ETV Bharat / state

ಒಲಿಂಪಿಕ್ಸ್​ಗೆ ಅಗತ್ಯವಿರುವ ತಯಾರಿಯಲ್ಲಿ ಸರ್ಕಾರದಿಂದ ಅಗತ್ಯ ಸಹಕಾರ: ಕ್ರೀಡಾಪಟುಗಳಿಗೆ ಸಿಎಂ ಅಭಯ - Khelo India Project sports

ರಾಜ್ಯದಲ್ಲಿ ಕ್ರೀಡೆಗಳಿಗೆ ಮಹತ್ವ ದೊರೆಯುತ್ತಿದೆ. ಕ್ರೀಡೆಗಳಲ್ಲಿ ಮಾಡುವ ಸಾಧನೆಯ ಹಿಂದೆ ಕಠಿಣ ಶ್ರಮವಿದೆ. ಅದನ್ನು ಗುರುತಿಸುವ ಕೆಲಸವನ್ನು ಸಮಾಜ ಮಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.

cm-basavaraj-bommai-assured-good-facilities-to-sports
ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಗೌರವಧನ ವಿತರಣೆ
author img

By

Published : Oct 11, 2021, 10:01 PM IST

ಬೆಂಗಳೂರು: ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಇದರ ಸೌಲಭ್ಯಗಳನ್ನು ಕ್ರೀಡಾಪಟುಗಳು ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ. ಅಲ್ಲದೇ, ಒಲಂಪಿಕ್ಸ್​ಗೆ ಅಗತ್ಯವಿರುವ ತಯಾರಿಯಲ್ಲಿ ನಮ್ಮ ಸರ್ಕಾರ ನಿಮ್ಮೊಂದಿಗೆ ಇದೆ ಎಂಬ ಭರವಸೆಯನ್ನೂ ನೀಡಿದ್ದಾರೆ.

ರಾಜಭವನದಲ್ಲಿ ಆಯೋಜಿಸಿದ್ದ ಟೋಕಿಯೊ ಒಲಂಪಿಕ್ಸ್ ಹಾಗೂ ಪ್ಯಾರಾ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಗೌರವಧನ ವಿತರಿಸಿ ಅವರು ಮಾತನಾಡಿದರು. ಒಲಿಂಪಿಕ್ಸ್​ಗೆ ತೆರಳಲು ಕ್ರೀಡಾ ಪಟುಗಳಿಗೆ ತಲಾ 10 ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತಿದೆ. ಒಲಿಂಪಿಕ್ಸ್​ಗೆ ಅಗತ್ಯವಿರುವ ತಯಾರಿಯಲ್ಲಿ ನಮ್ಮ ಸರ್ಕಾರ ನಿಮ್ಮೊಂದಿಗೆ ಇದೆ ಎಂದು ಹೇಳಿದರು.

ರಾಜ್ಯದಲ್ಲಿ ಕ್ರೀಡೆಗಳಿಗೆ ಮಹತ್ವ ದೊರೆಯುತ್ತಿದೆ. ಕ್ರೀಡೆಗಳಲ್ಲಿ ಮಾಡುವ ಸಾಧನೆಯ ಹಿಂದೆ ಕಠಿಣ ಶ್ರಮವಿದೆ. ಅದನ್ನು ಗುರುತಿಸುವ ಕೆಲಸವನ್ನು ಸಮಾಜ ಮಾಡಬೇಕು. ಪ್ರತಿ ಕ್ರೀಡಾಪಟು ಸಾಕಷ್ಟು ಪರಿಶ್ರಮ ಹಾಕಿರುತ್ತಾರೆ. ಭಾರತದ ಕ್ರೀಡಾಪಟುಗಳು ದೊಡ್ದ ಸಾಹಸಿಗಳು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಖೇಲೋ ಇಂಡಿಯಾ ಯೋಜನೆ ಮೂಲಕ ಕ್ರೀಡೆಗೆ ಹಿಂದೆಂದಿಗಿಂತಲೂ ಹೆಚ್ಚು ಪ್ರೋತ್ಸಾಹ ನೀಡಿದ್ದಾರೆ. ಪ್ಯಾರಾ ಒಲಿಂಪಿಕ್ಸ್​ನ ತನಕ ಮುಟ್ಟುವುದೇ ದೊಡ್ಡ ಸಾಧನೆ. ಕನ್ನಡಿಗರಾದ ಸುಹಾಸ್ ಬ್ಯಾಡ್ಮಿಂಟನ್​ನಲ್ಲಿ ಬೆಳ್ಳಿ ಗಳಿಸಿದ್ದಾರೆ. ಕಠಿಣ ಪರಿಸ್ಥಿತಿಯನ್ನು ಸ್ಫೂರ್ತಿದಾಯಕ ವಾಗಿಸಿಕೊಳ್ಳುವುದನ್ನು ಅವರಿಂದ ಕಲಿಯಬೇಕು. ಅದಿತಿ ಅಶೋಕ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುತ್ತಿರುವುದು ನಮ್ಮ ಹೆಮ್ಮೆ‌ ಎಂದು ಅವರು ಹೇಳಿದರು.

ಓದಿ: ವಿಶ್ವನಾಥ್​ ಒಬ್ಬ ಹುಚ್ಚ.. ’ನನ್ನ ವಿರುದ್ಧದ ಆರೋಪದ ತನಿಖೆಗೆ ಅವನೇ ತನಿಖಾಧಿಕಾರಿಯಾಗಲಿ’: ರಮೇಶ್ ಕುಮಾರ್ ಗರಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.