ಬೆಂಗಳೂರು : ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧ ಕೆಪಿಸಿಸಿ ಸಾರಥಿ ಡಿ ಕೆ ಶಿವಕುಮಾರ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಲು ಸಿಎಂ ಬಸವರಾಜ ಬೊಮ್ಮಾಯಿ ನಿರಾಕರಿಸಿದ್ದಾರೆ.
ಪ್ರಭಾವಿ ಸಚಿವರ ಸಹೋದರನ ಹೆಸರು ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಕೇಳಿ ಬಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಿಎಂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ನೀವೇ ಆರೋಪ ಮಾಡ್ತಿದ್ದೀರಾ?. ನೀವೇ ಸಚಿವರ ಹೆಸರು ತೆಗೆದುಕೊಳ್ಳಿ. ಈ ಬಗ್ಗೆ ಆಮೇಲೆ ಮಾತನಾಡ್ತೀನಿ ಎಂದಷ್ಟೇ ಹೇಳಿ ವಿಧಾನಸೌಧದಿಂದ ತೆರಳಿದ್ದಾರೆ.
ಇದನ್ನೂ ಓದಿ: ಬದಲಾವಣೆ ಕಾಲ ಆರಂಭವಾಗಿದೆ.. ಸಬೂಬು ಕಾಲ ಮುಗಿದು ಹೋಗಿದೆ : ಸಿಎಂ ಬೊಮ್ಮಾಯಿ