ETV Bharat / state

World Cancer Day 2022: 'ಕ್ಲೋಸ್ ದಿ ಕೇರ್ ಗ್ಯಾಪ್' ಈ ಬಾರಿ ವಿಶ್ವ ಕ್ಯಾನ್ಸರ್ ದಿನದ ಘೋಷ ವಾಕ್ಯ - Close the care gap World Cancer Day theme

ವಿಶ್ವ ಕ್ಯಾನ್ಸರ್​ ದಿನವನ್ನು 2000, ಫೆ.4 ರಂದು ಜಾರಿಗೆ ತರಲಾಯಿತು. ಪ್ಯಾರಿಸ್​ನಲ್ಲಿ ನಡೆದ ಅಂತಾರಾಷ್ಟ್ರೀಯ ಕ್ಯಾನ್ಸರ್​ ಕಾನ್ಫರೆನ್ಸ್​ನಲ್ಲಿ ಕ್ಯಾನ್ಸರ್​​ ಬಗ್ಗೆ ಅರಿವು ಮೂಡಿಸಲು ಅಂತಾರಾಷ್ಟ್ರೀಯ ಕ್ಯಾನ್ಸರ್​ ದಿನ ಆಚರಣೆಗೆ ಸಹಿ ಮಾಡಲಾಯಿತು. ಇದಕ್ಕೆ ಯುನೆಸ್ಕೋ, ಫ್ರೆಂಚ್​​ ಅಧ್ಯಕ್ಷ ಸೇರಿದಂತೆ ಜಗತ್ತಿನ ಗಣ್ಯರು ಸಹಿ ಹಾಕಿದ್ದರು. ಅಂದಿನಿಂದ ಫೆ.4ರಂದು ವಿಶ್ವ ಕ್ಯಾನ್ಸರ್​ ದಿನ ಎಂದು ಆಚರಿಸಲಾಗುತ್ತದೆ.

World Cancer Day 2022
ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
author img

By

Published : Feb 4, 2022, 7:27 AM IST

Updated : Feb 4, 2022, 7:33 AM IST

ಬೆಂಗಳೂರು: 'ವಿಶ್ವ ಕ್ಯಾನ್ಸರ್ ದಿನ'ವನ್ನು ಪ್ರತಿ ವರ್ಷ ಫೆಬ್ರವರಿ 4 ರಂದು ಆಚರಿಸಲಾಗುತ್ತದೆ. ಇದು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಒತ್ತು ನೀಡುತ್ತದೆ. 2022ರ ಕ್ಯಾನ್ಸರ್ ದಿನದ ಘೋಷ ವಾಕ್ಯ (ಥೀಮ್) 'ಕ್ಲೋಸ್ ದಿ ಕೇರ್ ಗ್ಯಾಪ್' (ಅರೈಕೆಯಲ್ಲಿರುವ ಅಂತರವನ್ನು ಕಡಿತಗೊಳಿಸಿ) ಎಂಬುದಾಗಿದೆ.

ಎಲ್ಲರಿಗೂ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆ ಹಾಗೂ ಎಲ್ಲರಿಗೂ ಕೈಗೆಟುಕುವಂತೆ ಸುಧಾರಣೆ ತರುವುದು ಈ ವರ್ಷದ ಅಭಿಯಾನದ ಉದ್ದೇಶವಾಗಿದೆ ಎಂದು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಕ್ಯಾನ್ಸರ್ ಸಂಶೋಧನೆ ಮತ್ತು ತರಬೇತಿ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.

ಜಾಗತಿಕವಾಗಿ ಕ್ಯಾನ್ಸರ್ ಹೊರೆ ಹೆಚ್ಚುತ್ತಿದ್ದು, 2030ರ ವೇಳೆಗೆ 27 ದಶಲಕ್ಷ ಜನರಿಗೆ ಕ್ಯಾನ್ಸರ್ ಬರಬಹುದು ಮತ್ತು ವರ್ಷಕ್ಕೆ 17 ದಶಲಕ್ಷ ಸಾವುಗಳು ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ಕಳೆದ 26 ವರ್ಷಗಳಲ್ಲಿ ಭಾರತದಲ್ಲಿ ಕ್ಯಾನ್ಸರ್‌ನ ರೋಗಿಗಳು ದ್ವಿಗುಣಗೊಂಡಿದ್ದಾರೆ.

ಭಾರತದಲ್ಲಿ 2020ರಲ್ಲಿ 37.5 ಲಕ್ಷಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ಕಂಡು ಬಂದಿದ್ದು, ದೇಶದಲ್ಲಿ ಅಂದಾಜು 14 ಲಕ್ಷದಷ್ಟು ರೋಗಿಗಳಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಸಾಂಕ್ರಾಮಿಕ ರೋಗದಲ್ಲಿ ಆಗಿರುವ ಬದಲಾವಣೆ ಪರಿಣಾಮ ಮತ್ತು ಜೀವಿತಾವಧಿಯಲ್ಲಿ ಆಗಿರುವ ಹೆಚ್ಚಳದ ಪರಿಣಾಮದಿಂದ ಕ್ಯಾನ್ಸರ್ ರೋಗದ ಹೊರೆ ತೀವ್ರವಾಗಿ ಏರುವ ನಿರೀಕ್ಷೆಯಿದೆ ಎಂದು ಹೇಳಿದೆ.

ಪ್ರಮುಖ ಕಾರಣಗಳೇನು?:

  1. ಆರಂಭಿಕ ರೋಗ ಪತ್ತೆಯಲ್ಲಿನ ಅವಕಾಶಗಳ ಕೊರತೆ
  2. ರೋಗ ನಿರ್ಣಯದ ಪರೀಕ್ಷೆಗಳು ಕೈಗೆಟಕದಿರುವುದು
  3. ಸುಧಾರಿತ ಆರಂಭಿಕ ಕ್ಯಾನ್ಸರ್ ತಪಾಸಣೆ ಕಾರ್ಯಕ್ರಮಗಳ ಕೊರತೆ ಇವುಗಳು ಕ್ಯಾನ್ಸರ್ ಏರಿಕೆಗೆ ಪ್ರಮುಖ ಕಾರಣಗಳಾಗಿವೆ ಎಂದು ಮಾಹಿತಿ ನೀಡಿದೆ.

ಸೋಂಕು ಸಂಬಂಧಿತ ಕ್ಯಾನ್ಸರ್‌ ಜನ ಜೀವನಕ್ಕೆ ಮಾರಕ: ಸೋಂಕು ಸಂಬಂಧಿತ ಕ್ಯಾನ್ಸರ್‌ ಜನ ಜೀವನಕ್ಕೆ ಮಾರಕವಾಗಿವೆ. ಪುರುಷರಲ್ಲಿ ಸಾಮಾನ್ಯವಾಗಿ ಕ್ಯಾನ್ಸರ್‌ಗೆ ತುತ್ತಾಗುವ ಅಂಗಗಳೆಂದರೆ ಶ್ವಾಸಕೋಶ, ಬಾಯಿ, ಹೊಟ್ಟೆ ಮತ್ತು ಅನ್ನನಾಳ, ಮಹಿಳೆಯರಲ್ಲಿ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಹೆಚ್ಚು ಎಂದು ತಿಳಿಸಿದೆ.

ತಂಬಾಕು ಕ್ಯಾನ್ಸರ್ ಪ್ರಮಾಣ ಹೆಚ್ಚು: ಎನ್.ಸಿ.ಡಿ.ಐ.ಆರ್ 2020ರ ಪ್ರಕಾರ, ತಂಬಾಕು ಸಂಬಂಧಿತ ಕ್ಯಾನ್ಸರ್ ಎಂಬುದು ಒಟ್ಟು ಕ್ಯಾನ್ಸರ್ ಹೊರೆಯ ಶೇ.27ರಷ್ಟು ಇದೆ. ಈಶಾನ್ಯ ರಾಜ್ಯಗಳಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ ಕಂಡು ಬಂದಿದೆ ಎಂದು ಹೇಳಿದೆ.

ಕ್ಯಾನ್ಸರ್‌ ತಡೆಗಟ್ಟಬಹುದು: ಶೇ.42 ರಷ್ಟು ಕ್ಯಾನ್ಸರ್ ಪ್ರಕರಣಗಳು ಮತ್ತು ಶೇ.45 ರಷ್ಟು ಕ್ಯಾನ್ಸರ್ ಸಾವುಗಳು ತಡೆಗಟ್ಟಬಹುದಾದ, ಸಂಭವನೀಯ ಅಪಾಯಕಾರಿ ಅಂಶಗಳಿಗೆ ಸಂಬಂಧಿಸಿದ ರೋಗ ಬಾರದಂತೆ ತಡೆಗಟ್ಟುವ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೆಲವು ಕ್ಯಾನ್ಸರ್‌ಗಳನ್ನು ತಡೆಗಟ್ಟಬಹುದು ಎಂದು ಪ್ರತಿಪಾದಿಸಲಾಗಿದೆ.

4 ಪ್ರಮುಖ ಕ್ಯಾನ್ಸರ್ ಪ್ರಕಾರಗಳು:

  • ಸ್ತನ ಕ್ಯಾನ್ಸರ್
  • ಗರ್ಭಗೊರಳಿನ ಕ್ಯಾನ್ಸರ್
  • ಬಾಯಿ ಕ್ಯಾನ್ಸರ್
  • ಶ್ವಾಸಕೋಶದ ಕ್ಯಾನ್ಸರ್ ಎಂಬ ನಾಲ್ಕು ಪ್ರಮುಖ ಕ್ಯಾನ್ಸರ್ ಪ್ರಕಾರಗಳಿವೆ.

ಭಾರತದಲ್ಲಿ, ಮೂರು ಪ್ರಮುಖ ಕ್ಯಾನ್ಸರ್‌ಗಳ ಪೈಕಿ ಬಾಯಿಯ ಕ್ಯಾನ್ಸರ್ ಸಹ ಒಂದಾಗಿದೆ. ಅಲ್ಲದೇ, ಪುರುಷರಲ್ಲಿನ ಎಲ್ಲ ರೀತಿಯ ಕ್ಯಾನ್ಸರ್‌ಗಳ ಪೈಕಿ ಇದು ಮೊದಲನೆಯದು ಮತ್ತು ಸ್ತ್ರೀಯರ ಕ್ಯಾನ್ಸರ್‌ಗಳಲ್ಲಿ ಪೈಕಿ ಇದು ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಲಾಗಿದೆ.

ಸ್ತನ ಕ್ಯಾನ್ಸರ್ ಸಾಮಾನ್ಯ: ಭಾರತದಲ್ಲಿ ರೋಗದ ಪ್ರಮಾಣ ಮತ್ತು ಮರಣದ ಸಂಖ್ಯೆ ಎರಡರಲ್ಲೂ, ಸ್ತನ ಕ್ಯಾನ್ಸರ್ ಪ್ರಸ್ತುತ ಭಾರತೀಯ ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ. ಕಿರಿಯ ವಯಸ್ಸಿನವರಲ್ಲಿ ಪ್ರಮಾಣದ ಅನುಗುಣವಾದ ಹರಡುವಿಕೆಯು ಜಾಗತಿಕ ಸರಾಸರಿಗಿಂತ ಹೆಚ್ಚಾಗಿದೆ. ಪತ್ತೆ ದರವು ಒಂದು ಲಕ್ಷ ಮಹಿಳೆಯರಿಗೆ ಸರಿ ಸುಮಾರು 25.8 ಆಗಿದೆ ಮತ್ತು 2026 ರಲ್ಲಿ ಒಂದು ಲಕ್ಷ ಮಹಿಳೆಯರ ಪೈಕಿ 35ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ.

ಪುರುಷರಲ್ಲಿ ಕ್ಯಾನ್ಸರ್‌: ರಾಜಧಾನಿ ಬೆಂಗಳೂರಿನ ಪುರುಷರಲ್ಲಿ ಶ್ವಾಸಕೋಶ, ಹೊಟ್ಟೆ, ಪ್ರಾಸ್ಟೇಟ್ ಮತ್ತು ಅನ್ನನಾಳ ಇವುಗಳು ಪ್ರಧಾನ ಕ್ಯಾನ್ಸರ್‌ಗಳಾಗಿದ್ದು, ಮಹಿಳೆಯರಲ್ಲಿ ಸ್ತನ, ಗರ್ಭಗೊರಳು, ಅಂಡಾಶಯ, ಕಾರ್ಪಸ್ ಯುಟೇರಿ ಕ್ಯಾನ್ಸರ್‌ಗಳ ಪ್ರಮುಖ ಅಂಗಗಳಾಗಿವೆ ಎಂದಿದೆ.

ಕ್ಯಾನ್ಸರ್ ನೋಂದಣಿ ವ್ಯವಸ್ಥೆ: ಬೆಂಗಳೂರಿನ ಜನಸಂಖ್ಯಾ ಆಧಾರಿತ ಕ್ಯಾನ್ಸರ್ ನೋಂದಣಿ (ಪಿಬಿಸಿಆರ್) ವ್ಯವಸ್ಥೆಯ ಮೂಲಕ, ಕರ್ನಾಟಕದಲ್ಲಿ ವಾರ್ಷಿಕವಾಗಿ ಸರಾಸರಿ ಶೇ. ಒಂದರಷ್ಟು ಪುರುಷರು ಮತ್ತು ಮಹಿಳೆಯರಲ್ಲಿ ಕ್ಯಾನ್ಸರ್ ಪ್ರಕರಣಗಳಲ್ಲಿ ಹೆಚ್ಚಳವನ್ನು ಗಮನಿಸಲಾಗಿದೆ. ಭಾರತದ ಇತರ ಮೆಟ್ರೋಪಾಲಿಟನ್ ನಗರಗಳಲ್ಲಿ ಇದೇ ರೀತಿಯ ಪ್ರವೃತ್ತಿಯನ್ನು ಗಮನಿಸಲಾಗಿದೆ.

ಬೆಂಗಳೂರಿನಲ್ಲಿ - ಪುರುಷರಲ್ಲಿ ಪ್ರಾಸ್ಟೇಟ್, ಕೊಲೊನ್, ಲಿವರ್, ಮೆದುಳು, ನಾಲಿಗೆ, ಶ್ವಾಸಕೋಶ, ಲಿಂಫೋಮಾ ಬಾಯಿ, ಅನ್ನನಾಳ, ಹೊಟ್ಟೆಯ ಕ್ಯಾನ್ಸರ್ ಗಣನೀಯವಾಗಿ ಹೆಚ್ಚುತ್ತಿದೆ. ಮಹಿಳೆಯರಲ್ಲಿ ಗರ್ಭಾಶಯದ ಮಧ್ಯಭಾಗ (ಕಾರ್ಪಸ್ ಯುಟೇರಿ), ಶ್ವಾಸಕೋಶ, ಸ್ತನ, ಕೊಲೊನ್, ಅಂಡಾಶಯ, ಥೈರಾಯ್ಡ್, ಹೊಟ್ಟೆಯ ಕ್ಯಾನ್ಸರ್‌ಗಳು ಗಣನೀಯವಾಗಿ ಹೆಚ್ಚುತ್ತಿವೆ ಮತ್ತು ಗರ್ಭಗೊರಳಿನ ಕ್ಯಾನ್ಸರ್‌ಗಳು ಬೆಂಗಳೂರಿನಲ್ಲಿ ಕಡಿಮೆಯಾಗುತ್ತಿವೆ ಎಂದು ಮಾಹಿತಿ ನೀಡಿದೆ.

ಮಕ್ಕಳ ಕ್ಯಾನ್ಸರ್‌ ಪ್ರಕರಣ ಸಹ ಹೆಚ್ಚಳ: ಮಕ್ಕಳ ಕ್ಯಾನ್ಸರ್‌ ಪ್ರಕರಣಗಳು ಸಹ ಹೆಚ್ಚುತ್ತಿರುವ ಪ್ರವೃತ್ತಿಯನ್ನು ತೋರುತ್ತಿವೆ. ಮುಖ್ಯವಾಗಿ ಲ್ಯುಕೇಮಿಯಾ ಮತ್ತು ಲಿಂಫೋಮಾಗಳು, ಮಕ್ಕಳ (0-14 ವರ್ಷಗಳು ಕ್ಯಾನ್ಸರ್‌ಗಳು ಎಲ್ಲ ಕ್ಯಾನ್ಸರ್‌ಗಳ ಪೈಕಿ ಶೇ.7.9ರಷ್ಟು ಪಾಲು ಹೊಂದಿವೆ. ಬೆಂಗಳೂರಿನಲ್ಲಿನ ಕ್ಯಾನ್ಸರ್ ಎಲ್ಲಾ ಕ್ಯಾನ್ಸರ್‌ಗಳಲ್ಲಿ ಮಕ್ಕಳ ಕ್ಯಾನ್ಸರ್ ಶೇಕಡಾ 2.0ರಷ್ಟಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ತಂಬಾಕು ಸೇವನೆ ಪ್ರಮುಖ ಕಾರಣ: ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಲು ತಂಬಾಕು ಸೇವನೆ ಪ್ರಮುಖ ಕಾರಣವಾಗಿದೆ. ಪುರುಷರಲ್ಲಿ 48.7 ಮತ್ತು 16.5ರಷ್ಟು ಮಹಿಳೆಯರಲ್ಲಿ ಕ್ಯಾನ್ಸರ್‌ಗಳು ತಂಬಾಕು ಸಂಬಂಧಿತ ಕ್ಯಾನ್ಸರ್‌ಗಳಾಗಿವೆ. ಕರ್ನಾಟಕದಲ್ಲಿ ಒಂದು ಲಕ್ಷ ಜನರ ಪೈಕಿ ಪುರುಷರಲ್ಲಿ 46 ಜನರು ಮತ್ತು ಮಹಿಳೆಯರಲ್ಲಿ 23.9 ಜನರ ಕ್ಯಾನ್ಸರ್‌ಗಳು ತಂಬಾಕು ಸಂಬಂಧಿತವಾಗಿವೆ.

ಇದನ್ನೂ ಓದಿ:ಮಾರುಕಟ್ಟೆಗೆ ಬಂತು ಮೂಗನ್ನು ಮಾತ್ರ ಮುಚ್ಚುವ ವಿಶಿಷ್ಟ ಮಾಸ್ಕ್: ಈ ‘ಕೋಸ್ಕ್’ ಬಗ್ಗೆ ಎಲ್ಲೆಡೆ ಚರ್ಚೆ..

ತಂಬಾಕು ಸೇವನೆಯನ್ನು ತ್ಯಜಿಸುವುದರಿಂದ ಕ್ಯಾನ್ಸರ್‌ನ ಹೊರೆ ಶೇ.25ರಷ್ಟು ಕಡಿಮೆಯಾಗುತ್ತದೆ. ಇದಕ್ಕೆ ಕಾರಣವಾಗುವ ಪ್ರಮುಖ ಅಂಶವೆಂದರೆ ತಂಬಾಕು ಮತ್ತು ಗುಟ್ಕಾ ಸೇವನೆಯು ಭಾರತದಲ್ಲಿ ಶೇ.27ದಷ್ಟು ಕ್ಯಾನ್ಸರ್‌ಗಳಿಗೆ ನೇರವಾಗಿ ಕಾರಣವಾಗಿದೆ ಎಂದು ಮಾಹಿತಿ ನೀಡಿದೆ.

ಕ್ಯಾನ್ಸರ್‌ ಹೆಚ್ಚಳಕ್ಕೆ ಕಾರಣಗಳು: ಕ್ಯಾನ್ಸರ್‌ಗಳ ಹೆಚ್ಚಳಕ್ಕೆ ತಂಬಾಕು ಸೇವನೆ ಅಷ್ಟೇ ಅಲ್ಲದೆ, ಅಲ್ಕೊಹಾಲ್, ಬೊಜ್ಜು, ದೈಹಿಕ ಪರಿಶ್ರಮರಹಿತ ಜೀವನಶೈಲಿ ಮತ್ತು ಪರಿಸರದ ಅಂಶಗಳೂ ಸಹ ಕಾರಣವಾಗುತ್ತಿವೆ. ಭಾರತೀಯ ಜನರ ಒಟ್ಟಾರೆ ಜೀವನ ಪರಿಸ್ಥಿತಿಗಳು ಸುಧಾರಿಸಿವೆ ಮತ್ತು ಇದರಿಂದಾಗಿ ಕುಳಿತು ಮಾಡುವ ಉದ್ಯೋಗಿಗಳ ಸಂಖ್ಯೆ ಹೆಚ್ಚಳ ಕಾರಣವಾಗಿದೆ.

ಅಲ್ಲದೇ, ಇದು ಹೆಚ್ಚಿನ ಪ್ರಮಾಣದ ಕ್ಯಾಲೋರಿ ಆಹಾರದ ಸೇವನೆಗೂ ಕಾರಣವಾಗಿದೆ. ಇದು ಕ್ಯಾನ್ಸರ್‌ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸುಮಾರು ಆರು ವಿಧದ ಕ್ಯಾನ್ಸರ್‌ಗಳು ಸ್ಕೂಲಕಾಯತೆಗೆ ಸಂಬಂಧಿಸಿವೆ ಮತ್ತು ಕ್ರಮೇಣ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಲ್ಲಿ ಸಮಸ್ಯೆಯು ಹೆಚ್ಚುತ್ತಿದೆ.

ಅವುಗಳೆಂದರೆ, ಕೊಲೊನ್ ಅಥವಾ ಗುದನಾಳ, ಮೇದೋಜೀರಕ ಗ್ರಂಥಿ, ಮೂತ್ರಪಿಂಡ, ಪಿತ್ತಕೋಶ, ಗರ್ಭಾಶಯ ಮತ್ತು ಮಲ್ಟಿಪಲ್ ಮೈಲೋಮಾದ ಕ್ಯಾನ್ಸರ್‌ಗಳಾಗಿವೆ. ಸ್ತನ ಮತ್ತು ಗರ್ಭಗೊರಳಿನ ಕ್ಯಾನ್ಸರ್‌ಗೆ ಪ್ರಮುಖ ಅಪಾಯಕಾರಿ ಅಂಶಗಳೆಂದರೆ ವಯಸ್ಸು, ಕಡಿಮೆ ನಾರಿನಂಶದ ಆಹಾರ, ದಡೂತಿ ದೇಹ, ತಡವಾದ ಮದುವೆ, ಕಡಿಮೆ ಸ್ತನ್ಯಪಾನ ಅವಧಿ, ಬಹು ಲೈಂಗಿಕ ಸಂಬಂಧಗಳು, ನೈರ್ಮಲ್ಯದ ಕೊರತೆ ಎಂದು ಹೇಳಿದೆ.

ಸ್ಮಿನಿಂಗ್ ವ್ಯವಸ್ಥೆ: ಸಮುದಾಯ ಮಟ್ಟದಲ್ಲಿ ಅಲ್ಲಲ್ಲಿ ಮಾತ್ರವೇ ಲಭ್ಯವಿರುವ ತಪಾಸಣೆಗಳ (ಸ್ಮಿನಿಂಗ್) ಬದಲಿಗೆ ಆರಂಭಿಕ ಪತ್ತೆ ಕೇಂದ್ರಗಳನ್ನು ಎಲ್ಲೆಡೆ ಮಾಡಿ ವ್ಯವಸ್ಥಿತ ತಪಾಸಣೆ ಮಾಡುವ ಮೂಲಕ ದೇಶದಲ್ಲಿ ಕ್ಯಾನ್ಸರ್ ಹೊರೆಯನ್ನು ಕಡಿಮೆ ಮಾಡಬಹುದು. ಜತೆಗೆ, ಹೆಚ್.ಪಿ.ವಿ.ಗೆ ಲಸಿಕೆ ಹಾಕುವುದರಿಂದಲೂ ಸಹ ಹೊರೆ ಕಡಿಮೆಯಾಗುತ್ತದೆ ಎಂದು ಸಂಸ್ಥೆ ಪ್ರಕಟಣೆ ಹೇಳಿದೆ.

ಸಾರ್ವಜನಿಕರಲ್ಲಿ ಜಾಗೃತಿ: ಕ್ಯಾನ್ಸರ್ ಮತ್ತು ಅದರ ಲಕ್ಷಣಗಳು ಮತ್ತು ತಂಬಾಕು ಬಳಕೆಯಿಂದ ಉಂಟಾಗುವ ಅಪಾಯಗಳು ಮತ್ತು ಕ್ಯಾನ್ಸರ್‌ಗೆ ಕಾರಣವಾಗುವ ಇತರ ಜೀವನಶೈಲಿಯ ಅಂಶಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಜವಾಬ್ದಾರಿಯಾಗಿದೆ ಎಂದಿದೆ.

ಕ್ಯಾನ್ಸರ್ ಪತ್ತೆ ಶಿಬಿರಗಳು: ರಾಜಾದ್ಯಂತ ಆರಂಭಿಕ ಕ್ಯಾನ್ಸರ್ ಪತ್ತೆ ಶಿಬಿರಗಳನ್ನು ನಡೆಸಲು ಅನುವಾಗುವಂತ ಅತ್ಯಾಧುನಿಕ ತಪಾಸಣಾ ಸಲಕರಣೆಗಳನ್ನು ಅಳವಡಿಸಿ ಸುಸಜ್ಜಿತಗೊಳಿಸಲಾದ ಸಂಚಾರಿ ಕ್ಯಾನ್ಸರ್‌ ತಪಾಸಣಾ ಬಸ್ ಮತ್ತು ಮ್ಯಾಮೋಗ್ರಫಿಗಾಗಿಯೇ ವಿಶೇಷವಾಗಿ ಮತ್ತೊಂದು ಪ್ರಸ್ತುತ ಬಳಕೆಯಲ್ಲಿವೆ. ಈ ಬಸ್‌ಗಳಲ್ಲಿ ಡಿಜಿಟಲ್ ಎಕ್ಸ್-ರೇ, ಸಿ.ಟಿ.ಸ್ಕ್ಯಾನ್, ಆಟೋ - ಆನಸರ್ ಮುಂತಾದ ತಪಾಸಣಾ ಸಲಕರಣೆಗಳನ್ನು ಅಳವಡಿಸಲಾಗಿದೆ.

ಅಲ್ಲದೇ, ಸ್ತ್ರೀರೋಗ ತಪಾಸಣೆಗಾಗಿರುವ ವಿಶೇಷ 'ಸೈನಿಕ್ ಟೇಬಲ್' ಒಂದನ್ನು ಸಹ ಅಳವಡಿಸಲಾಗಿದೆ. ಇಂತಹುದೇ ಬಸ್ ಒಂದನ್ನು ಗುಲಬರ್ಗಾ ಪೆರಿಫೆರಲ್ ಕ್ಯಾನ್ಸರ್‌ ಕೇಂದ್ರದಲ್ಲಿಯೂ ಸಜ್ಜುಗೊಳಿಸಿ ಬಳಸಲಾಗುತ್ತಿದೆ. ಮುಂದುವರೆದು ಇಂತಹ ಇನ್ನೂ ಮೂರು ಸಂಚಾರಿ ಕ್ಯಾನ್ಸರ್ ತಪಾಸಣಾ ಬಸ್‌ಗಳನ್ನು ಕರ್ನಾಟಕ ಸರ್ಕಾರ ಮಂಜೂರು ಮಾಡಿದೆ. ರಾಜ್ಯಾದ್ಯಂತ ಸ್ತನ ಕ್ಯಾನ್ಸರ್‌ನ ಆರಂಭಿಕ ಪತ್ತೆಗಾಗಿ, ಹತ್ತು ವೈದ್ಯಕೀಯ ಕಾಲೇಜುಗಳಿಗೆ ತಲಾ ಒಂದೊಂದು ಮ್ಯಾಮೋಗ್ರಫಿ ಯಂತ್ರಗಳನ್ನು ಸರ್ಕಾರ ಮಂಜೂರು ಮಾಡಿದೆ.

ಪೆರಿಫೆರಲ್ ಕ್ಯಾನ್ಸರ್ ಕೇಂದ್ರಗಳು: ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಅಡಿಯಲ್ಲಿ ಕರ್ನಾಟಕದಾದ್ಯಂತ ಪೆರಿಫೆರಲ್ ಕ್ಯಾನ್ಸರ್ ಕೇಂದ್ರಗಳನ್ನು ಆರಂಭಿಸಲಾಗುವುದು. ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಇಂತಹ ಕೇಂದ್ರಗಳನ್ನು ಆರಂಭಿಸಲು ಪ್ರಸ್ತಾವನೆಗಳು ಬಂದಿದ್ದು, ಆಯವ್ಯಯದಲ್ಲಿ ಅನುಮೋದನೆ ನೀಡಲಾಗಿದೆ. ತುಮಕೂರು ಕೇಂದ್ರದ ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿದೆ. ಹುಬ್ಬಳ್ಳಿಯಲ್ಲಿ ಕೂಡಾ ಇಂತಹ ಕೇಂದ್ರವನ್ನು ಆರಂಭಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಚಾಣಕ್ಯ, ತಿರುವಳ್ಳುವರ್​​ ಸಿದ್ಧಾಂತ!

Last Updated : Feb 4, 2022, 7:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.