೆ ಕುರಿತಂತೆ ತಾಂತ್ರಿಕ ಸಲಹಾ ಸಮಿತಿಯ ವರದಿ ಈಗಾಗಲೇ ಸಲ್ಲಿಕೆಯಾಗಿದೆ. ವರದಿಯಲ್ಲಿ ಕೆಲವು ಶಿಫಾರಸು ನೀಡಲಾಗಿದೆ. ಹಲವು ರೀತಿಯ ಸಲಹೆಗಳನ್ನು ಸಮಿತಿ ಸದಸ್ಯರು ನೀಡಿದ್ದಾರೆ..

cm-basavaraja-bommai-conduct-meeting-for-mysore-dasara-celebration
ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ
author img

By

Published : Sep 3, 2021, 4:51 PM IST

ಬೆಂಗಳೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2021 ಆಚರಣೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯ ಸಭೆ ಆರಂಭವಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ‌.ರವಿಕುಮಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್, ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೈಸೂರು ಭಾಗದ ಶಾಸಕರು ಭಾಗವಹಿಸಿದ್ದಾರೆ.

ಕೋವಿಡ್ ಹಿನ್ನೆಲೆ ಈ ಬಾರಿ ದಸರಾ ಆಚರಣೆ ಹೇಗೆ ಮಾಡಬೇಕು, ಯಾವ ರೀತಿ ಇರಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಸಾರ್ವಜನಿಕ ಗಣೇಶೋತ್ಸವ ಹಾಗೂ ದಸರಾ ಆಚರಣೆ ಕುರಿತಂತೆ ತಾಂತ್ರಿಕ ಸಲಹಾ ಸಮಿತಿಯ ವರದಿ ಈಗಾಗಲೇ ಸಲ್ಲಿಕೆಯಾಗಿದೆ. ವರದಿಯಲ್ಲಿ ಕೆಲವು ಶಿಫಾರಸು ನೀಡಲಾಗಿದೆ. ಹಲವು ರೀತಿಯ ಸಲಹೆಗಳನ್ನು ಸಮಿತಿ ಸದಸ್ಯರು ನೀಡಿದ್ದಾರೆ. ಹಾಗಾಗಿ, ಆ ಸಲಹೆಗಳ ಆಧಾರದಲ್ಲಿ ಮೈಸೂರು ದಸರಾ ಉತ್ಸವ ಆಚರಣೆ ಕುರಿತು ನಿರ್ಧಾರವಾಗಲಿದೆ.

ದಸರಾ ಆಚರಣೆಗೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಮಾಡಿರುವ ಶಿಫಾರಸುಗಳೇನು?

• ಕೇರಳದಲ್ಲಿ ಓಣಂ ಆಚರಣೆ ಮಾಡಿದ ಮೇಲೆಯೇ ಕೊರೊನಾ ಸೋಂಕು ಹರಡುವಿಕೆ ಮತ್ತೆ ಹೆಚ್ಚಾಗಿದ್ದನ್ನು ಗಮನದಲ್ಲಿಟ್ಟುಕೊಂಡು ದಸರಾ ಎಚ್ಚರಿಕೆಯಿಂದ ಆಚರಿಸಬೇಕು.
• ಈ ನಿಟ್ಟಿನಲ್ಲಿ ಅನಗತ್ಯ ವಿಜೃಂಭಣೆಗೆ ಈ ಬಾರಿಯು ಕಡಿವಾಣ ಹಾಕುವುದು ಒಳ್ಳೆಯದು.
• ನಾಡಹಬ್ಬ ದಸರಾ ಆಚರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕು.
• ನವರಾತ್ರಿ ಹಬ್ಬ ಆಚರಣೆ ವೇಳೆ ಜನಜಂಗುಳಿ ಸೇರಿಸುವುದು ಬೇಡ.
• ಸಂಜೆಯ ವೇಳೆಯಲ್ಲಿ ನವರಾತ್ರಿಯಲ್ಲಿ ಆಯೋಜನೆಯಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಬೇಕು.
• ಮೈಸೂರು ಅರಸರು ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುವ ಖಾಸಗಿ ದರ್ಬಾರ್‌ಗೆ ಮಾತ್ರ ಅವಕಾಶ. ಅಂಬಾರಿಯ ಮೆರವಣಿಗೆಗೆ ನಿಗದಿತ ವ್ಯಕ್ತಿಗಳಿಗೆ ಮಾತ್ರ ಅವಕಾಶ ನೀಡಬೇಕು.
• ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಈ ಸಂದರ್ಭದಲ್ಲಿ ಬರುವ ಪ್ರವಾಸಿಗರಿಗೆ ಬೆಟ್ಟದಲ್ಲಿ ಸಮಯ ನಿಗದಿಪಡಿಸಿ, ದರ್ಶನಕ್ಕೆ ಅನುವು ಮಾಡಿಕೊಡಿ‌. ಸಾಧ್ಯವಾದ್ರೆ, ದಸರಾ ಆಚರಣೆಯ ಸಂದರ್ಭದಲ್ಲಿ ನವರಾತ್ರಿಯಲ್ಲಿ ಮೈಸೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಗೆ ರಾತ್ರಿ 8 ಘಂಟೆಯ ಬಳಿಕ ನೈಟ್ ಕರ್ಫ್ಯೂ ಜಾರಿಗೊಳಿಸಿದರೆ ಉತ್ತಮ.
• ದಸರಾ ಸಂದರ್ಭದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದು, ಅಂಗಡಿ-ಮುಂಗಟ್ಟು ಹಾಕಿಕೊಳ್ಳುತ್ತಾರೆ. ಇದನ್ನು ಕೂಡ ನಿರ್ಬಂಧಿಸಿ. ಫುಡ್ ಕ್ಯಾಂಪ್‌ಗಳನ್ನು ಬಂದ್ ಮಾಡಿಸಬೇಕು.

ಇದನ್ನೂ ಓದಿ: ಸಾರಿಗೆ ಇಲಾಖೆ ಆದಾಯ ಗಳಿಕೆಗೆ ಅಗತ್ಯ ಕ್ರಮ : ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.