ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸಂಜೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತುರ್ತು ಸಭೆ ಕರೆದಿದ್ದಾರೆ. 2022-23 ನೇ ಸಾಲಿನ ಬಜೆಟ್ ಅನುಷ್ಠಾನ, ಆಡಳಿತವನ್ನು ಚುರುಕುಗೊಳಿಸುವುದು, ಕಡತ ವಿಲೇವಾರಿ ಹಾಗೂ ಇನ್ನಿತರ ವಿಷಯಗಳ ಕುರಿತಂತೆ ಚರ್ಚಿಸಲು ಸಭೆ ನಡೆಸುತ್ತಿದ್ದಾರೆ.
ಸರ್ಕಾರದ ಎಲ್ಲ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆಯನ್ನು ಸಿಎಂ ಬೊಮ್ಮಾಯಿ ಮಾಡುತ್ತಿದ್ಧಾರೆ. ಸಭೆಯಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಗೋವಿಂದ ಕಾರಜೋಳ, ಉಮೇಶ ಕತ್ತಿ, ವಿ.ಸೋಮಣ್ಣ, ಜೆ.ಸಿ ಮಾಧುಸ್ವಾಮಿ, ಮುನಿರತ್ನ, ಎಂಟಿಬಿ ನಾಗರಾಜ, ಡಾ.ನಾರಾಯಣಗೌಡ, ಬೈರತಿ ಬಸವರಾಜ ಪಾಲ್ಗೊಂಡಿದ್ದಾರೆ.
ಅಲ್ಲದೇ, ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದಾರೆ. ವಿವಿಧ ವಿಷಯಗಳ ಬಗ್ಗೆ ಪ್ರಗತಿ ಮತ್ತು ಅನುಷ್ಠಾನದ ಮಾಹಿತಿಯನ್ನು ಸಿಎಂ ಪಡೆಯಲಿದ್ದಾರೆ.
ಇದನ್ನೂ ಓದಿ: ತಂದೆ ಮದ್ಯಪಾನ ವ್ಯಸನಿ; 'ಅಧ್ಯಯನಕ್ಕಾಗಿ ಸಹಾಯ ಮಾಡಿ'.. ಸಿಎಂ ಎದುರು ವಿದ್ಯಾರ್ಥಿಯ ಮನವಿ