ಬೆಂಗಳೂರು : ನವೆಂಬರ್ 30 ರಂದು ಅಂದರೆ ಇಂದು ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಇದು 2020ರ ಕೊನೆಯ ಗ್ರಹಣವಾಗಿದೆ.
ಇದನ್ನ ಛಾಯಾ ಚಂದ್ರಗ್ರಹಣ ಅಂತಲೂ ಕರೆಯಲಾಗುತ್ತೆ. ಸೂರ್ಯ ಮತ್ತು ಚಂದ್ರನ ಮಧ್ಯೆ ಬರುವ ಖಗೋಳ ಪ್ರಕ್ರಿಯೆಯನ್ನ ಚಂದ್ರಗ್ರಹಣ ಅಂತಾ ಕರೆಯಲಾಗುತ್ತೆ. ಈ ಗ್ರಹಣಕ್ಕೆ ವೈಜ್ಞಾನಿಕವಾಗಿ ಪೆನಂಬ್ರಲ್ ಗ್ರಹಣ ಎನ್ನುತ್ತಾರೆ. ಈ ಗ್ರಹಣ ಭಾರತ ಸೇರಿದಂತೆ ಇನ್ನಿತರ ದೇಶಗಳಲ್ಲಿ ಗೋಚರಿಸಲ್ಲ. ಯಾಕೆಂದರೆ, ಗ್ರಹಣವಾಗುವ ಸಮಯ ಭಾರತ ಸೇರಿದಂತೆ ಇನ್ನಿತರ ದೇಶಗಳಲ್ಲಿ ಸೂರ್ಯೋದಯವಾಗಿರುತ್ತದೆ.
ಇದನ್ನೂ ಓದಿ : ನಾಳೆ ಭಾರತದಲ್ಲಿ ಚಂದ್ರಗ್ರಹಣ ಗೋಚರಿಸೋದಿಲ್ಲ.. ಯಾಕೆಂದು, ಪರಿಣಿತರೇ ಹೇಳ್ತಾರೆ ಕೇಳಿ..
ನೆಹರೂ ತಾರಾಲಯದ ಪ್ರಕಾರ ಇಂದು ಮಧ್ಯಾಹ್ನ 1ಗಂಟೆಗೆ ಆರಂಭವಾಗಿ ಸಂಜೆ 5.30ರ ವೇಳೆಗೆ ಚಂದ್ರಗ್ರಹಣ ಮುಕ್ತಾಯವಾಗಲಿದೆ. ಈ ಗ್ರಹಣದ ಸ್ಪರ್ಶ ಕಾಲ ಮಧ್ಯಾಹ್ನ 1.02ಕ್ಕೆ, ಮಧ್ಯಕಾಲ ಮಧ್ಯಾಹ್ನ 3.12ಕ್ಕೆ, ಮೋಕ್ಷ ಕಾಲ ಸಂಜೆ 5.20ಕ್ಕೆ ಮುಗಿಯಲಿದೆ.
ವಿಜ್ಞಾನದ ಪ್ರಕಾರ ಈ ಪೆನಂಬ್ರಲ್ ಗ್ರಹಣದಿಂದ ಯಾವುದೇ ಸಮಸ್ಯೆ ಅಥವಾ ಹಾನಿ ಇಲ್ಲ. ಗ್ರಹಣವು ಸ್ಪಷ್ಟವಾಗಿ ಗೋಚರಿಸುವುದು ಏಷ್ಯಾದ ಕೆಲವ ದೇಶಗಳು, ಆಸ್ಟ್ರೇಲಿಯಾ, ಉತ್ತರ ಹಾಗೂ ದಕ್ಷಿಣ ಅಮೆರಿಕಾದಲ್ಲಿ ಮಾತ್ರ ಎಂದು ನೆಹರೂ ತಾರಾಲಯ ತಿಳಿಸಿದೆ.