ETV Bharat / state

ಏನ್ರಿ ಟೈಂ ಸೆನ್ಸ್​ ಇಲ್ಲವೇನ್ರಿ...ಸರ್​​ಎಂವಿ ಹೇಳಿದ್ದೇನು ಗೊತ್ತಾ ನಿಮ್ಗೆ? ಆಯೋಜಕರ ವಿರುದ್ಧ ಸಿಎಂ ಗರಂ

ಇಂಜಿನಿಯರ್ಸ್ ಡೇ ಹಾಗೂ ಸರ್​ ಎಂ ವಿಶ್ವೇಶ್ವರಯ್ಯ ಅವರ 161ನೇ ಜಯಂತಿ ಹಿನ್ನೆಲೆ ಬೆಂಗಳೂರಿನ ಕೆ ಆರ್ ಸರ್ಕಲ್ ಬಳಿಯ ಇಂಜಿನಿಯರಿಂಗ್ ಭವನ ಉದ್ಘಾಟಿಸಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ರು.

author img

By

Published : Sep 15, 2021, 12:39 PM IST

Updated : Sep 15, 2021, 12:56 PM IST

cm basavaraj bommai speech in engineers day celebration
ಇಂಜಿನಿಯರ್​ಗಳಿಗೆ ಸಿಎಂ ಕಿವಿಮಾತು

ಬೆಂಗಳೂರು: ಇಂಜಿನಿಯರ್ಸ್ ಡೇ ಹಿನ್ನೆಲೆ, ಕೆ ಆರ್ ಸರ್ಕಲ್ ಬಳಿಯ ಇಂಜಿನಿಯರಿಂಗ್ ಭವನ ಉದ್ಘಾಟಿಸಿ ಮಾತನಾಡಿದ ಸಿಎಂ, ಎಸ್ಟಿಮೇಟ್ ಹೆಚ್ಚು ಮಾಡಲು ಯೋಚಿಸುವ ಬದಲು, ನಮ್ಮ ಮನೆಯ ಕೆಲಸ ಎಂದು ತಿಳಿದು ಮಾಡ್ಬೇಕು ಎಂದು ಇಂಜಿನಿಯರುಗಳಿಗೆ ಕಿವಿ ಮಾತು ಹೇಳಿದರು.

ಇಂಜಿನಿಯರ್​ಗಳಿಗೆ ಸಿಎಂ ಕಿವಿಮಾತು

ಬೆಸ್ಕಾಂ ಸಿಬ್ಬಂದಿ ಕೈಯಿಂದ ಮಾಲಾರ್ಪಣೆ:

ಬಿಬಿಎಂಪಿಯಿಂದ ನವೀಕೃತಗೊಂಡ ಕೆ.ಆರ್ ಸರ್ಕಲ್, ಸರ್ ಎಂ ವಿ ವಿಶ್ವೇಶ್ವರಯ್ಯ ಚೌಕವನ್ನು ಸರ್ ಎಂ ವಿ ವಿಶ್ವೇಶ್ವರಯ್ಯ ಅವರ 161 ನೇ ಜನ್ಮದಿನಾಚರಣೆ ನಿಮಿತ್ತ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆಗೊಳಿಸಿದರು. ಸ್ವತಃ ಇಂಜಿನಿಯರ್ ಆಗಿರುವ ಬಸವರಾಜ್ ಬೊಮ್ಮಾಯಿ ಅವರು, ಬೆಸ್ಕಾಂ ಸಿಬ್ಬಂದಿ ಕೈಯಿಂದ ಮಾಲಾರ್ಪಣೆ ಮಾಡಿಸಿದರು.

ಇಂಜಿನಿಯರ್‌ಗಳು ಹೆಜ್ಜೆ ಗುರುತು ಮೂಡಿಸಬೇಕು, ಆ ರೀತಿಯಲ್ಲಿ ಕೆಲಸ ಮಾಡ್ಬೇಕು. ಎಸ್ಟೀಮೇಟ್ ಅಗತ್ಯಕ್ಕಿಂತ ಹೆಚ್ಚು ಯಾವ ರೀತಿ ಜಾಸ್ತಿ ಮಾಡ್ಬೇಕು, ಮೆಟಿರಿಯಲ್ ಹೇಗೆ ಜಾಸ್ತಿ ಮಾಡ್ಬೇಕು, ಕಾನೂನು ಬದಿಗಿಟ್ಟು ಹೇಗೆ ಕೆಲಸ ಮಾಡ್ಬೇಕು ಅನ್ನೋ ಪರಿಣಿತರೇ ನಮ್ಮ ನಡುವೆ ಇದ್ದಾರೆ.

ಅಂತವರ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದ್ರು. ವಿಶ್ವೇಶ್ವರಯ್ಯ ಅಂತಹವರು ನಮ್ಮ ರಾಜ್ಯದಲ್ಲಿ ಬಿಟ್ಟು ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಅವರು ನಮ್ಮ ಪ್ರೇರಣೆ. ಇವತ್ತು ಒಂದು ದಿನ ಕಾರ್ಯಕ್ರಮ ಮಾಡಿದ್ರೇ ಸಾಕಾಗುವುದಿಲ್ಲ, ಅವರ ಆದರ್ಶಗಳನ್ನ ಪಾಲಿಸಿದ್ರೆ ಮಾತ್ರ ಸಾರ್ಥಕ ಆಗುತ್ತೆ ಎಂದು ಭ್ರಷ್ಟ ಇಂಜಿನಿಯರ್​​ಗಳಿಗೆ ಮಾತಿನಲ್ಲೇ ಬೊಮ್ಮಾಯಿ ಛಾಟಿ ಬೀಸಿದರು.

ಆಯೋಜಕರ ಮೇಲೆ ಬೇಸರ:

ಸ್ವಾಗತ ಭಾಷಣ ನಡೆಯುತ್ತಿರುವಾಗಲೇ ಭಾಷಣ ಶುರು ಮಾಡಿದ ಸಿಎಂ, ಸೆಷನ್ ನಡೆಯುತ್ತಿದೆ ಹಾಗಾಗಿ ನಿಮ್ಮ ಕೆಲವು ಕಾರ್ಯಕ್ರಮಗಳನ್ನ ಮೊಟಕುಗೊಳಿಸ್ತೇನೆ. ಜೊತೆಗೆ ಸ್ವಲ್ಪ ಸಮಯ ಪ್ರಜ್ಞೆನೂ ಇರ್ಬೇಕು.

ವಿಶ್ವೇಶ್ವರಯ್ಯ ಅವರು ಹೇಳಿದ್ದು ಸಮಯ ಪ್ರಜ್ಞೆ ಬಗ್ಗೆನೇ. ಬೇರೆ ದೇಶಗಳಲ್ಲಿ 45 ನಿಮಿಷದಿಂದ 1 ಗಂಟೆಯಲ್ಲಿ ಕಾರ್ಯಕ್ರಮ ಮುಗಿಸ್ತಾರೆ. ಆದರೆ ಅನಗತ್ಯವಾಗಿ ಸಮಯ ವರ್ಥ್ಯ ಮಾಡೋದು ಸರಿಯಲ್ಲ ಎಂದು ಆಯೋಜಕರ ಮೇಲೆ ಬೇಸರ ವ್ಯಕ್ತಪಡಿಸಿದರು.

ವಿಶ್ವೇಶ್ವರಯ್ಯ ಹೆಸರಲ್ಲಿ ಯೋಜನೆಗೆ ಚಿಂತನೆ:

ವಿಶ್ವೇಶ್ವರಯ್ಯ ಹೆಸರಲ್ಲಿ ಏನಾದ್ರೂ ಯೋಜನೆ ಮಾಡ್ಬೇಕು ಅನ್ನೋ ಯೋಚನೆ ಇದೆ. ಆ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕಾರ್ಯಗತ ಗೊಳಿಸಲಾಗುತ್ತದೆ ಎಂದರು. ಈ ವೇಳೆ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್, ಸಚಿವ ಗೋವಿಂದ ಎಂ ಕಾರಜೋಳ, ಸಂಘದ ಅಧ್ಯಕ್ಷ ಪೀತಾಂಬರ ಸ್ವಾಮಿ ಭಾಗಿಯಾಗಿದ್ದರು.

ನಿಜವಾಗಿ ನಾಡು ಕಟ್ಟುವವರು ಶ್ರಮಿಕವರ್ಗ. ಹೊಲದಲ್ಲಿ ರೈತರು ಹಾಗೂ ಕಾರ್ಮಿಕರ ಶ್ರಮ ಇವರಿಬ್ಬರು ಅತ್ಯಂತ ಕೆಳಸ್ಥರದಲ್ಲಿ ದುಡಿಯುವ ವರ್ಗ. ಇವರು ನಮ್ಮ ಆರ್ಥಿಕತೆಯನ್ನು ಬೆಳವಣಿಗೆ ಮಾಡುವ ಮೂಲ ಪುರುಷರು ಹಾಗೂ ತಾಯಂದಿರು. ಇವರೆಲ್ಲರನ್ನು ವಿಶ್ವೇಶ್ವರಯ್ಯ ಅವರು ಪ್ರತಿನಿಧಿಸುತ್ತಾರೆ. ಕೆಆರ್​ಎಸ್​​ ಡ್ಯಾಂ ನಿಂದ ಹಿಡಿದು, ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕಾರ್ಖಾನೆಗಳು, ಮಹಿಳಾ ಮೀಸಲಾತಿ ಹೀಗೆ ಆ ಕಾಲದಲ್ಲೇ ಅತ್ಯಂತ ಪ್ರಗತಿಪರವಾಗಿ ಚಿಂತನೆ ಮಾಡಿದವರಿಗೆ ಗೌರವ ಸಲ್ಲಿಸುವ ದಿನ ಎಂದ್ರು.

ಇದನ್ನೂ ಓದಿ:ಇಂಜಿನಿಯರ್ಸ್ ಡೇ..: ಅಗ್ರಮಾನ್ಯ ತಂತ್ರಜ್ಞ ವಿಶ್ವೇಶ್ವರಯ್ಯ ಸ್ಮರಣೆ... ಶುಭಕೋರಿದ ಪಿಎಂ

ಲಾಠಿ ಚಾರ್ಜ್ ವಿಚಾರ:

ಇನ್ನು ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ವಿಚಾರವಾಗಿ ಸಿಎಂ ಪ್ರತಿಕ್ರಿಯೆ ನೀಡಿ, ಎನ್​ಇಪಿ ವಿಚಾರದಲ್ಲಿ ಸರ್ಕಾರ ಮುಕ್ತವಾಗಿ ಚರ್ಚೆ ಮಾಡಲು ಸಿದ್ಧವಿದೆ. ಇವತ್ತಿನ ಪ್ರಸ್ತುತ ಕಾಲಕ್ಕೆ ಶಿಕ್ಷಣ ಕೊಟ್ಟು ಉತ್ತಮ ಭವಿಷ್ಯ ಕೊಡುವ ಸದುದ್ದೇಶ ಇದೆ.

ಹಲವಾರು ಕ್ರಾಂತಿಕಾರಿ ಬದಲಾವಣೆಗಳಿವೆ. ಅದನ್ನೆಲ್ಲ ವಿದ್ಯಾರ್ಥಿಗಳಿಗೆ ತಿಳಿ ಹೇಳುತ್ತೇವೆ. ಈಗಾಗಲೇ ಹಲವಾರು ಕಡೆ ಚರ್ಚೆಗಳಾಗಿವೆ. ಪ್ರಾಥಮಿಕ ಹಾಗೂ ಸೆಕೆಂಡರಿ ಶಿಕ್ಷಣಕ್ಕೂ ಇದನ್ನು ಹೇಗೆ ಅನುಷ್ಠಾನಗೊಳಿಸುವುದು ಎಂಬ ಬಗ್ಗೆ ಕಮಿಟಿ ರಚನೆ ಮಾಡಬೇಕಿದೆ, ಇನ್ನೂ ತೀರ್ಮಾನ ಮಾಡಿಲ್ಲ. ಎಲ್ಲ ಚರ್ಚೆ ಮಾಡಲು ಸಿದ್ಧರಿದೇವೆ, ಯಾರೂ ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದರು.

Last Updated : Sep 15, 2021, 12:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.